ತಿರುಪತಿಯಿಂದ ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿ; ಕರ್ನಾಟಕದ ಇಬ್ಬರು ಸೇರಿ, ಮೂವರು ಮಹಿಳೆಯರ ದಾರುಣ ಸಾವು

ಮೃತರಲ್ಲಿ ಇಬ್ಬರು ಮಹಿಳೆಯರು ಕರ್ನಾಟಕದ ‌ನಂಗಿಲಿ ಪ್ರದೇಶದವರೆಂದು ಗುರುತು ಪತ್ತೆಯಾಗಿದೆ. ಮತ್ತೊಬ್ಬ ಮೃತ ಮಹಿಳೆ ಬಂಗಾರುಪಾಲೆಂನ ರಾಣಿ ಎಂದು ಹೇಳಲಾಗಿದೆ. ಇವರುಗಳು ತಿರುಮಲದ ವೆಂಕಟೇಶ್ವರನ ದರ್ಶನ‌ ಪಡೆದು ಹಿಂತಿರುಗುತ್ತಿದ್ದರು

ತಿರುಪತಿಯಿಂದ ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿ; ಕರ್ನಾಟಕದ ಇಬ್ಬರು ಸೇರಿ, ಮೂವರು ಮಹಿಳೆಯರ ದಾರುಣ ಸಾವು
ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು

Updated on: Dec 26, 2020 | 7:58 AM

ಆಂಧ್ರಪ್ರದೇಶ: ತಿರುಪತಿಯ ಚಂದ್ರಗಿರಿ‌ ಮಂಡಲದ ನೇಂಡ್ರಗುಂಟ‌ ಬಳಿ‌ ಭಾರಿ‌ ರಸ್ತೆ ಅವಗಡ ನಡೆದಿದ್ದು, ಈ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ ಇಬ್ಬರು ಮಹಿಳೆಯರು ಸೇರಿ ಮೂವರು ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ.

ಮೃತರಲ್ಲಿ ಇಬ್ಬರು ಮಹಿಳೆಯರು ಕರ್ನಾಟಕದ ‌ನಂಗಿಲಿ ಪ್ರದೇಶದವರೆಂದು ಗುರುತು ಪತ್ತೆಯಾಗಿದೆ. ಮತ್ತೊಬ್ಬ ಮೃತ ಮಹಿಳೆ ಬಂಗಾರುಪಾಲೆಂನ ರಾಣಿ ಎಂದು ಹೇಳಲಾಗಿದೆ. ಇವರುಗಳು ತಿರುಮಲದ ವೆಂಕಟೇಶ್ವರನ ದರ್ಶನ‌ ಪಡೆದು ಹಿಂತಿರುಗುತ್ತಿದ್ದ ವೇಳೆ, ಮೃತ ದುರ್ದೈವಿಗಳು ಚಲಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದ್ದು, ಬೆಂಗಳೂರು ಮೂಲದ ಕೆ.ಎ.05, MG 7438 ನಂಬರಿನ‌ ಕಾರು ಎಂಬುದು ಪತ್ತೆಯಾಗಿದೆ.