ಉತ್ತರಾಖಂಡ: 16 ವರ್ಷಗಳಲ್ಲಿ ಶೇ.314ರಷ್ಟು ಹೆಚ್ಚಳವಾದ ಹುಲಿಗಳ ಸಂಖ್ಯೆ

|

Updated on: Jan 07, 2024 | 9:07 AM

2006 ಮತ್ತು 2022 ರ ನಡುವೆ ಉತ್ತರಾಖಂಡದಲ್ಲಿ ಹುಲಿಗಳ ಸಂಖ್ಯೆ 314 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರಾಖಂಡದ ಮುಖ್ಯ ವನ್ಯಜೀವಿ ವಾರ್ಡನ್ ಸಮೀರ್ ಸಿನ್ಹಾ ಅವರು ಉತ್ತರಾಖಂಡದಲ್ಲಿ ಹುಲಿ ಸಂಖ್ಯೆಯ ಸಾಂದ್ರತೆಯು ವಿಶ್ವದಲ್ಲೇ ಅತಿ ಹೆಚ್ಚು ಎಂದು ಹೇಳಿದ್ದಾರೆ.

ಉತ್ತರಾಖಂಡ: 16 ವರ್ಷಗಳಲ್ಲಿ ಶೇ.314ರಷ್ಟು ಹೆಚ್ಚಳವಾದ ಹುಲಿಗಳ ಸಂಖ್ಯೆ
ಹುಲಿ
Image Credit source: Siasat.com
Follow us on

2006 ಮತ್ತು 2022 ರ ನಡುವೆ ಉತ್ತರಾಖಂಡದಲ್ಲಿ ಹುಲಿಗಳ ಸಂಖ್ಯೆ 314 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರಾಖಂಡದ ಮುಖ್ಯ ವನ್ಯಜೀವಿ ವಾರ್ಡನ್ ಸಮೀರ್ ಸಿನ್ಹಾ ಅವರು ಉತ್ತರಾಖಂಡದಲ್ಲಿ ಹುಲಿ ಸಂಖ್ಯೆಯ ಸಾಂದ್ರತೆಯು ವಿಶ್ವದಲ್ಲೇ ಅತಿ ಹೆಚ್ಚು ಎಂದು ಹೇಳಿದ್ದಾರೆ.

2006 ರಲ್ಲಿ 178 ರಷ್ಟಿದ್ದ ಹುಲಿಗಳ ಸಂಖ್ಯೆ 2022 ರಲ್ಲಿ 560 ಕ್ಕೆ ಏರಿತು, ಇದು ಶೇ. 314ರಷ್ಟು  ಏರಿಕೆಯನ್ನು ದಾಖಲಿಸಿದೆ ಎಂದು ಸಿನ್ಹಾ ಹೇಳಿದರು.  ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯು ಅವುಗಳ ವಾಸಸ್ಥಳವನ್ನು ಸುಧಾರಿಸಲು ಕೈಗೊಂಡ ಕ್ರಮಗಳಿಂದಾಗಿ ರಾಜ್ಯದಲ್ಲಿ ವನ್ಯಜೀವಿಗಳ ಸಂತತಿ ಹೆಚ್ಚಳವಾಗಿದೆ ಎಂದು ಹೇಳಿದರು.

ಹುಲಿ ದಾಳಿಯಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡವರ ಸಂಖ್ಯೆಯಲ್ಲಿ 2023 ರಲ್ಲಿ ಸ್ವಲ್ಪ ಹೆಚ್ಚಳವಾಗಿದೆ ಎಂದು ವಾರ್ಡನ್ ಹೇಳಿದ್ದಾರೆ. ಹುಲಿ ದಾಳಿಯಲ್ಲಿ 2021 ರಲ್ಲಿ ಇಬ್ಬರು, 2022 ರಲ್ಲಿ 16 ಮತ್ತು 2023 ರಲ್ಲಿ 17 ಜನರು ಸಾವನ್ನಪ್ಪಿದ್ದರೆ, 2021 ರಲ್ಲಿ ಎಂಟು ಜನರು, 2022 ರಲ್ಲಿ 10 ಮತ್ತು 2023 ರಲ್ಲಿ ಒಂಬತ್ತು ಜನರು ಹುಲಿಗಳಿಂದ ಗಾಯಗೊಂಡಿದ್ದಾರೆ ಎಂದು ಸಿನ್ಹಾ ಹೇಳಿದರು.

ಮತ್ತಷ್ಟು ಓದಿ: 10 ವರ್ಷಗಳಲ್ಲಿ ಶೇ.75ರಷ್ಟು ಹುಲಿಗಳ ಸಂಖ್ಯೆ ಏರಿಕೆ, ವನ್ಯಜೀವಿ ರಕ್ಷಣೆಗೆ ಪ್ರಧಾನಿ ಮೋದಿ ಕರೆ

ಹುಲಿಗಳಲ್ಲದೆ ಚಿರತೆಗಳು, ಆನೆಗಳು ಮತ್ತು ಹಾವುಗಳಂತಹ ಪ್ರಾಣಿಗಳ ಎನ್‌ಕೌಂಟರ್‌ನಲ್ಲಿ ಸತ್ತವರ ಒಟ್ಟು ಸಂಖ್ಯೆ 2021 ರಲ್ಲಿ 71, 2022 ರಲ್ಲಿ 82 ಮತ್ತು 2023 ರಲ್ಲಿ 66 ಎಂದು ಅವರು ಹೇಳಿದರು. ಮನುಷ್ಯ-ಪ್ರಾಣಿ ಸಂಘರ್ಷದಲ್ಲಿ ಗಾಯಗೊಂಡವರ ಸಂಖ್ಯೆ 2021 ರಲ್ಲಿ 361, 2022 ರಲ್ಲಿ 325 ಮತ್ತು 2023 ರಲ್ಲಿ 317 ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ