ತಿರುಮಲ-ತಿರುಪತಿ ಕಾಲುದಾರಿಯಲ್ಲಿ ಮತ್ತೊಂದು ಚಿರತೆ ಸೆರೆ

ತಿರುಮಲ ತಿರುಪತಿ(Tirupati)  ಕಾಲುದಾರಿಯಲ್ಲಿ ಮತ್ತೊಂದು ಚಿರತೆ(Leopard)ಯನ್ನು ಸೆರೆಹಿಡಿಯಲಾಗಿದೆ, ನರಸಿಂಹಸ್ವಾಮಿ ದೇವಸ್ಥಾನದ ಬಳಿ 5ನೇ ಚಿರತೆ ಸೆರೆ ಹಿಡಿಯಲಾಗಿದೆ. 4 ದಿನದಿಂದ ಟ್ರ್ಯಾಪ್ ಕ್ಯಾಮರಾ ಮೂಲಕ ಚಿರತೆ ಚಲನವಲನ ಪತ್ತೆ ಮಾಡಲಾಗುತ್ತಿತ್ತು, ಸಿಬ್ಬಂದಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಬೋನ್ ಇಟ್ಟಿದ್ದರು, ಅರಣ್ಯ ಸಿಬ್ಬಂದಿ ಗಂಡು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶದಲ್ಲಿ ಚಿರತೆ ಸಂಕುಲವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಅಲಿಪಿರಿ ಪಾದಚಾರಿ ಮಾರ್ಗದ ಉದ್ದಕ್ಕೂ ಬೋನ್‌ಗಳನ್ನು ಬಳಸಲಾಗಿತ್ತು.

ತಿರುಮಲ-ತಿರುಪತಿ ಕಾಲುದಾರಿಯಲ್ಲಿ ಮತ್ತೊಂದು ಚಿರತೆ ಸೆರೆ
ಚಿರತೆ-ಸಾಂದರ್ಭಿಕ ಚಿತ್ರ
Image Credit source: Drishti IAS

Updated on: Sep 07, 2023 | 8:30 AM

ತಿರುಮಲ ತಿರುಪತಿ(Tirupati)  ಕಾಲುದಾರಿಯಲ್ಲಿ ಮತ್ತೊಂದು ಚಿರತೆ(Leopard)ಯನ್ನು ಸೆರೆಹಿಡಿಯಲಾಗಿದೆ, ನರಸಿಂಹಸ್ವಾಮಿ ದೇವಸ್ಥಾನದ ಬಳಿ 5ನೇ ಚಿರತೆ ಸೆರೆ ಹಿಡಿಯಲಾಗಿದೆ. 4 ದಿನದಿಂದ ಟ್ರ್ಯಾಪ್ ಕ್ಯಾಮರಾ ಮೂಲಕ ಚಿರತೆ ಚಲನವಲನ ಪತ್ತೆ ಮಾಡಲಾಗುತ್ತಿತ್ತು, ಸಿಬ್ಬಂದಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಬೋನ್ ಇಟ್ಟಿದ್ದರು, ಅರಣ್ಯ ಸಿಬ್ಬಂದಿ ಗಂಡು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶದಲ್ಲಿ ಚಿರತೆ ಸಂಕುಲವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಅಲಿಪಿರಿ ಪಾದಚಾರಿ ಮಾರ್ಗದ ಉದ್ದಕ್ಕೂ ಬೋನ್‌ಗಳನ್ನು ಬಳಸಲಾಗಿತ್ತು.

ನಾಲ್ಕು ದಿನಗಳ ಹಿಂದೆಯಷ್ಟೇ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆಯ ಇರುವಿಕೆಯನ್ನು ಪತ್ತೆಹಚ್ಚಲಾಗಿತ್ತು. ದಕ್ಕೆ ಸ್ಪಂದಿಸಿದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿಗಳು ಕೂಡಲೇ ಸುತ್ತಮುತ್ತ ಬೋನನ್ನು ಅಳವಡಿಸಿ ರಾತ್ರಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಲಿಪಿರಿ-ತಿರುಮಲ ಕಾಲುದಾರಿಯಲ್ಲಿ ಕಳೆದ ಐದು ದಿನಗಳ ಹಿಂದಷ್ಟೇ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿತ್ತು. ಬಾಲಾಜಿಯ ದರ್ಶನಕ್ಕಾಗಿ ತಿರುಪತಿಯಲ್ಲಿದ್ದ ಯಾತ್ರಾರ್ಥಿಗಳಲ್ಲಿ ಆತಂಕ ಮೂಡಿಸಿತ್ತು.

ಮತ್ತಷ್ಟು ಓದಿ: ತಿರುಪತಿ: ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಒಂದು ತಿಂಗಳ ಬಳಿಕ ಅಲಿಪಿರಿ-ತಿರುಮಲ ಕಾಲು ಹಾದಿಯಲ್ಲಿ ಪ್ರತ್ಯಕ್ಷವಾದ ಕರಡಿ

ಪಾದಚಾರಿ ಮಾರ್ಗದ ಸಮೀಪ ನಾಲ್ಕು ಚಿರತೆಗಳನ್ನು ಸೆರೆ ಹಿಡಿದ ಅರಣ್ಯಾಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟ ಕೆಲವೇ ದಿನಗಳಲ್ಲಿ ಕಾಡು ಬೆಕ್ಕು ಪ್ರತ್ಯಕ್ಷವಾಗಿತ್ತು.

ಆಗಸ್ಟ್ 11 ರಂದು 6 ವರ್ಷದ ಬಾಲಕಿ ಲಕ್ಷಿತಾಳನ್ನು ಚಿರತೆ ಹತ್ಯೆ ಮಾಡಿತ್ತು ಮತ್ತು ಜೂನ್‌ನಲ್ಲಿ ಚಿರತೆ ಮರಿಯಿಂದ 3 ವರ್ಷದ ಇನ್ನೊಂದು ಬಾಲಕ ಗಾಯಗೊಂಡಿದ್ದ.

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾರ್ಯನಿರ್ವಹಣಾಧಿಕಾರಿ ಎ.ವಿ.ಧರ್ಮಾ ರೆಡ್ಡಿ ಅವರು ಭಕ್ತರ ಆತಂಕವನ್ನು ದೂರ ಮಾಡಿದ್ದು, ಅರಣ್ಯ ಇಲಾಖೆ ಮತ್ತು ಟಿಟಿಡಿ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಯಾತ್ರಾರ್ಥಿಗಳ ರಕ್ಷಣೆಗಾಗಿ ಮರದ ಕೋಲುಗಳನ್ನು ಸಹ ನೀಡಲಾಗುವುದು ಎಂದು ಹೇಳಿದ್ದರು.

ನಾವು 350 ಕ್ಕೂ ಹೆಚ್ಚು ಟ್ರ್ಯಾಪ್ ಕ್ಯಾಮೆರಾಗಳೊಂದಿಗೆ ಕಾಡು ಪ್ರಾಣಿಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಆದ್ದರಿಂದ ಗಾಬರಿಯಾಗುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದರು.

ಟ್ರ್ಯಾಪ್ ಕ್ಯಾಮೆರಾ ಸ್ಪಾಟಿಂಗ್‌ಗಳು ಪಾದಚಾರಿ ಮಾರ್ಗಗಳ ಬಳಿ ಕಾಡು ಪ್ರಾಣಿಗಳ ಸಂಖ್ಯೆಯನ್ನು ಎಣಿಕೆ ಮಾಡಲು ಸಹಾಯ ಮಾಡುತ್ತದೆ.
ಅರಣ್ಯ ಅಧಿಕಾರಿಗಳು ಇತ್ತೀಚೆಗೆ ಸಿಕ್ಕಿಬಿದ್ದ ಎರಡು ಚಿರತೆಗಳ ಪ್ರಯೋಗಾಲಯದ ವರದಿಗಳನ್ನು ನಿರೀಕ್ಷಿಸುತ್ತಿದ್ದಾರೆ, ಅದರಲ್ಲಿ ಒಂದು ಲಕ್ಷಿತಾಳನ್ನು ಕೊಂದಿದೆಯೇ ಎಂದು ನಿರ್ಣಯಿಸಲು ವರದಿ ಬಂದ ನಂತರ ಅವುಗಳನ್ನು ಮೃಗಾಲಯದಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಕಾಡಿಗೆ ಬಿಡಬೇಕೆ ಎಂಬುದನ್ನು ಅರಣ್ಯ ಇಲಾಖೆ ತೀರ್ಮಾನಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ