ಜುಲೈ 14 ರಿಂದ ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್‌ನಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ

ದೆಹಲಿ-ಎನ್‌ಸಿಆರ್ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಿಂದ ಹೊಸ ಸರಬರಾಜುಗಳನ್ನು ಸ್ವೀಕರಿಸುವ ನಿರೀಕ್ಷೆಯಿದೆ. ಆಗಸ್ಟ್‌ನಲ್ಲಿ ಮಧ್ಯಪ್ರದೇಶವನ್ನು ಹೊರತುಪಡಿಸಿ ನಾರಾಯಣಗಾಂವ್ ಮತ್ತು ಮಹಾರಾಷ್ಟ್ರದ ಔರಂಗಾಬಾದ್‌ನಿಂದ ಹೆಚ್ಚುವರಿ ಪೂರೈಕೆಗೆ ಸಾಕ್ಷಿಯಾಗಲಿದೆ ಎಂದು ಕೇಂದ್ರ ಹೇಳಿಕೆಯಲ್ಲಿ ತಿಳಿಸಿದೆ.

ಜುಲೈ 14 ರಿಂದ ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್‌ನಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ
ಟೊಮೆಟೊ

Updated on: Jul 12, 2023 | 4:46 PM

ದೆಹಲಿ: ದಿಲ್ಲಿ-ಎನ್‌ಸಿಆರ್‌ನಲ್ಲಿ ಟೊಮೆಟೊ (Tomatoes) ಬೆಲೆ ಇಳಿಕೆಯಾಗಲಿದ್ದು, ಈ ಪ್ರದೇಶಗಳ ನಿವಾಸಿಗಳಿಗೆ ಶುಕ್ರವಾರದಿಂದ ಟೊಮೆಟೊ ರಿಯಾಯಿತಿ ದರದಲ್ಲಿ ಸಿಗುವ ನಿರೀಕ್ಷೆಯಿದೆ. ಅಧಿಕೃತ ಹೇಳಿಕೆಯ ಪ್ರಕಾರ, ದೆಹಲಿ-ಎನ್‌ಸಿಆರ್‌ನ (Delhi-NCR) ಚಿಲ್ಲರೆ ಅಂಗಡಿಗಳಲ್ಲಿ ಟೊಮೆಟೊಗಳನ್ನು ರಿಯಾಯಿತಿ ದರದಲ್ಲಿ (Discounted price) ಮಾರಲಾಗುವುದು. ಕೇಂದ್ರ ಗುರುತಿಸಿರುವ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಟೊಮೆಟೊ ವಿತರಿಸಲಾಗುವುದು. ಟೊಮೆಟೊ ಬೆಲೆಯಲ್ಲಿನ ಸಂಪೂರ್ಣ ಹೆಚ್ಚಳದ ಆಧಾರದ ಮೇಲೆ ಈ ಪ್ರದೇಶಗಳನ್ನು ಗುರುತಿಸಲಾಗುತ್ತದೆ.

ನಾಟಿ ಮತ್ತು ಕೊಯ್ಲು ನಡುವಿನ ಋತುವಾದ ಜುಲೈ-ಆಗಸ್ಟ್ ತಿಂಗಳಲ್ಲಿ ಕಡಿಮೆ ಟೊಮೆಟೊ ಪೂರೈಕೆಯು ಬೆಲೆ ಏರಿಕೆಗೆ ಕಾರಣವಾಗಿದೆ. ಇದಲ್ಲದೆ, ದೇಶದ ಶೇಕಡಾ 60 ಕ್ಕಿಂತ ಹೆಚ್ಚು ಟೊಮೆಟೊಗಳನ್ನು ದಕ್ಷಿಣ ಭಾರತದಲ್ಲಿ ಅಂದರೆ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬೆಳೆಯಲಾಗುತ್ತದೆ. ಮಾನ್ಸೂನ್ ಋತುವಿನಲ್ಲಿ ಈ ಪ್ರದೇಶಗಳಿಂದ ಟೊಮೆಟೊಗಳನ್ನು ಸಾಗಿಸುವುದು ಒಂದು ಸವಾಲಾಗಿದೆ.

ದೆಹಲಿ-ಎನ್‌ಸಿಆರ್ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಿಂದ ಹೊಸ ಸರಬರಾಜುಗಳನ್ನು ಸ್ವೀಕರಿಸುವ ನಿರೀಕ್ಷೆಯಿದೆ. ಆಗಸ್ಟ್‌ನಲ್ಲಿ ಮಧ್ಯಪ್ರದೇಶವನ್ನು ಹೊರತುಪಡಿಸಿ ನಾರಾಯಣಗಾಂವ್ ಮತ್ತು ಮಹಾರಾಷ್ಟ್ರದ ಔರಂಗಾಬಾದ್‌ನಿಂದ ಹೆಚ್ಚುವರಿ ಪೂರೈಕೆಗೆ ಸಾಕ್ಷಿಯಾಗಲಿದೆ ಎಂದು ಕೇಂದ್ರ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ನಿಜಾಮಾಬಾದ್​​ನಲ್ಲಿರುವ ಮನೆಯೊಂದರಿಂದ ನಗದು, ಚಿನ್ನ ಜತೆ ಫ್ರಿಡ್ಜ್​​​ನಲ್ಲಿರಿಸಿದ ಟೊಮೆಟೊ ಕದ್ದ ಕಳ್ಳರು

ಜುಲೈ 11 ರ ಹೊತ್ತಿಗೆ ದೆಹಲಿಯಲ್ಲಿ ಟೊಮೆಟೊ ಪ್ರತಿ ಕೆಜಿಗೆ 138 ರೂ. ಆಗಿದ್ದು ನೋಯ್ಡಾದಲ್ಲಿ ಕೆಜಿಗೆ 120 ರೂ. ಆಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆಯ ಬೆಲೆ ನಿಗಾ ವಿಭಾಗದ ಅಂಕಿಅಂಶಗಳ ಪ್ರಕಾರ, ಒಂದು ಕಿಲೋ ಟೊಮೆಟೊ ಬೆಲೆ ಕೆಜಿಗೆ 118 ರೂ. ಆಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಹರ್ಯಾಣದ ಗುರುಗ್ರಾಮ್ ನಗರದಲ್ಲಿ ಟೊಮೆಟೊ ಬೆಲೆ ಕೆಜಿಗೆ 140 ರೂ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ