Tomato Price: ಬೆಲೆ ಕಡಿಮೆಯಾಗುವವರೆಗೂ ಟೊಮೆಟೊ ಬಾತ್​ ಮಾಡಲ್ಲ ಎಂದ ಹೋಟೆಲ್ ಮಾಲೀಕ, ಅಳಲು ತೋಡಿಕೊಂಡ ಅಡುಗೆ ಭಟ್ಟ

ಬೆಲೆ ಕಡಿಮೆಯಾಗುವವರೆಗೂ ಟೊಮೆಟೊ ಬಾತ್ ಮಾಡುವುದಿಲ್ಲ ಎಂದು ಮೈಸೂರಿನ ಹೋಟೆಲ್ ಮಾಲೀಕರು ಹೇಳಿದರೆ, ನಿರೀಕ್ಷೆಯಷ್ಟು ಟೊಮೆಟೊವನ್ನು ಮಾಲಿಕರು ತಂದು ಕೊಡುತ್ತಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಅಡುಗೆ ಭಟ್ಟ ಅವಿನಾಶ ಎನ್ನುವವರು ಅಳಲು ತೋಡಿಕೊಂಡಿದ್ದಾರೆ.

Tomato Price: ಬೆಲೆ ಕಡಿಮೆಯಾಗುವವರೆಗೂ ಟೊಮೆಟೊ ಬಾತ್​ ಮಾಡಲ್ಲ ಎಂದ ಹೋಟೆಲ್ ಮಾಲೀಕ, ಅಳಲು ತೋಡಿಕೊಂಡ ಅಡುಗೆ ಭಟ್ಟ
ಪ್ರಾತಿನಿಧಿಕ ಚಿತ್ರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jul 12, 2023 | 3:20 PM

ಚಿಕ್ಕಬಳ್ಳಾಪುರ: ಬೆಲೆ ಕಡಿಮೆಯಾಗುವವರೆಗೂ ಟೊಮೆಟೊ (tomato) ಬಾತ್ ಮಾಡುವುದಿಲ್ಲ ಎಂದು ಮೈಸೂರಿನ ಹೋಟೆಲ್ ಮಾಲೀಕರು ಹೇಳಿದರೆ, ನಿರೀಕ್ಷೆಯಷ್ಟು ಟೊಮೆಟೊವನ್ನು ಮಾಲಿಕರು ತಂದು ಕೊಡುತ್ತಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಅಡುಗೆ ಭಟ್ಟ ಅವಿನಾಶ ಎನ್ನುವವರು ಅಳಲು ತೋಡಿಕೊಂಡಿದ್ದಾರೆ. ನಾರ್ತ ಮೀಲ್ಸ್ , ಸೌತ್ ಮಿಲ್ಸ್, ಚಾಟ್ಸ್ ಸೇರಿದಂತೆ ಪ್ರತಿಯೊಂದಕ್ಕೂ ಟೊಮೆಟೊ ಬೇಕೆ ಬೇಕು. ಟೊಮ್ಯಾಟೋ ಇಲ್ಲದೆ ಹೋಟಲ್ ಅಡುಗೆಗಳು ರುಚಿ ಬರುತ್ತಿಲ್ಲ. ಗ್ರಾಹಕರು ಅಡುಗೆ ರುಚಿಯಿಲ್ಲ ಅಂತ ಬೈಯ್ದು ಹೊಗುತ್ತಿದ್ದಾರೆ ಎಂದಿದ್ದಾರೆ.

ಟೊಮೆಟೊ ಬೆಲೆ ಏರಿಕೆಯಿಂದ ತುಂಬಾ ಸಮಸ್ಯೆಯಾಗಿದೆ. ನಮ್ಮ ಹೋಟೆಲ್‌ನಲ್ಲಿ ಟೊಮೆಟೊ ಬಾತ್ ಫೇಮಸ್​ ಎಂದು ಟಿವಿ9ಗೆ ಹೋಟೆಲ್ ಮಾಲೀಕ ಮುರುಳಿ ಹೇಳಿದ್ದಾರೆ. ವಾರಕ್ಕೆ ಎರಡು ದಿನ ಟೊಮೆಟೊ ಬಾತ್ ಮಾಡುತ್ತೇವೆ. ಟೊಮೆಟೊ ಬಾತ್‌ಗೆ ಮಾತ್ರವಲ್ಲ ಸಾಂಬಾರ್ ತಿಳಿಸಾರು ಸೇರಿ ಬೇರೆಯದಕ್ಕೆ ಬಳಕೆ ಮಾಡಬೇಕು. ಗುಣಮಟ್ಟ ಕಡಿಮೆ ಮಾಡಲು ಸಾಧ್ಯವಿಲ್ಲ. ಅದೇ ಗುಣಮಟ್ಟದಲ್ಲಿ ಕೊಡಬೇಕು ಎಂದರು.

ಟೊಮೆಟೊ ಬದಲು ಹಣಸೆ ಹಣ್ಣು ಬಳಕೆ

ಟೊಮೆಟೊ ಬದಲು ಹಣಸೆ ಹಣ್ಣು ಬಳಸಿದರೆ ಅಡುಗೆ ತಿನ್ನುತ್ತಿಲ್ಲ. ಗಂಡ ಕೊಡುವ ಸಂಬಳ ತರಕಾರಿ ತರಲು ಸಾಕಾಗುತ್ತಿಲ್ಲ ಎಂದು ಟಿವಿ9 ಗೆ ಗೃಹಿಣಿ ನಾಗರತ್ನ ಅವರು ಹೇಳಿದ್ದಾರೆ. ಗಂಡ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಇದ್ದಾರೆ. ರೂಟ್ ಮೇಲೆ ಎಲ್ಲಿಯಾದರೂ ಕಡಿಮೆ ರೇಟ್​ಗೆ ಟೊಮೆಟೊ ಸಿಕ್ಕರೆ ತರಲು ಹೇಳಿದ್ದೇನೆ ಎಂದರು.

ಇದನ್ನೂ ಓದಿ: ಮತ್ತಷ್ಟು ದುಬಾರಿಯಾದ ಟೊಮ್ಯಾಟೋ; ಕೋಲಾರದಲ್ಲಿ 15 ಕೆಜಿ ಬಾಕ್ಸ್ 2200 ರೂ.

ಅಡುಗೆ ರುಚಿಯಾಗಿಲ್ಲ ಅಂತ ಗಂಡ ಮಕ್ಕಳು ಜಗಳ 

ಟೊಮೆಟೊ ದುಬಾರಿಯಾಗಿದ್ದರಿಂದ ಮನೆಯಲ್ಲಿ ಮಕ್ಕಳು ಗಂಡನ ಜೊತೆ ಜಗಳ ಆಗುತ್ತಿವೆ. ಕೆ.ಜಿ ಟೊಮೆಟೊ 150 ರೂಪಾಯಿ ಆಗಿದೆ. ಬೇರೆ ಕಡೆ ಇನ್ನೇಷ್ಟು ದುಬಾರಿ ಆಗಿದೆಯೋ ಗೊತ್ತಿಲ್ಲ ಎಂದು ಗೃಹಿಣಿ ಲಕ್ಷ್ಮಿದೇವಮ್ಮ ಹೇಳಿದರು. ಅಡುಗೆಗೆ ಟೊಮೆಟೊ ಹಾಕಿಲ್ಲವೆಂದ್ರು ರುಚಿ ಇರಲ್ಲ. ಒಂದು ಕೆ.ಜಿ ಟೊಮೆಟೊ ತೆಗೆದುಕೊಂಡರೆ 10-12 ಹಣ್ಣುಗಳು ಸಹ ಬರುತ್ತಿಲ್ಲ. ತಲಾ ಹಣ್ಣಿಗೆ 13 ರೂಪಾಯಿ ಆಗುತ್ತೆ. ಟೊಮೆಟೊ ದುಬಾರಿಯಿಂದ ಮನೆಯಲ್ಲಿ ಬೈಗುಳ ತಿನ್ನಬೇಕಾಗಿದೆ ಎಂದಿದ್ದಾರೆ.

ಟೊಮೆಟೊ ಬಾತ್​ ತಿಂದು 15 ದಿನ ಆಯ್ತು

ಇದು ಹೋಟೆಲ್ ಮಾಲೀಕರ ಗೋಳಾದರೆ, ಟೊಮೆಟೊ ಬಾತ್​ ತಿಂದು 15 ದಿನ ಆಯ್ತು. ನನಗೆ ಟೊಮೆಟೊ ಬಾತ್ ಫೇವರೇಟ್​ ಎಂದು ಟಿವಿ9 ಮೂಲಕ ಮೈಸೂರಿನ ಗ್ರಾಹಕರು ಅಳಲು ತೊಡಿಕೊಂಡಿದ್ದಾರೆ. ನಾವು ಮನೆಯಲ್ಲಿ ಸಾಂಬರ್ ಮಾಡುತ್ತಿಲ್ಲ. ಬದಲಿಗೆ ಹೋಟೆಲ್‌ನಿಂದ ಸಾಂಬರ್ ತರುತ್ತಿದ್ದೇವೆ. ಕಾಲು ಕೆಜಿ ಟೊಮೆಟೊಗೆ 25 ರೂ. ಕೊಡಬೇಕು. ಅದೇ ಹಣಕ್ಕೆ ಹೋಟೆಲ್‌ನಲ್ಲಿ ಸಾಂಬಾರ್ ತರುತ್ತಿದ್ದೇವೆ. ಟೊಮೆಟೊ ಬಾತ್ ಹೋಟೆಲ್‌ಗಳಲ್ಲೂ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bakrid 2023: ಟೊಮೆಟೊ ಬೆಲೆ ಎಷ್ಟಾದರೇನು ಹಬ್ಬವಂತೂ ಆಚರಿಸಲೇಬೇಕಲ್ಲ ಎಂದರೊಬ್ಬ ಮುಸ್ಲಿಂ ಗೃಹಣಿ!

ಪಿಜಿಯಲ್ಲಿ ಕೂಡ ಟೊಮೆಟೊ ಬಾತ್ ಮಾಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ನೋವು ತೋಡಿಕೊಂಡಿದ್ದಾರೆ. ನಾನು ಪಿಜಿಯಲ್ಲಿದ್ದೇನೆ. ನಮ್ಮಲ್ಲಿ ಟೊಮೆಟೊ ಬಾತ್ ಮಾಡುತ್ತಿಲ್ಲ. ಅಷ್ಟೇ ಅಲ್ಲ ತಿಳಿಸಾರು ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಪಿಜಿ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಇನ್ನು ಬೆಲೆ ಕಡಿಮೆಯಾಗುವವರೆಗೂ ಇದೇ ಪರಿಸ್ಥಿತಿ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:17 pm, Wed, 12 July 23