ಟೂಲ್​ಕಿಟ್ ತನಿಖೆ: ಕಾಂಗ್ರೆಸ್​ನ ಇಬ್ಬರು ನಾಯಕರಿಗೆ ನೋಟೀಸನ್ನು ಜಾರಿಮಾಡಿದ ದೆಹಲಿ ಪೊಲೀಸ್

|

Updated on: May 25, 2021 | 11:00 PM

ನವದೆಹಲಿ: ಕೊವಿಡ್ ಟೂಲ್​ಕಿಟ್​ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ವಿಷಯಕ್ಕೆ ಸಂಬಂಧಿಸಿದಂತೆ ದೂರೊಂದು ದಾಖಲಾದ ನಂತರ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರು-ರೋಹನ್ ಗುಪ್ತಾ ಮತ್ತು ಎಮ್​ ವಿ ರಾಜೀವ್​ ಗೌಡ ಅವರಿಗೆ ನೋಟೀಸನ್ನು ಜಾರಿ ಮಾಡಿ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದೆಯೆಂದು ಸದರಿ ಪ್ರಕರಣದ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರುವ ಅಧಿಕಾರಿಯೊಬ್ಬರು ಹೇಳಿರಉವ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ನೋಟೀಸುಗಳನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿರುವ ರೋಹನ್ ಗುಪ್ತಾ ಮತ್ತು ಪಕ್ಷದ ಬಾತ್ಮೀದಾರ ರಾಜೀವ್ ಗೌಡ […]

ಟೂಲ್​ಕಿಟ್ ತನಿಖೆ: ಕಾಂಗ್ರೆಸ್​ನ ಇಬ್ಬರು ನಾಯಕರಿಗೆ ನೋಟೀಸನ್ನು ಜಾರಿಮಾಡಿದ ದೆಹಲಿ ಪೊಲೀಸ್
ಪ್ರೊಫೆಸರ್ ಎಮ್​ ವಿ ರಾಜೀವ್ ಗೌಡ
Follow us on

ನವದೆಹಲಿ: ಕೊವಿಡ್ ಟೂಲ್​ಕಿಟ್​ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ವಿಷಯಕ್ಕೆ ಸಂಬಂಧಿಸಿದಂತೆ ದೂರೊಂದು ದಾಖಲಾದ ನಂತರ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರು-ರೋಹನ್ ಗುಪ್ತಾ ಮತ್ತು ಎಮ್​ ವಿ ರಾಜೀವ್​ ಗೌಡ ಅವರಿಗೆ ನೋಟೀಸನ್ನು ಜಾರಿ ಮಾಡಿ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿದೆಯೆಂದು ಸದರಿ ಪ್ರಕರಣದ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರುವ ಅಧಿಕಾರಿಯೊಬ್ಬರು ಹೇಳಿರಉವ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ನೋಟೀಸುಗಳನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿರುವ ರೋಹನ್ ಗುಪ್ತಾ ಮತ್ತು ಪಕ್ಷದ ಬಾತ್ಮೀದಾರ ರಾಜೀವ್ ಗೌಡ ಅವರಿಗೆ ಜಾರಿ ಮಾಡಿರುವುದನ್ನು ಅಧಿಕಾರಿಯು ಧೃಡೀಕರಿಸಿದ್ದಾರೆ. ದೂರಿಗೆ ಸಂಬಂಧಿಸಿದ ತನಿಖೆಯು ಪ್ರಾಥಮಿಕ ಹಂತದಲ್ಲಿರುವುದರಿಂದ ಇದುವರಗೆ ಎಫ್ಐಆರ್ ದಾಖಲಿಸಿಲ್ಲ. ಈಗ ಜಾರಿಗೊಳಿಸಿರುವ ನೊಟೀಸ್​ಗಳು ಹೊಸವೇನೂ ಅಲ್ಲವೆಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷದಿಂದ ದಾಖಲಾದ ದೂರಿನ ಆಧಾರದ ಮೇಲೆ ಈ ನೋಟೀಸುಗಳನ್ನು 8-9 ದಿನಗಳ ಹಿಂದೆಯೇ ಕಾಂಗ್ರೆಸ್ ಪಕ್ಷಕ್ಕೆ ಜಾರಿ ಮಾಡಲಾಗಿತ್ತು. ತನಿಖೆಯನ್ನು ಮುಂದಿವರೆಸಿಕೊಂಡು ಹೋಗಲು ಸಹಾಯವಾಗುವ ಹಾಗೆ ಅವರನ್ನು ಇದರಲ್ಲಿ ಭಾಗಿಯಾಗುವಂತೆ ಹೇಳಲಾಗಿದೆ,’ ಎಂದು ಅಧಿಕಾರಿ ಹೇಳಿದ್ದಾರೆ.

ಇದಕ್ಕೆ ಮೊದಲು, ಸೋಮವಾರದಂದು ದೆಹಲಿ ಪೊಲೀಸ್ ಅಧಿಕಾರಿಗಳು, ನವದೆಹಲಿ ಮತ್ತು ಗೊರೆಗಾಂವ್​ನಲ್ಲಿರುವ ಟ್ವಿಟ್ಟರ್​ ಇಂಡಿಯಾದ ಕಚೇರಿಗಳಲ್ಲಿ ಶೋಧ ನಡೆಸಿದರಲ್ಲದೆ, ಟ್ವಿಟ್ಟರ್ ಇಂಡಿಯಾಗೆ ನೋಟೀಸೊಂದನ್ನು ಜಾರಿ ಮಾಡಿ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿಗೆ ಮಸಿ ಬಳಿಯಲು ಕಾಂಗ್ರೆಸ್ ಪಕ್ಷ ಮಾಡಿದೆ ಆರೋಪಿಸಲಾಗಿರುವ ಟೂಲ್​ಕಿಟ್ ಮೇಲೆ ಬಿಜೆಪಿ ಪಕ್ಷದ ವಕ್ತಾರ ಸಂಬಿತ್ ಪಾತ್ರ ಅವರು ಮಾಡಿರುವ ಟ್ವಿಟ್​ಅನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಆರೋಪಿಸಲಾಗಿರುವ ‘ಮ್ಯಾನಿಪುಲೇಟೆಟ್ ಮಿಡಿಯಾ’ ಎಂದು ಯಾಕೆ ಟ್ಚಿಟ್ಟರ್ ಸಂಸ್ಥೆಯು ಟ್ಯಾಗ್ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ನೋಟೀಸೊಂದನ್ನು ಜಾರಿ ಮಾಡಿತು.

ದೆಹಲಿ ಪೊಲೀಸ್ ತಂಡ, ನಿಯಮದ ಪ್ರಕಾರ ನೋಟೀಸನ್ನು ಜಾರಿ ಮಾಡಲು ಟ್ವಿಟ್ಟರ್ ಇಂಡಿಯಾ ಕಚೇರಿಗೆ ಹೋಗಿತ್ತು. ‘ನೋಟೀಸನ್ನು ಯಾರಿಗೆ ಜಾರಿ ಮಾಡಬೇಕೆನ್ನುವ ಬಗ್ಗೆ ನಮಗೆ ಗೊಂದಲವಿದ್ದುದ್ದರಿಂದ ಅಲ್ಲಿಗೆ ಹೋಗುವುದು ಅತ್ಯವಶ್ಯಕವಾಗಿತ್ತು. ಟ್ವಿಟ್ಟರ್ ಇಂಡಿಯಾದ ಎಮ್​ಡಿ ಕಳಿಸಿರುವ ಉತ್ತರಗಳು ಸಂದೇಹಾಸ್ಪದವಾಗಿವೆ,’ ಎಂದು ದೆಹಲಿ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಚಿನ್ಮಯ್ ಬಿಸ್ವಾಲ್ ಹೇಳಿರುವರೆಂದು ಪಿಟಿಐ ವರದಿ ಮಾಡಿದೆ.

ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಟೂಲ್​ಕಿಟ್​ಗೆ ಸಂಬಂಧಿಸಿದಂತೆ ಕಳೆದೊಂದು ವಾರದಿಂದ ಕಾಲು ಕೆರೆದು ಜಗಳಕ್ಕಿಳಿದಿವೆ. ಕೊವಿಡ್​ ಪಿಡುಗಿನ ನಿರ್ವಹಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ಕ್ರಮಗಳನ್ನು ಖಂಡಿಸಿ, ಸರ್ಕಾರ ಮತ್ತು ಪ್ರಧಾನಿಗಳ ಹೆಸರಿಗೆ ಕಳಂಕ ತರುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಟೂಲ್​​ಕಿಟ್​ ಮೂಲಕ ಮಾಡುತ್ತಿದೆ ಎಂದು ಬಿಜೆಪಿ ಅರೋಪಿಸುತ್ತಿದೆ. ಇದಕ್ಕೆ ಉತ್ತರವಾಗಿ ಕಾಂಗ್ರೆಸ್ ಪಕ್ಷವು ಬಿಜೆಪಿ ಟ್ವೀಟ್​ ಮಾಡಿರುವ ಟೂಲ್​​ಕಿಟ್​ ಕೃತ್ರಿಮ ಎಂದು ಆಪಾದಿಸುತ್ತಿದೆ.

ಇದನ್ನೂ ಓದಿ: ಟೂಲ್​ಕಿಟ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಗೆ ನೊಟೀಸ್ ಜಾರಿ, ಬಿಜೆಪಿಯ ಸಂಬಿತ್​ ಪಾತ್ರಾ ವಿಚಾರಣೆ ಸಾಧ್ಯತೆ