
ಲಕ್ನೋ, ನವೆಂಬರ್ 18: ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಆಗ್ರಾ ಎಕ್ಸ್ಪ್ರೆಸ್ ವೇಯಲ್ಲಿ ಡಬಲ್ ಡೆಕ್ಕರ್ ಬಸ್(Bus) ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಂಭಿಕ ವರದಿಗಳ ಪ್ರಕಾರ, ಅರೌಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಪಲ್ಟಿಯಾಗಿದ್ದು, ಹಲವಾರು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿವೆ.
ತುರ್ತು ತಂಡಗಳು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಕಾನ್ಪುರಕ್ಕೆ ಸ್ಥಳಾಂತರಿಸಲಾಯಿತು.ದೆಹಲಿಯಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದಾಗ ಬಸ್ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬೆಳಗಿನ ಜಾವ ಈ ಅಪಘಾತ ಸಂಭವಿಸಿದ್ದು, ಆ ಸಮಯದಲ್ಲಿ ಅನೇಕ ಪ್ರಯಾಣಿಕರು ನಿದ್ರೆಯಲ್ಲಿದ್ದರು.
ಒಂದು ವಾರದ ಹಿಂದಷ್ಟೇ ಇಂಥದ್ದೇ ಘಟನೆ ನಡೆದಿತ್ತು
ದೆಹಲಿಯಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ ಮುಂಜಾನೆ ಉನ್ನಾವೋ ಜಿಲ್ಲೆಯ ಅಲಿಯಾರ್‌ಪುರ ಗ್ರಾಮದ ಬಳಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಪಲ್ಟಿಯಾಗಿತ್ತು. ಬಸ್ ಲಕ್ನೋಗೆ ತೆರಳುತ್ತಿದ್ದಾಗ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿತ್ತು. ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಸುಮಾರು 60 ಪ್ರಯಾಣಿಕರಿದ್ದರು.
ಮತ್ತಷ್ಟು ಓದಿ: Video: ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇನಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿ, 20 ಮಂದಿಗೆ ಗಂಭೀರ ಗಾಯ
ಅಪಘಾತ ಸಂಭವಿಸಿದ ಸ್ವಲ್ಪ ಸಮಯದ ನಂತರ ಹಸಂಗಂಜ್ ಪೊಲೀಸ್ ಠಾಣೆಗೆ ಅಪಘಾತದ ಬಗ್ಗೆ ಕರೆ ಬಂದಿತ್ತು ಎಂದು ಸಿಒ ಹಸಂಗಂಜ್ ಅರವಿಂದ್ ಕುಮಾರ್ ತಿಳಿಸಿದ್ದರು. ಹಸಂಗಂಜ್ ಪೊಲೀಸ್ ತಂಡ, ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ (ಯುಪಿಇಐಡಿಎ) ರಕ್ಷಣಾ ಘಟಕದೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿತ್ತು. ಬಸ್ ರಸ್ತೆಬದಿಯ ಕಂದಕಕ್ಕೆ ಬಿದ್ದಿದ್ದು, ತುರ್ತು ಬೆಳಕನ್ನು ಬಳಸಿಕೊಂಡು ರಕ್ಷಣಾ ಸಿಬ್ಬಂದಿ ಎಲ್ಲಾ ಪ್ರಯಾಣಿಕರು ಕತ್ತಲೆಯಲ್ಲಿ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದ್ದರು.
ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದರು. ಸ್ಥಳದಲ್ಲಿ ವ್ಯವಸ್ಥೆ ಮಾಡಲಾದ ಆಂಬ್ಯುಲೆನ್ಸ್‌ಗಳ ಮೂಲಕ ಅವರನ್ನು ಲಕ್ನೋದ ಲೋಕಬಂಧು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಯಾಣಿಕರು ಮುಖ್ಯವಾಗಿ ವಾರಣಾಸಿ, ಸುಲ್ತಾನ್‌ಪುರ, ಪ್ರತಾಪ್‌ಗಢ, ಅಂಬೇಡ್ಕರ್ ನಗರ, ಜೌನ್‌ಪುರ ಮತ್ತು ಹತ್ತಿರದ ಜಿಲ್ಲೆಗಳವರಾಗಿದ್ದರು. ಗಾಯಗೊಳ್ಳದೆ ಉಳಿದವರನ್ನು ಮತ್ತೊಂದು ಬಸ್‌ನಲ್ಲಿ ಅವರ ಸ್ಥಳಗಳಿಗೆ ಕಳುಹಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ