Riyana Raju: ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ತೃತೀಯಲಿಂಗಿ ಮಹಿಳೆ

ಇದೇ ಮೊದಲ ಬಾರಿ ತೃತೀಯಲಿಂಗಿ ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದಿದ್ದಾರೆ. ಅಯ್ಯಪ್ಪಸ್ವಾಮಿ ದರ್ಶನ ಪಡೆದ ಮೊದಲ ತೃತೀಯಲಿಂಗಿ ಮಹಿಳೆ ಎನ್ನುವ ಕೀರ್ತಿಗೆ ರಿಯಾನಾ ರಾಜು ಪಾತ್ರರಾಗಿದ್ದಾರೆ. ರಿಯಾನಾ ಹಲವು ವರ್ಷಗಳ ಹಿಂದೆ ಪುರುಷನಿಂದ ಹೆಣ್ಣಾಗಿ ಬದಲಾಗಿದ್ದಾರೆ. ರಿಯಾನಾ ಕೇರಳ ಸರ್ಕಾರದ ದೇವಸ್ವಂ ಬೋರ್ಡ್ ವೆಬ್‌ಸೈಟ್ ಮೂಲಕ ಪದೇ ಪದೇ ಅರ್ಜಿ ಸಲ್ಲಿಸುತ್ತಲೇ ಇದ್ದರು. ಆದರೂ ಅನುಮತಿ ಸಿಕ್ಕಿರಲಿಲ್ಲ.

Riyana Raju: ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ತೃತೀಯಲಿಂಗಿ ಮಹಿಳೆ

Updated on: Jan 10, 2024 | 10:11 AM

ಇದೇ ಮೊದಲ ಬಾರಿ ತೃತೀಯಲಿಂಗಿ ಮಹಿಳೆಯೊಬ್ಬರು ಶಬರಿಮಲೆ(Sabarimala) ಅಯ್ಯಪ್ಪಸ್ವಾಮಿ(Ayyappa Swamy) ದರ್ಶನ ಪಡೆದಿದ್ದಾರೆ. ಅಯ್ಯಪ್ಪಸ್ವಾಮಿ ದರ್ಶನ ಪಡೆದ ಮೊದಲ ತೃತೀಯಲಿಂಗಿ ಮಹಿಳೆ ಎನ್ನುವ ಕೀರ್ತಿಗೆ ರಿಯಾನಾ ರಾಜು ಪಾತ್ರರಾಗಿದ್ದಾರೆ. ರಿಯಾನಾ ಹಲವು ವರ್ಷಗಳ ಹಿಂದೆ ಪುರುಷನಿಂದ ಹೆಣ್ಣಾಗಿ ಬದಲಾಗಿದ್ದಾರೆ. ರಿಯಾನಾ ಕೇರಳ ಸರ್ಕಾರದ ದೇವಸ್ವಂ ಬೋರ್ಡ್ ವೆಬ್‌ಸೈಟ್ ಮೂಲಕ ಪದೇ ಪದೇ ಅರ್ಜಿ ಸಲ್ಲಿಸುತ್ತಲೇ ಇದ್ದರು. ಆದರೂ ಅನುಮತಿ ಸಿಕ್ಕಿರಲಿಲ್ಲ.

ಆದರೆ ಶಬರಿಮಲೆಗೆ ಪುರುಷರು, ಅಪ್ರಾಪ್ತರಯ, ಮಹಿಳೆಯರು ವಯಸ್ಕರು ಮಾತ್ರ ಪ್ರವೇಶಿಸಲು ಅನುಮತಿ ಇತ್ತು. ಆದರೆ ಸತತ ಪ್ರಯತ್ನದ ಫಲವಾಗಿ ರಿಯಾನಾ ಅವರು ಶಬರಿಮಲೆಗೆ ತೆರಳಲು ಅನುಮತಿ ಪಡೆದು ದರ್ಶನ ಪೂರ್ಣಗೊಳಿಸಿದ್ದಾರೆ.

ನನ್ನ ಮನೆಯವರು ಈ ವಿಚಾರವಾಗಿ ಚಿಂತಿಸಿದ್ದರು, ಜನವರಿ 4 ರಂದು ಬೆಳಗ್ಗೆ ನನ್ನ ಪ್ರಯಾಣ ಆರಂಭಿಸಿದೆ ಮತ್ತು ಜನವರಿ 5 ರಂದು ಸಂಜೆ ದರ್ಶನ ಮಾಡಿದೆ. ನಾನು ಸುರಕ್ಷಿತವಾಗಿದ್ದು ಮನೆಗೆ ಮರಳುತ್ತಿದ್ದೇನೆ ಎಂದು ಕರೆ ಮಾಡಿ ತಿಳಿಸಿದ್ದಾಗಿ ಹೇಳಿದ್ದಾರೆ.

ಮತ್ತಷ್ಟು ಓದಿ: ಅಯ್ಯಪ್ಪ ವ್ರತಧಾರಿಗಳಿಗೆ ಮಸೀದಿಯಲ್ಲಿ ಪೂಜೆ ಮಾಡಲು, ತಂಗಲು ಅವಕಾಶ ಕೊಟ್ಟು ಭಾವೈಕ್ಯತೆ ಮೆರೆದ ಧರ್ಮಗುರು

ರಿಯಾನಾ ಮಹಿಳೆಯ ಬಟ್ಟೆ ತೊಟ್ಟಿದ್ದಕ್ಕಾಗಿ ಅಲ್ಲಿ ಭಕ್ತರು ಹಾಗೂ ಅರ್ಚಕರಿಂದ ನಿಂದನೆಗೆ ಒಳಗಾಗಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಾನು ಪುರುಷನಿಂದ ಹೆಣ್ಣಾಗಿ ಬದಲಾಗಿರುವವಳು, ಮಕ್ಕಳನ್ನು ಹೆರಲು ಸಾಧ್ಯವಿಲ್ಲ, ಹೀಗಾಗಿ ದರ್ಶನ ಪಡೆಯಬಹುದು ಎಂದು ವಿವರಿಸಿದ್ದಾರೆ. ಈ ದೇವಾಲಯ ಭೇಟಿಯು ತೃತೀಯಲಿಂಗಿ ಮಹಿಳೆಯರ ಹಕ್ಕುಗಳನ್ನು ಜನರಿಗೆ ತಿಳಿಸಲು ಅವಕಾಶ ಮಾಡಿಕೊಟ್ಟಿತು ಎಂದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:11 am, Wed, 10 January 24

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us