ನವದೆಹಲಿ: ಶಿವಸೇನೆ ಚಿಹ್ನೆಗೆ ಕೇಂದ್ರ ಚುನಾವಣಾ ಆಯೋಗ ತಡೆ ಹಿಡಿದಿರುವುದಿರಂದ ಉದ್ಧವ್ ಠಾಕ್ರೆ (Uddhav Thackeray) ಬಣ ಹೊಸ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡಿದೆ.
ತ್ರಿಶೂಲ, ಉದಯಿಸುವ ಸೂರ್ಯನ ಚಿಹ್ನೆ (Trishul, ‘Rising Sun) ಆಯ್ಕೆಮಾಡಿಕೊಂಡ ಉದ್ಧವ್ ಠಾಕ್ರೆ, ಅದನ್ನು ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಶಿವಸೇನೆ ಚಿಹ್ನೆಗೆ ತಡೆ; ಹೊಸ ಚಿಹ್ನೆ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ
‘Trishul’, ‘Rising Sun’: Thackeray faction submits symbol options after EC freezes Shiv Sena’s ‘bow and arrow’ symbol
Read @ANI Story | https://t.co/tmA8Eo3YRz#Shivsena #ShivsenaElectionSymbol #UddhavThackarey #ElectionCommissionOfIndia pic.twitter.com/8EISlz5MsD
— ANI Digital (@ani_digital) October 9, 2022
ಉದ್ಧವ್ ಠಾಕ್ರೆ (Uddhav Thackeray) ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde) ಬಣದ ನಡುವೆ ಬಿಲ್ಲು, ಬಾಣದ ಚಿಹ್ನೆಗಾಗಿ ದೊಡ್ಡ ಮಟ್ಟದಲ್ಲಿ ವಿವಾದವಾಗಿತ್ತು.
ಈ ಬಗ್ಗೆ ಚುನಾವಣಾ ಆಯೋಗಕ್ಕೆ ಎರಡೂ ಬಣಗಳು ಅರ್ಜಿ ಸಲ್ಲಿಸಿದ್ದವು. ಆದ್ರೆ, ಬಿಲ್ಲು, ಬಾಣ ಚಿಹ್ನೆಯನ್ನು ಇಬ್ಬರಿಗೂ ನೀಡದೇ ಅದಕ್ಕೆ ತಡೆ ನೀಡಿತ್ತು. ಅಲ್ಲದೇ ಹೊಸ ಚಿಹ್ನೆ ಆಯ್ಕೆ ಮಾಡುವಂತೆ ಏಕನಾಥ್ ಶಿಂಧೆ ಹಾಗೂ ಉದ್ಧವ್ ಠಾಕ್ರೆಗೆ ಸೂಚನೆ ನೀಡಿತ್ತು. ಅದರಂತೆ ಇದೀಗ ಉದ್ಧವ್ ಠಾಕ್ರೆ ತ್ರಿಶೂಲ, ಉದಯಿಸುವ ಸೂರ್ಯನ ಚಿಹ್ನೆ ಆಯ್ಕೆಮಾಡಿಕೊಂಡಿದ್ದಾರೆ.
ನವೆಂಬರ್ 3 ರಂದು ಅಂಧೇರಿ ಪೂರ್ವ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಅಲ್ಲಿ ದಿವಂಗತ ಶಾಸಕ ರಮೇಶ್ ಅವರ ಪತ್ನಿ ರುತುತಾ ಅವರನ್ನು ಕಣಕ್ಕೆ ಇಳಿಸಲು ಉದ್ಧವ್ ಬಣ ನಿರ್ಧರಿಸಿದೆ. ಹೀಗಾಗಿ ಉದ್ಧವ್ ಬಣಕ್ಕೆ ಚಿಹ್ನೆ ನೀಡುವುದನ್ನು ತಪ್ಪಿಸಲು ಆಯೋಗಕ್ಕೆ ಶಿಂಧೆ ಬಣ ಮನವಿ ಸಲ್ಲಿಸಿತ್ತು.
ಹೆಸರು, ಚಿಹ್ನೆಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿರುವ ಚುನಾವಣಾ ಆಯೋಗ, ಶೀಘ್ರ ನಡೆಯಲಿರುವ ಪೂರ್ವ ಅಂಧೇರಿ (East Andheri) ಉಪಚುನಾವಣೆಯಲ್ಲಿ (By Election) ಇವರೆಡನ್ನೂ ಬಳಸುಂತಿಲ್ಲ ಎಂದು ಶಿಂಧೆ ಹಾಗೂ ಉದ್ಧವ್ ಬಣಕ್ಕೆ ಸೂಚಿಸಿತ್ತು.
Published On - 6:26 pm, Sun, 9 October 22