ದೆಹಲಿ ಫೆಬ್ರುವರಿ 08: ಮತ್ತೊಮ್ಮೆ ಸುಳ್ಳು ಬಯಲಾಗಿದೆ, ಸತ್ಯಕ್ಕೆ ಜಯವಾಗಿದೆ. ರಾಹುಲ್ ಗಾಂಧಿ (Rahul Gandhi) ನಾಚಿಕೆಯಿಲ್ಲದೆ ಸುಳ್ಳನ್ನು ಹರಡುತ್ತಾರೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಒಬಿಸಿ (OBC) ಜಾತಿಯಲ್ಲಿ ಹುಟ್ಟಿಲ್ಲ ಮತ್ತು ಅವರು ಗುಜರಾತ್ ಮುಖ್ಯಮಂತ್ರಿಯಾದ ನಂತರ ಅವರ ಜಾತಿಯನ್ನು ಒಬಿಸಿ ಎಂದು ಸೂಚಿಸಿದರು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಆದರೆ ನಿಜ ಸಂಗತಿ ಏನೆಂದರೆ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗುವ ಎರಡು ವರ್ಷಗಳ ಮೊದಲು ಅಕ್ಟೋಬರ್ 27, 1999 ರಂದು ಅವರ ಜಾತಿಗೆ ಒಬಿಸಿ ಸ್ಥಾನಮಾನವನ್ನು ನೀಡಲಾಯಿತು. ಕಾಂಗ್ರೆಸ್ ಪಕ್ಷ ಒಬಿಸಿ ಸಮುದಾಯವನ್ನು ಮತ್ತೊಮ್ಮೆ ಅವಮಾನಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಬಿಸಿಗಳು ತಕ್ಕ ಪಾಠ ಕಲಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ (Pralhad joshi) ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಡಿಶಾದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಗುರುವಾರ ಸಾರ್ವಜನಿಕ ರ್ಯಾಲಿಯನ್ನುದ್ದೇಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಒಬಿಸಿ ವರ್ಗದಲ್ಲಿ ಹುಟ್ಟಿಲ್ಲ, ಅವರು ಸಮುದಾಯಕ್ಕೆ 2000 ರಲ್ಲಿ ಬಿಜೆಪಿ ಒಬಿಸಿ ಟ್ಯಾಗ್ ನೀಡಿತು. ಅವರು ಜನರಲ್ ಕೆಟಗರಿಯಲ್ಲಿ ಜನಿಸಿದರು. ಅವರು ಒಬಿಸಿಯಲ್ಲಿ ಹುಟ್ಟಿಲ್ಲ, ಜನರಲ್ ಕೆಟಗರಿಯ ಜಾತಿಯಲ್ಲಿ ಜನಿಸಿದ ಕಾರಣ ಅವರು ತಮ್ಮ ಇಡೀ ಜೀವನದಲ್ಲಿ ಜಾತಿ ಗಣತಿಯನ್ನು ನಡೆಸಲು ಬಿಡುವುದಿಲ್ಲ ಎಂದಿದ್ದಾರೆ.
Truth prevails, Lies crumble!!
Once again, @RahulGandhi shamelessly peddles falsehoods, this time claiming PM @narendramodi wasn’t born in the OBC caste and he got his caste notified as an OBC after he became the Chief minister of Gujarat.
The truth: Modi’s OBC status was… pic.twitter.com/dTnija4B5b
— Pralhad Joshi (@JoshiPralhad) February 8, 2024
ರಾಹುಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರ ”ಪ್ರಧಾನಿ ಜಾತಿಯ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದ ಸಂಗತಿಗಳು” ಎಂಬ ಶೀರ್ಷಿಕೆಯ ಸಂಕ್ಷಿಪ್ತ ಟಿಪ್ಪಣಿಯಲ್ಲಿ, ಮೋದ್ ಘಾಂಚಿ ಜಾತಿ (ಮೋದಿ ಸೇರಿರುವ ಉಪ-ಗುಂಪು) “ಗುಜರಾತ್ ಸರ್ಕಾರದ ಪಟ್ಟಿಯಲ್ಲಿ ಸಾಮಾಜಿಕವಾಗಿ (ಮತ್ತು) ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಮತ್ತು ಒಬಿಸಿಯಲ್ಲಿದೆ ಎಂದಿದೆ. ಗುಜರಾತ್‌ನಲ್ಲಿ ನಡೆಸಿದ ಸಮೀಕ್ಷೆಯ ನಂತರ, ಮಂಡಲ್ ಆಯೋಗವು ಸೂಚ್ಯಂಕ 91(A) ಅಡಿಯಲ್ಲಿ ಒಬಿಸಿಗಳ ಪಟ್ಟಿಯನ್ನು ತಯಾರಿಸಿತು. ಇದರಲ್ಲಿ ಮೋದ್ ಘಾಂಚಿ ಜಾತಿಯೂ ಸೇರಿದೆ. ಭಾರತ ಸರ್ಕಾರದ ಗುಜರಾತ್‌ನ 105 ಒಬಿಸಿ ಜಾತಿಗಳ ಪಟ್ಟಿಯು ಮೋದ್ ಘಾಂಚಿಯನ್ನು ಸಹ ಒಳಗೊಂಡಿದೆ ಎಂದು ಅದು ಹೇಳಿದೆ.
ಜುಲೈ 25, 1994 ರಂದು ಮೋದಿಯವರ ತವರು ರಾಜ್ಯವಾದ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಬಿಸಿಗಳ ಪಟ್ಟಿಯಲ್ಲಿ ಉಪ-ಗುಂಪನ್ನು ಸೇರಿಸುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿತ್ತು.ಏಪ್ರಿಲ್ 4, 2000 ರ ಭಾರತ ಸರ್ಕಾರದ ಅಧಿಸೂಚನೆಯ ಪ್ರಕಾರ ಅದೇ ಉಪ-ಗುಂಪನ್ನು ಒಬಿಸಿ (ಪಟ್ಟಿ) ಸೇರಿಸಲಾಗಿದೆ. ಎರಡೂ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದಾಗ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇರಲಿಲ್ಲ ಮತ್ತು ಆ ಸಮಯದಲ್ಲಿ ಕಾರ್ಯನಿರ್ವಾಹಕ ಕಚೇರಿಯನ್ನು ಹೊಂದಿರಲಿಲ್ಲ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸಾಮಾನ್ಯ ವರ್ಗಕ್ಕೆ ಸೇರಿದವರು, ಅವರು ಜಾತಿಯ ಬಗ್ಗೆ ಸುಳ್ಳು ಹೇಳಿದ್ದಾರೆ: ರಾಹುಲ್ ಗಾಂಧಿ
‘ಬಿಜೆಪಿ ಕಾರ್ಯಕರ್ತರು ನಿಮ್ಮ ಬಳಿ ಬಂದಾಗಲೆಲ್ಲಾ ಒಂದು ಮಾತು ಹೇಳಿ, ನಮ್ಮ ಪ್ರಧಾನಿಯವರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಇಡೀ ದೇಶಕ್ಕೆ ಸುಳ್ಳು ಹೇಳಿದ್ದಾರೆ, ಅವರು ಹಿಂದುಳಿದ ವರ್ಗದಲ್ಲಿ ಹುಟ್ಟಿಲ್ಲ, ಅವರು ಸಾಮಾನ್ಯ ಜಾತಿಗೆ ಸೇರಿದವರು, ಇದನ್ನು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿ ಎಂದಿದ್ದಾರೆ ರಾಹುಲ್. ಪ್ರಧಾನಿ ಮೋದಿ ಸಂಸತ್ತಿನಲ್ಲಿ ತಮ್ಮನ್ನು ‘ಸಬ್ಸೆ ಬಡಾ ಒಬಿಸಿ’ (ಅತಿದೊಡ್ಡ OBC) ಎಂದು ಕರೆದ ನಂತರ ಮತ್ತು ಹಿಂದುಳಿದ ಸಮುದಾಯಗಳ ನಾಯಕರೊಂದಿಗೆ ವ್ಯವಹರಿಸುವಾಗ ಕಾಂಗ್ರೆಸ್ ಬೂಟಾಟಿಕೆ ಮತ್ತು ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಕ್ಕೆ ರಾಹುಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:38 pm, Thu, 8 February 24