ಇಂದು‌ ಸಂಜೆಯಿಂದಲೇ‌ ಭಕ್ತರಿಗೆ ತಿಮ್ಮಪ್ಪನ ದರ್ಶನ ಇಲ್ಲ, ಎಷ್ಟು ದಿನಗಳ ಕಾಲ?

|

Updated on: Jul 18, 2020 | 3:56 PM

ಆಂಧ್ರಪ್ರದೇಶ: ಚಿತ್ತೂರು ಜಿಲ್ಲೆಯ ತಿರುಮಲದ ಬಾಲಾಜಿ ದೇವಾಲಯದಲ್ಲಿ 18 ಅರ್ಚಕರು ಸೇರಿ ಟಿಟಿಡಿಯ 158‌ ಸಿಬ್ಬಂದಿಗೆ ಕೊರೊನಾ‌ ಧೃಡಪಟ್ಟಿರುವ ಹಿನ್ನೆಲೆ ತಿರುಮಲದ‌ ವೆಂಕಟೇಶ್ವರ‌ನ ದರ್ಶನ ನಿಲ್ಲಿಸಲು TTD ನಿರ್ಧಾರ ಮಾಡಿದೆ ಎನ್ನಲಾಗಿದೆ. ದೇವಾಸ್ಥಾನದ ಮಾಜಿ‌ ಪ್ರಧಾನ‌ ಅರ್ಚಕರಾದ ರಮಣ ದೀಕ್ಷಿತರು ದರ್ಶನ‌ ನಿಲ್ಲಿಸಲು ಟ್ವೀಟ್ ಮಾಡಿರುವ ಹಿನ್ನೆಲೆ 20 ದಿನಗಳ ಕಾಲ ಭಕ್ತರ ದರ್ಶನ ತಡೆದು ನಂತರ ಮುಂದಿನ‌ ಪರಿಸ್ಥಿತಿ ನೋಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗೆ‌ ಪತ್ರ‌ ಬರೆದಿರುವ ಟಿಟಿಡಿ, ಈಗಾಗಲೆ ಟಿಕೆಟ್ ಬುಕ್ ಮಾಡಿದವರ ಹಣ […]

ಇಂದು‌ ಸಂಜೆಯಿಂದಲೇ‌ ಭಕ್ತರಿಗೆ ತಿಮ್ಮಪ್ಪನ ದರ್ಶನ ಇಲ್ಲ, ಎಷ್ಟು ದಿನಗಳ ಕಾಲ?
Follow us on

ಆಂಧ್ರಪ್ರದೇಶ: ಚಿತ್ತೂರು ಜಿಲ್ಲೆಯ ತಿರುಮಲದ ಬಾಲಾಜಿ ದೇವಾಲಯದಲ್ಲಿ 18 ಅರ್ಚಕರು ಸೇರಿ ಟಿಟಿಡಿಯ 158‌ ಸಿಬ್ಬಂದಿಗೆ ಕೊರೊನಾ‌ ಧೃಡಪಟ್ಟಿರುವ ಹಿನ್ನೆಲೆ ತಿರುಮಲದ‌ ವೆಂಕಟೇಶ್ವರ‌ನ ದರ್ಶನ ನಿಲ್ಲಿಸಲು TTD ನಿರ್ಧಾರ ಮಾಡಿದೆ ಎನ್ನಲಾಗಿದೆ.

ದೇವಾಸ್ಥಾನದ ಮಾಜಿ‌ ಪ್ರಧಾನ‌ ಅರ್ಚಕರಾದ ರಮಣ ದೀಕ್ಷಿತರು ದರ್ಶನ‌ ನಿಲ್ಲಿಸಲು ಟ್ವೀಟ್ ಮಾಡಿರುವ ಹಿನ್ನೆಲೆ 20 ದಿನಗಳ ಕಾಲ ಭಕ್ತರ ದರ್ಶನ ತಡೆದು ನಂತರ ಮುಂದಿನ‌ ಪರಿಸ್ಥಿತಿ ನೋಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗೆ‌ ಪತ್ರ‌ ಬರೆದಿರುವ ಟಿಟಿಡಿ, ಈಗಾಗಲೆ ಟಿಕೆಟ್ ಬುಕ್ ಮಾಡಿದವರ ಹಣ ಹಿಂತಿರುಗಿಸಲು‌ ಸಹ‌ ನಿರ್ಧಾರ ಮಾಡಿದೆ. ಇಂದು‌ ಸಂಜೆಯಿಂದ‌ ಭಕ್ತರಿಗೆ ತಿರುಮಲದ‌ ವೆಂಕಟೇಶ್ವರ‌ನ ದರ್ಶನ ನಿಲ್ಲಿಸಲು ನಿರ್ಧಾರ ಮಾಡಲಾಗಿದ್ದು, ಇಂದು ಸಂಜೆ‌ ವೇಳೆಗೆ ಈ ಬಗ್ಗೆ ನಿರ್ಧಾರ ಪ್ರಕಟಿಸಲು ಟಿಟಿಡಿ ತೀರ್ಮಾನಿಸಿದೆ.