‘ನನ್ನ ಆದಾಯ 1.70 ಲಕ್ಷ ಅಷ್ಟೇ’ ಎಂದ ಮಹಿಳೆಗೆ 196 ಕೋಟಿ ಟ್ಯಾಕ್ಸ್ ಕಟ್ಟು ಅಂದಿದ್ದೇಕೆ ಕೋರ್ಟ್?
ಮುಂಬೈ: ಸುಂಕದವನ ಮುಂದೆ ಸುಖದುಃಖ ಹೇಳಿಕೊಂಡ್ರೆ ಪ್ರಯೋಜನ ಏನುಬಂತು!? ಇದು ಮುಂಬೈನ ಮಹಿಳೆಯೊಬ್ಬಳಿಗೆ ಗೊತ್ತಿರಲಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ವಿದೇಶದಲ್ಲಿ ಬೇನಾಮಿ ಅಕೌಂಟ್ ಹೊಂದಿದ್ದ ಮಹಿಳೆಯು ನನ್ನ ಲೆಕ್ಕ ಪಕ್ಕಾ ಅಂತಾ ಅಂದಿದ್ದಕ್ಕೆ, ಅದೆಲ್ಲಾ ಆಗೋಲ್ಲಾ ವಿದೇಶದಲ್ಲಿಟಿರುವ ದುಡ್ಡಿಗೂ ಕಟ್ಟು ಟ್ಯಾಕ್ಸ್ ಅಂತಾ ಚಾಟಿ ಬೀಸಿದೆ ಇನ್‌ಕಮ್ ಟ್ಯಾಂಕ್ಸ್ ಟ್ರಿಬುನಲ್. ಹೌದು ಮುಂಬೈನ ರೇಣು ಟಿ ಥರಾನಿ ಅನ್ನೋ ಮಹಿಳೆಯೊಬ್ಬರು ತನ್ನೆಲ್ಲಾ ವ್ಯವಹಾರ ಬ್ಲಾಕ್ ಆ್ಯಂಡ್ ವೈಟ್. ಯಾವುದೇ ಕಲರ್‌ಫುಲ್ ಬಿಸಿನೆಸ್ ಇಲ್ಲ ಅಂತಿದ್ದ ಮಹಿಳೆಗೆ […]
ಮುಂಬೈ: ಸುಂಕದವನ ಮುಂದೆ ಸುಖದುಃಖ ಹೇಳಿಕೊಂಡ್ರೆ ಪ್ರಯೋಜನ ಏನುಬಂತು!? ಇದು ಮುಂಬೈನ ಮಹಿಳೆಯೊಬ್ಬಳಿಗೆ ಗೊತ್ತಿರಲಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ವಿದೇಶದಲ್ಲಿ ಬೇನಾಮಿ ಅಕೌಂಟ್ ಹೊಂದಿದ್ದ ಮಹಿಳೆಯು ನನ್ನ ಲೆಕ್ಕ ಪಕ್ಕಾ ಅಂತಾ ಅಂದಿದ್ದಕ್ಕೆ, ಅದೆಲ್ಲಾ ಆಗೋಲ್ಲಾ ವಿದೇಶದಲ್ಲಿಟಿರುವ ದುಡ್ಡಿಗೂ ಕಟ್ಟು ಟ್ಯಾಕ್ಸ್ ಅಂತಾ ಚಾಟಿ ಬೀಸಿದೆ ಇನ್‌ಕಮ್ ಟ್ಯಾಂಕ್ಸ್ ಟ್ರಿಬುನಲ್.
ಹೌದು ಮುಂಬೈನ ರೇಣು ಟಿ ಥರಾನಿ ಅನ್ನೋ ಮಹಿಳೆಯೊಬ್ಬರು ತನ್ನೆಲ್ಲಾ ವ್ಯವಹಾರ ಬ್ಲಾಕ್ ಆ್ಯಂಡ್ ವೈಟ್. ಯಾವುದೇ ಕಲರ್‌ಫುಲ್ ಬಿಸಿನೆಸ್ ಇಲ್ಲ ಅಂತಿದ್ದ ಮಹಿಳೆಗೆ ಇನ್‌ಕಮ್ ಟ್ಯಾಕ್ಸ್ ಟ್ರಿಬುನಲ್ ಸಾಕು ಮಾಡಮ್ಮ ನಿನ್ನ ಪ್ರಲಾಪ, ಬೇನಾಮಿಯಾಗಿ ವಿದೇಶಿ ಬ್ಯಾಂಕ್‌ನಲ್ಲಿ ಇಟ್ಟಿರುವ ದುಡ್ಡಿಗೆ ಕಟ್ಟು ಟ್ಯಾಕ್ಸ್ ಅಂತಾ ಆರ್ಡರ್ ಮಾಡಿದೆ. ಪರಿಣಾಮ ಈಗ ಈ ಮಹಿಳೆ ವಿದೇಶದಲ್ಲಿ ಇಟ್ಟಿದ್ದಾರೆ ಎನ್ನಲಾದ 196 ಕೋಟಿಗೆ ಟ್ಯಾಕ್ಸ್ ಕಟ್ಟಬೇಕಿದೆ.
ಈ ಮಹಿಳೆ ರೇಣು ಥರಾನಿಯ ವಿಶೇಷ ಅಂದ್ರೆ ತನ್ನ ವ್ಯಾಪಾರ ವಹಿವಾಟೆಲ್ಲಾ ಸೀದಾ ಸಾದ ಅಂತಾ 2006ರಲ್ಲಿ ತನ್ನ ಆದಾಯ ಕೇವಲ 1.70 ಲಕ್ಷ ರೂ ಆಂತಾ ಘೋಷನೆ ಮಾಡಿದ್ದರು. ಆದ್ರೆ 2012ರಲ್ಲಿ ಅನಾಮಿಕರೊಬ್ಬರಿಂದ ಬಂದ ಮಾಹಿತಿಯನ್ನ ತನಿಖೆ ಮಾಡಿದ ಮುಂಬೈನ ಆದಾಯ ತೆರಿಗೆ ಅಧಿಕಾರಿಗಳು ಮಹಿಳೆಯ ಫೈಲ್ ಅನ್ನು ಮತ್ತೆ ಓಪನ್ ಮಾಡಿದ್ದಾರೆ.
ನಂತರ ವಿಸ್ತೃತವಾಗಿ ತನಿಖೆ ಮಾಡಿದಾಗ ಮಹಿಳೆ ಸ್ಟಿಟ್ಜರ್ ಲ್ಯಾಂಡ್‌ನ ಹೆಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ 196 ಕೋಟಿ ರೂ. ಹೊಂದಿರೋದು ಪತ್ತೆಯಾಗಿದೆ. ಹಾಗೇನೆ ಈ ಮಹಿಳೆ ಕೇಮನ್ ಐಲ್ಯಾಂಡ್ ಬ್ಯಾಂಕ್‌ನಲ್ಲೂ ಬೇನಾಮಿ ಹಣ ಹೊಂದಿರೋದು ಪತ್ತೆಯಾಗಿದೆ.
ಹೀಗಾಗಿ ಆದಾಯ ತೆರಿಗೆ ಇಲಾಖೆ ಮಹಿಳೆಗೆ 2006-07 ಮತ್ತು 2007-2008ರ ಹಣಕಾಸು ವರ್ಷಗಳಿಗೆ ಸಂಬಂಧಿಸಿದಂತೆ ವಿದೇಶಿ ಬ್ಯಾಂಕ್ ಹಣಕ್ಕೂ ತೆರಿಗೆ ಕಟ್ಟಿ ಎಂದು ನೋಟಿಸ್ ಕಳಿಸಿದೆ. ಆದ್ರೆ ರೇಣು ಥರಾನಿ ಮಾತ್ರ ತನಗೂ ವಿದೇಶಿ ಹಣಕ್ಕೂ ಸಂಬಂಧ ಇಲ್ಲ ಅಂತಾ ನಿರಾಕರಿಸಿದ್ದಾರೆ. ಆಗ ಅಧಿಕಾರಿಗಳು ಹಾಗಿದ್ರೆ ಸಿಸ್ ಬ್ಯಾಂಕ್ ನಲ್ಲಿ ಇರುವ ದುಡ್ಡು ನಂದಲ್ಲ ಅಂತಾ ವೇವರ್ ಫಾರ್ಮ್‌ಗೆ ಸಹಿ ಮಾಡು ಅಂದಿದ್ದಾರೆ. ಅದಕ್ಕೆ ರೇಣು ಥರಾನಿ ನಿರಾಕರಿಸಿ ವೇವರ್ ಫಾರ್ಮ್‌ಗೆ ಸಹಿ ಮಾಡೋಲ್ಲ ಎಂದಿದ್ದಾರೆ.
ಆಗ ಈ ವಿವಾದ ಇನ್‌ಕಮ್ ಟ್ಯಾಕ್ಸ್ ಅಪ್ಪೆಲೆಟ್ ಟ್ರಿಬುನಲ್‌ಗೆ ಹೋಗಿದೆ. ಅಲ್ಲಿ ಬರೋಬ್ಬರಿ ಎಂಟು ವರ್ಷ ಕಾಲ ವಿಚಾರಣೆ ನಡೆಸಿದ ಟ್ರಿಬುನಲ್ ನೋಡಮ್ಮಾ ತಾಯಿ ಯಾರೋ ಅನಾಮಿಕರು ನಿನಗೆ ದೇಣಿಗೆ ನೀಡೋಕೆ ನಿನೇನು ಮದರ್ ಥೆರೆಸಾ ಅಲ್ಲಾ, ಹಾಗೇನೆ ಸ್ವಿಸ್ ಬ್ಯಾಂಕ್ ಮತ್ತು ಕೇಮನ್ ಐಲ್ಯಾಂಡ್‌ನಲ್ಲಿ ಕೋಟ್ಯಂತರ ಹಣ ಇಟ್ಟಿದ್ದು ನಿನ್ನದೇ, ನಿನ್ನದಲ್ಲದಿದ್ರೆ ವೇವರ್ ಫಾರ್ಮ್‌ಗೆ ದುಡ್ಡು ನಿಂದಲ್ಲ ಅಂತಾ ಸಹಿ ಹಾಕಬೇಕಿತ್ತು, ಆದ್ರೆ ನೀನು ಹಾಗೆ ಮಾಡ್ತಿಲ್ಲ. ಹೀಗಾಗಿ ಆ ಹಣ ನಿಂದೇ ಅನ್ನೋದರಲ್ಲಿ ದೂಸರಾ ಮಾತಿಲ್ಲ. ಹಾಗಾಗಿ ಈ 196 ಕೋಟಿ ಹಣಕ್ಕೆ ಕಾನೂನಿನ ಪ್ರಕಾರ ಟ್ಯಾಕ್ಸ್ ಕಟ್ಟು ಅಂತಾ ತೀರ್ಪು ನೀಡಿದೆ.