AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವಾಳಿಯೆದ್ದ ಕಂಪನಿ ಖರೀದಿಸಲು ಪತಂಜಲಿ‌ಗೆ 1200 ಕೋಟಿ ಸಾಲ ನೀಡಿದ SBI ಅಸಲಿಯತ್ತು ಏನು?

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಒಂದಿಲ್ಲೊಂದು ವಿವಾದಲ್ಲಿ ಸಿಲುಕ್ತಾನೆ ಬರ್ತಿದೆ. ದೊಡ್ಡ ದೊಡ್ಡ ಕಾರ್ಪೋರೇಟ್‌ ಕಂಪನಿಗಳಿಗೆ ನೀಡಿದ ಸಾಲವನ್ನ ವಸೂಲಿ ಮಾಡುವಲ್ಲಿ ಎಸ್‌ಬಿಐ ಇತಿಹಾಸ ಕರಾಳವಾಗಿದೆ. ಈಗ ಇಂಥದ್ದೆ ಮತ್ತೊಂದು ವಿವಾದದಲ್ಲಿ ಎಸ್‌ಬಿಐ ಸಿಲುಕಿಕೊಂಡಿದೆ. ಖ್ಯಾತ ರುಚಿ ಸೋಯಾ ಕಂಪನಿಗೆ ನೀಡಿದ್ದ 1,800 ಕೋಟಿ ರೂ. ಸಾಲವನ್ನ ಸಂಪೂರ್ಣವಾಗಿ ವಸೂಲು ಮಾಡುವಲ್ಲಿ ಎಸ್‌ಬಿಐ ವಿಫಲವಾಗಿದೆ. ಇದರ ಬದಲು ಅದನ್ನು ಮರುಪಾವತಿಯಾಗದ ಸಾಲ ಎಂದು ಘೋಷಿಸಿ ಕೈತೊಳೆದುಕೊಂಡಿದೆ. ಇದಾದ ನಂತರ ರುಚಿ ಸೋಯಾ ಕಂಪನಿ ತಾನು ದಿವಾಳಿಯಾಗಿದ್ದೇನೆಂದು ಘೋಷಿಸಿಕೊಂಡಿದೆ. […]

ದಿವಾಳಿಯೆದ್ದ ಕಂಪನಿ ಖರೀದಿಸಲು ಪತಂಜಲಿ‌ಗೆ 1200 ಕೋಟಿ ಸಾಲ ನೀಡಿದ SBI ಅಸಲಿಯತ್ತು ಏನು?
Follow us
Guru
|

Updated on:Jul 18, 2020 | 2:56 PM

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಒಂದಿಲ್ಲೊಂದು ವಿವಾದಲ್ಲಿ ಸಿಲುಕ್ತಾನೆ ಬರ್ತಿದೆ. ದೊಡ್ಡ ದೊಡ್ಡ ಕಾರ್ಪೋರೇಟ್‌ ಕಂಪನಿಗಳಿಗೆ ನೀಡಿದ ಸಾಲವನ್ನ ವಸೂಲಿ ಮಾಡುವಲ್ಲಿ ಎಸ್‌ಬಿಐ ಇತಿಹಾಸ ಕರಾಳವಾಗಿದೆ. ಈಗ ಇಂಥದ್ದೆ ಮತ್ತೊಂದು ವಿವಾದದಲ್ಲಿ ಎಸ್‌ಬಿಐ ಸಿಲುಕಿಕೊಂಡಿದೆ.

ಖ್ಯಾತ ರುಚಿ ಸೋಯಾ ಕಂಪನಿಗೆ ನೀಡಿದ್ದ 1,800 ಕೋಟಿ ರೂ. ಸಾಲವನ್ನ ಸಂಪೂರ್ಣವಾಗಿ ವಸೂಲು ಮಾಡುವಲ್ಲಿ ಎಸ್‌ಬಿಐ ವಿಫಲವಾಗಿದೆ. ಇದರ ಬದಲು ಅದನ್ನು ಮರುಪಾವತಿಯಾಗದ ಸಾಲ ಎಂದು ಘೋಷಿಸಿ ಕೈತೊಳೆದುಕೊಂಡಿದೆ. ಇದಾದ ನಂತರ ರುಚಿ ಸೋಯಾ ಕಂಪನಿ ತಾನು ದಿವಾಳಿಯಾಗಿದ್ದೇನೆಂದು ಘೋಷಿಸಿಕೊಂಡಿದೆ. ಇದಕ್ಕಾಗಿ ಅನುಸರಿಸಬೇಕಾದ ಕಾನೂನು ಕ್ರಮಗಳನ್ನ ಕೂಡಾ ಪಾಲಿಸಿದೆ.

ಹೀಗೆ ದಿವಾಳಿ ಘೋಷಣೆ ಸಮಯದಲ್ಲೂ ಅದು ಎಸ್‌ಬಿಐಗೆ ನೀಡಬೇಕಾದ ಮೊತ್ತವನ್ನು ನೀಡಿಲ್ಲ. ಆದ್ರೆ ಕಹಾನಿಯಲ್ಲಿ ಟ್ವಿಸ್ಟ್‌ ಇರೋದೆ ಇಲ್ಲಿ.. ಯಾಕಂದ್ರೆ ಹೀಗೆ ದಿವಾಳಿಯಾದ ರುಚಿ ಸೋಯಾ ಕಂಪನಿಯನ್ನ ಖ್ಯಾತ ಯೋಗ ಗುರು ಬಾಬಾ ರಾಮದೇವ್‌ ಅವರ ಪತಂಜಲಿ ಆಯುರ್‌ವೇದ ಗ್ರೂಪ್‌ ಖರೀದಿಸಿದೆ. ಇದಕ್ಕೆ ಆರ್ಥಿಕ ನೆರವು ನೀಡಿದ್ದು ಬೇರೆ ಯಾರೂ ಅಲ್ಲ ಮತ್ತದೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ! ಇದಕ್ಕಾಗಿ ಅದು ಪತಂಜಲಿ ಗ್ರೂಪ್‌ಗೆ 1,200 ಕೋಟಿ ರೂ.ಗಳನ್ನ ಸಾಲವಾಗಿ ನೀಡಿದೆ.

ಎಸ್‌ಬಿಐನ ಈ ನಡೆ ಈಗ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಮೂದಲು ರುಚಿ ಸೋಯಾ ಕಂಪನಿಗೆ ನೀಡಿದ್ದ 1,800 ಕೋಟಿ ರೂ. ಸಾಲವೇ ರಿಕವರಿ ಆಗಿಲ್ಲ. ಅದನ್ನ ಬ್ಯಾಡ್‌ ಡೆಟ್‌ ಎಂದು ತನ್ನ ಖಾತೆಯಲ್ಲಿ ದಾಖಲಿಸಿಕೊಂಡು ಎಳ್ಳು ನೀರು ಬಿಟ್ಟಿದೆ. ಆದ್ರೆ ಕೆಲವೇ ದಿನಗಳಲ್ಲಿ ಅದೇ ದಿವಾಳಿಯಾದ ಕಂಪನಿಯನ್ನ ಖರೀದಿಸಲು ಎಸ್‌ಬಿಐ ಪತಂಜಲಿ ಗ್ರೂಪ್‌ಗೆ 1,200 ಕೋಟಿ ಸಾಲ ನೀಡಿದೆ. ಇದು ಆರ್ಥಿಕ ತಜ್ಞರಿಗೆ ಹಗಲು ಹೊತ್ತಿನಲ್ಲಿ ದೀಪ ಹಚ್ಚಿ ಹುಡುಕಿದರೂ ಉತ್ತರ ಸಿಗದಂಥ ಪ್ರಶ್ನೆಯಾಗಿದೆ.

ಇನ್ನೊಂದು ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ ಪತಂಜಲಿ ಗ್ರೂಪ್‌ ರುಚಿ ಸೋಯಾ ಕಂಪನಿ ಖರೀದಿಸುವುದಕ್ಕಿಂತ ಮೊದಲು ಅದರ ಶೇರಿನ ಮುಖ ಬೆಲೆ ಇದ್ದದ್ದು ರೂ.3.30. ಆದ್ರೆ ಪತಂಜಲಿ ಗ್ರೂಪ್‌ ಅದನ್ನ ಖರೀದಿಸುತ್ತಿದ್ದಂತೆ ಶೇರಿನ ಬೆಲೆ ಏಕಾ ಏಕಿ ರೂ. 1,535ಗೆ ಏರಿಕೆಯಾಗಿದೆ. ಅಂದ್ರೆ ಶೇ. 43757.14 ರಷ್ಟು. ಇದು ಜಗತ್ತಿನಲ್ಲಿ ಎಲ್ಲೂ ಕೇಳಿರದ ಸಂಗತಿ ಅಂದರೂ ಅಚ್ಚರಿಯಲ್ಲ. ಇದೇ ಈಗ ಆರ್ಥಿಕ ತಜ್ಞರನ್ನ ವಿಸ್ಮಿತರನ್ನಾಗಿಸಿದೆ.

ತಜ್ಞರ ಪ್ರಕಾರ ಒಂದು ವೇಳೆ ರುಚಿ ಸೋಯಾ ಕಂಪನಿ ದಿವಾಳಿ ಘೋಷಿಸಿದಾಗ ಸಾಲ ಮರುಪಾವತಿಯಾಗುವುದು ಖಾತ್ರಿ ಇರದಿದ್ರೆ ತನ್ನ ಪಾಲಿನ ಸಾಲದ ಹಣವನ್ನ ಶೇರುಗಳಿಗೆ ಪರಿವರ್ತಿಸಿ ಕೊಳ್ಳಬೇಕಿತ್ತು. ಆಗ ಖರೀದಿಸುವ ಬೇರೆ ಕಂಪನಿಗಳಿಂದ ಅದರ ಪಾಲಿನ ಶೇರುಗಳ ಪಾಲಿನಿಂದಾದರೂ ಸಾಲ ಮರುಪಾವತಿಯಾಗುತ್ತೆ. ಆದ್ರೆ ಅಚ್ಚರಿ ರೀತಿಯಲ್ಲಿ ಎಸ್‌ಬಿಐ ಇದ್ಯಾವುದನ್ನು ಮಾಡಿಲ್ಲ. ಇದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲ ಇದರಲ್ಲಿ ಇರೋ ಗೋಲ್‌ ಮಾಲ್‌ ಆದ್ರೂ ಏನು ಎನ್ನುವುದು ಆರ್ಥಿಕ ತಜ್ಞರ ಪ್ರಶ್ನೆಯಾಗಿದೆ.

Published On - 2:06 pm, Sat, 18 July 20

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್