+ve News ದೇಶದ ಮೊದಲ ಕೊರೊನಾ ಲಸಿಕೆ ಪ್ರಯೋಗ ಸಕ್ಸಸ್ ಆಯ್ತು.. ಎಲ್ಲಿ?
ದೆಹಲಿ:ಕೊರೊನಾವನ್ನ ಹತ್ತಿಕ್ಕುವ ಮದ್ದನ್ನು ಕಂಡುಹಿಡಿಯಲು ಹಲವಾರು ದೇಶಗಳು ಹಗಲುರಾತ್ರಿ ಎನ್ನದೆ ಶ್ರಮಿಸುತ್ತಿವೆ. ಕೊರೊನಾ ಮಾರಿಯಿಂದ ಬೇಸತ್ತಿರುವ ಪ್ರತಿಯೊಂದು ದೇಶವು ಕೊರೊನಾ ನಿಯಂತ್ರಿಸುವ ಲಸಿಕೆಯ ತಯಾರಿಕೆಯ ಹಿಂದೆ ಬಿದ್ದಿದೆ.ಅದರಲ್ಲಿ ಭಾರತವೂ ಒಂದಾಗಿದ್ದು ಲಸಿಕೆಯ ತಯಾರಿಕೆಯ ಹಾದಿಯಲ್ಲಿ ಕೊಂಚ ಮುಂದೆ ಸಾಗಿದೆ ಎನ್ನಲಾಗಿದೆ. ಕೊರೊನಾವನ್ನ ಹತ್ತಿಕ್ಕಲು ಮಾನವನ ಮೇಲೆ ಲಸಿಕೆ ಪ್ರಯೋಗ ಮಾಡುವುದನ್ನು ಭಾರತ್ ಬಯೋಟೆಕ್ ಸಂಸ್ಥೆಯು ಹರಿಯಾಣದ ಪಿಜಿಐ ರೋಹ್ಟಕ್‌ನಲ್ಲಿ ಆರಂಭಿಸಿದೆ. ಲಸಿಕೆಯನ್ನು ಪಡೆದುಕೊಂಡ ಎಲ್ಲರೂ ಉತ್ತಮವಾಗಿ ಪ್ರತಿಕ್ರಿಯಿಸಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಆಗಿಲ್ಲವೆಂದು ಹರಿಯಾಣ ಆರೋಗ್ಯ ಸಚಿವರಾದ […]
ದೆಹಲಿ:ಕೊರೊನಾವನ್ನ ಹತ್ತಿಕ್ಕುವ ಮದ್ದನ್ನು ಕಂಡುಹಿಡಿಯಲು ಹಲವಾರು ದೇಶಗಳು ಹಗಲುರಾತ್ರಿ ಎನ್ನದೆ ಶ್ರಮಿಸುತ್ತಿವೆ. ಕೊರೊನಾ ಮಾರಿಯಿಂದ ಬೇಸತ್ತಿರುವ ಪ್ರತಿಯೊಂದು ದೇಶವು ಕೊರೊನಾ ನಿಯಂತ್ರಿಸುವ ಲಸಿಕೆಯ ತಯಾರಿಕೆಯ ಹಿಂದೆ ಬಿದ್ದಿದೆ.ಅದರಲ್ಲಿ ಭಾರತವೂ ಒಂದಾಗಿದ್ದು ಲಸಿಕೆಯ ತಯಾರಿಕೆಯ ಹಾದಿಯಲ್ಲಿ ಕೊಂಚ ಮುಂದೆ ಸಾಗಿದೆ ಎನ್ನಲಾಗಿದೆ.
ಕೊರೊನಾವನ್ನ ಹತ್ತಿಕ್ಕಲು ಮಾನವನ ಮೇಲೆ ಲಸಿಕೆ ಪ್ರಯೋಗ ಮಾಡುವುದನ್ನು ಭಾರತ್ ಬಯೋಟೆಕ್ ಸಂಸ್ಥೆಯು ಹರಿಯಾಣದ ಪಿಜಿಐ ರೋಹ್ಟಕ್‌ನಲ್ಲಿ ಆರಂಭಿಸಿದೆ. ಲಸಿಕೆಯನ್ನು ಪಡೆದುಕೊಂಡ ಎಲ್ಲರೂ ಉತ್ತಮವಾಗಿ ಪ್ರತಿಕ್ರಿಯಿಸಿದ್ದು ಯಾವುದೇ ವ್ಯತಿರಿಕ್ತ ಪರಿಣಾಮ ಆಗಿಲ್ಲವೆಂದು ಹರಿಯಾಣ ಆರೋಗ್ಯ ಸಚಿವರಾದ ಅನಿಲ್ ವಿಜ್ ಅವರು ಜನತೆಗೆ ತಿಳಿಸಿದ್ದಾರೆ.