ದೆಹಲಿ: ಅವಳಿ ಜವಳಿ ಮಕ್ಕಳೆಂದರೆ ನೋಡೋಕೆ ಒಂದೇ ಥರ ಇರುತ್ತಾರೆ ಅಂತಾ ಎಲ್ಲರಿಗೂ ಗೊತ್ತು . ಒಂದೇ ಗುಣ, ಒಂದೇ ಹಾವಭಾವ ಇರೋದು ಸರ್ವೇಸಾಮಾನ್ಯ. ಆದರೆ, ಇಲ್ಲೊಂದು ಅವಳಿ ಜವಳಿ ಸಹೋದರಿಯರು ನೋಡೋಕೆ ಒಂದೇ ಥರ ಇರೋದಲ್ಲದೆ ಪರೀಕ್ಷೆಯಲ್ಲೂ Same to Same ಮಾರ್ಕ್ಸ್ ಪಡೆದಿದ್ದಾರೆ ಅಂತಾ ಹೇಳಿದ್ರೇ ನಂಬ್ತೀರಾ..?. ನೀವು ನಂಬಲೇ ಬೇಕು.
ಐದೂ ಸಬ್ಜೆಕ್ಟ್ನಲ್ಲಿ ಸೇಮ್ ಮಾರ್ಕ್ಸ್
ಹೌದು, ಇಂಥದ್ದೇ ಒಂದು ಸ್ವಾರಸ್ಯಕರ ಸಂಗತಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ. ಅವಳಿ ಜವಳಿ ಸಹೋದರಿಯರಾದ ಮಾನಸಿ ಸಿಂಗ್ ಮತ್ತು ಮಾನ್ಯಾ ಸಿಂಗ್ ತಮ್ಮ 12ನೇ ತರಗತಿಯ CBSE ಪರೀಕ್ಷೆಯಲ್ಲಿ ಸರಿಸಮನಾಗಿ ಶೇಕಡಾ 95.8 ಅಂಕಗಳನ್ನ ಪಡೆದಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಪರೀಕ್ಷೆ ಬರೆದ ಐದೂ ಸಬ್ಜೆಕ್ಟ್ನಲ್ಲಿ ಒಂದೇ ಮಾರ್ಕ್ಸ್ ಸಹ ಗಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನಸಿ ಇದು ನಮಗೆ ತುಂಬಾ ಆಶ್ಚರ್ಯವನ್ನೇ ಉಂಟುಮಾಡಿದೆ. ನಮಗೆ ಒಳ್ಳೇ ಮಾರ್ಕ್ಸ್ ಬರುತ್ತೆ ಅನ್ನೋ ವಿಶ್ವಾಸ ಇತ್ತು. ಆದರೆ, ಪ್ರತಿ ವಿಷಯದಲ್ಲೂ ಒಂದೇ ಥರ ಅಂಕಗಳು ಬರುತ್ತೆ ಅಂತಾ ಊಹಿಸಿರಲಿಲ್ಲ ಎಂದು ತಮಗಾದ ಅಚ್ಚರಿಯನ್ನು ಹಂಚಿಕೊಂಡಿದ್ದಾರೆ. ಇವರ ಈ ರೋಚಕ ಸಾಧನೆ ಜನರಲ್ಲಿ ಇದು ಹೇಗೆ ಸಾಧ್ಯ ಎಂಬ ಕುತೂಹಲ ಸಹ ಉಂಟುಮಾಡಿದೆ.