ಕಾಂಗ್ರೆಸ್ ಪಕ್ಷದಿಂದ ಹೊರನಡೆದಿರುವ ಸಚಿನ್ ಪೈಲಟ್ರಿಂದ ಹೊಸ ಬಾಂಬ್!
ಪುರಾತನ ಕಾಂಗ್ರೆಸ್ ಪಕ್ಷದಿಂದ ಹೊರಬಂದಿರುವ ರಾಜಸ್ಥಾನದ ಯುವ ವರ್ಚಸ್ವೀ ನಾಯಕ ಸಚಿನ್ ಪೈಲಟ್ ಹೊಸ ಬಾಂಬ್ ಹಾಕಿದ್ದಾರೆ. ಪೈಲಟ್ ತಮ್ಮ ಜೊತೆಗೆ 20-30 ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಹೊರತದು ಸೀದಾ ಬಿಜೆಪಿ ಜೊತೆ ಕೈಜೋಡಿಸುತ್ತಾರೆ ಎಂದೇ ರಾಜಕೀಯ ಪಡಿತರು ಭಾವಿಸಿದ್ದರು. ಆದ್ರೆ ಈ ಬೆಳವಣಿಗೆಗಳಿಗೆ ತಣ್ಣೀರು ಎರಚಿರುವ ಸಚಿನ್ ಪೈಲಟ್ ತಾನು ಬಿಜೆಪಿಯತ್ತ ಹೋಗುವ ಮನಸ್ಸು ಮಾಡಿಲ್ಲ. ನಾನು ಮತ್ತೊಮ್ಮೆ ಪುನರುಚ್ಚರಿಸುವೆ ನಾನು ಬಿಜೆಪಿ ಜೊತೆ ಕೈಜೋಡಿಸುತ್ತಿಲ್ಲ. ಬಿಜೆಪಿ ಪಕ್ಷಕ್ಕೆ ಹೋಗಿತ್ತೇನೆ ಎಂಬುದು ಕೇವಲ ನನ್ನ ಹೆಸರಿಗೆ, […]
ಪುರಾತನ ಕಾಂಗ್ರೆಸ್ ಪಕ್ಷದಿಂದ ಹೊರಬಂದಿರುವ ರಾಜಸ್ಥಾನದ ಯುವ ವರ್ಚಸ್ವೀ ನಾಯಕ ಸಚಿನ್ ಪೈಲಟ್ ಹೊಸ ಬಾಂಬ್ ಹಾಕಿದ್ದಾರೆ. ಪೈಲಟ್ ತಮ್ಮ ಜೊತೆಗೆ 20-30 ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಹೊರತದು ಸೀದಾ ಬಿಜೆಪಿ ಜೊತೆ ಕೈಜೋಡಿಸುತ್ತಾರೆ ಎಂದೇ ರಾಜಕೀಯ ಪಡಿತರು ಭಾವಿಸಿದ್ದರು.
ಆದ್ರೆ ಈ ಬೆಳವಣಿಗೆಗಳಿಗೆ ತಣ್ಣೀರು ಎರಚಿರುವ ಸಚಿನ್ ಪೈಲಟ್ ತಾನು ಬಿಜೆಪಿಯತ್ತ ಹೋಗುವ ಮನಸ್ಸು ಮಾಡಿಲ್ಲ. ನಾನು ಮತ್ತೊಮ್ಮೆ ಪುನರುಚ್ಚರಿಸುವೆ ನಾನು ಬಿಜೆಪಿ ಜೊತೆ ಕೈಜೋಡಿಸುತ್ತಿಲ್ಲ. ಬಿಜೆಪಿ ಪಕ್ಷಕ್ಕೆ ಹೋಗಿತ್ತೇನೆ ಎಂಬುದು ಕೇವಲ ನನ್ನ ಹೆಸರಿಗೆ, ನನ್ನ ರಾಜಕೀಯ ಭವಿಷ್ಯಕ್ಕೆ ಕಳಂಕ ತರುವ ಯತ್ನಗಳಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಬಹಳಷ್ಟು ಶ್ರಮಿಸಿರುವೆ. ನಾನು ಕಾಂಗ್ರೆಸ್ ತೊರೆಯುವುದಿಲ್ಲ. ನಾನಿನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ ಎಂದು ಹೇಳಿದ್ದಾರೆ. ಕುತೂಹಲಕಾರಿ ಸಂಗತಿಯೆಂದ್ರೆ ಕಳೆದ ಒಂದು ವಾರದಿಂದ ತಾನು ಕಾಂಗ್ರೆಸ್ ಪಕ್ಷದಿಂದ ವಿಮುಖವಾಗುತ್ತಿರುವುದಾಗಿ ಪೈಲಟ್ ಹೇಳಿದ್ದರು. ತದನಂತರ ಕಾಂಗ್ರೆಸ್ ಪಕ್ಷದ ಅತಿರಥ ಮಹಾರಥರು ಹತ್ತಾರು ದೂರವಾಣಿ ಕರೆಗಳನ್ನು ಮಾಡಿ, ಪೈಲಟ್ರನ್ನು ಸಮಧಾನಪಡಿಸಲು ಯತ್ನಿಸಿದ್ದರಾದರೂ ಪೈಲಟ್ ಆ ಯಾವುದೇ ದೂರವಾಣಿ ಕರೆಗಳನ್ನು ಸ್ವೀಕರಿಸಿರಲಿಲ್ಲ.
Published On - 11:00 am, Wed, 15 July 20