Twitter Blue Tick: ರಾಹುಲ್ ಗಾಂಧಿ, ಯೋಗಿ, ಕೇಜ್ರಿವಾಲ್ ಸೇರಿದಂತೆ ಹಲವರ ಟ್ವಿಟ್ಟರ್​ ಖಾತೆಯಲ್ಲಿ ಬ್ಲ್ಯೂ ಟಿಕ್ ಮಾಯ

|

Updated on: Apr 21, 2023 | 8:00 AM

ಮೈಕ್ರೋಬ್ಲಾಗಿಂಗ್ ಪ್ಲ್ಯಾಟ್‌ಫಾರ್ಮ್ ಟ್ವಿಟರ್ (Twitter) ತನ್ನ ಪ್ರೀಮಿಯಮ್ ಸಬ್‌ಸ್ಕ್ರಿಪ್ಶನ್ ಸೇವೆಯಾದ ಟ್ವಿಟರ್ ಬ್ಲ್ಯೂಟಿಕ್ ಅನ್ನು ಭಾರತದ ಟ್ವಿಟರ್ ಬಳಕೆದಾರರಿಗೆ ಈಗಾಗಲೇ ಬಿಡುಗಡೆ ಮಾಡಿದೆ.

Twitter Blue Tick: ರಾಹುಲ್ ಗಾಂಧಿ, ಯೋಗಿ, ಕೇಜ್ರಿವಾಲ್ ಸೇರಿದಂತೆ ಹಲವರ ಟ್ವಿಟ್ಟರ್​ ಖಾತೆಯಲ್ಲಿ ಬ್ಲ್ಯೂ ಟಿಕ್ ಮಾಯ
ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್
Follow us on

ಮೈಕ್ರೋಬ್ಲಾಗಿಂಗ್ ಪ್ಲ್ಯಾಟ್‌ಫಾರ್ಮ್ ಟ್ವಿಟರ್ (Twitter) ತನ್ನ ಪ್ರೀಮಿಯಮ್ ಸಬ್‌ಸ್ಕ್ರಿಪ್ಶನ್ ಸೇವೆಯಾದ ಟ್ವಿಟರ್ ಬ್ಲ್ಯೂಟಿಕ್ ಅನ್ನು ಭಾರತದ ಟ್ವಿಟರ್ ಬಳಕೆದಾರರಿಗೆ ಈಗಾಗಲೇ ಬಿಡುಗಡೆ ಮಾಡಿದೆ. ಅದರಂತೆ ಪಾವತಿ ಮಾಡದ ಟ್ವಿಟ್ಟರ್ ಖಾತೆಯಿಂದ ಬ್ಲ್ಯೂ ಟಿಕ್ ತೆಗೆದು ಹಾಕಲಾಗಿದೆ. ಪ್ರಮುಖವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಸಲ್ಮಾನ್​ ಖಾತೆಗಳು ಕೂಡ ಸೇರಿವೆ.
ಟ್ವಿಟರ್ ಬ್ಲ್ಯೂವನ್ನು ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಡಿವೈಸ್‌ ಎರಡರಲ್ಲೂ ಬಳಸಬಹುದಾಗಿದೆ ಜೊತೆಗೆ ಟ್ವಿಟರ್ ವೆಬ್‌ಸೈಟ್ ಬಳಸುವವರು ಕೂಡ ಬ್ಲ್ಯೂ ಚೆಕ್‌ಮಾರ್ಕ್ ಅನ್ನು ಖರೀದಿಸಬಹುದು. ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಬ್ಲ್ಯೂ ಟಿಕ್‌ಮಾರ್ಕ್ ಮಾಸಿಕ ಸಬ್‌ಸ್ಕ್ರಿಪ್ಶನ್ ಶುಲ್ಕ ರೂ 900 ಆಗಿದ್ದರೆ ವೆಬ್ ಬಳಕೆದಾರರಿಗೆ ಈ ಶುಲ್ಕ ರೂ 650 ಇರಲಿದೆ.

ವಾರ್ಷಿಕ ಸಬ್‌ಸ್ಕ್ರಿಪ್ಶನ್ ಸೇವೆಯನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದ್ದು 6,800 ರೂ. ವಾರ್ಷಿಕ ಚಂದಾದಾರಿಕೆಯನ್ನು ಬಳಕೆದಾರರು ತಮ್ಮದಾಗಿಸಿಕೊಳ್ಳಬಹುದು. ತಿಂಗಳಿಗೆ ಇದೇ ವೆಚ್ಚ 566 ರೂ. ಆಗಿದೆ.
ಇದರಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟ ಶಾರುಖ್ ಖಾನ್ ಸೇರಿದಂತೆ ಹಲವು ಪ್ರಮುಖರ ಬ್ಲ್ಯೂಟಿಕ್​ ಮಾರ್ಕ್​ಗಳನ್ನು ಅಳಿಸಲಾಗಿದೆ.

ಮತ್ತಷ್ಟು ಓದಿ: ಟ್ವಿಟರ್ ಹೊಸ ನಿಯಮ; ಯಶ್, ಅಲ್ಲು ಅರ್ಜುನ್ ಸೇರಿ ಎಲ್ಲಾ ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯ

ಭಾರತದ ಹಿರಿಯ ಬಿಲಿಯನೇರ್ ರತನ್ ಟಾಟಾ, ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಮತ್ತು ಗೌತಮ್ ಅದಾನಿ ಅವರ ಬ್ಲೂ ಟಿಕ್ ಅನ್ನು ತೆಗೆದುಹಾಕಲಾಗಿದೆ. ಬ್ಲ್ಯೂಟಿಕ್ ಜೊತೆಗೆ ಟ್ವಿಟರ್ ಚಂದಾದಾರರು ಎಡಿಟ್ ಟ್ವೀಟ್, ಬುಕ್‌ಮಾರ್ಕ್ ಫೋಲ್ಡರ್‌ಗಳು, ಕಸ್ಟಮ್ ಆ್ಯಪ್ ಐಕಾನ್‌ಗಳು ಮತ್ತು ಎನ್‌ಎಫ್‌ಟಿ ಪ್ರೊಫೈಲ್ ಚಿತ್ರಗಳಂತಹ ಫೀಚರ್‌ಗಳಿಗೆ ಆರಂಭಿಕ ಪ್ರವೇಶವನ್ನು ಪಡೆಯುತ್ತಾರೆ.

ಅಂತಹ ಬಳಕೆದಾರರು ತಮ್ಮ ಆ್ಯಪ್‌ಗಾಗಿ ವಿಭಿನ್ನ ಬಣ್ಣದ ಥೀಮ್‌ಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ, ಟ್ವೀಟ್‌ಗಳಲ್ಲಿ ಅವರ ಪ್ರತ್ಯುತ್ತರಕ್ಕೆ ಆದ್ಯತೆ ನೀಡಲು ಮತ್ತು ಇತರ ಬಳಕೆದಾರರಿಗೆ ಗೋಚರಿಸುವ ಮೊದಲು ಟ್ವೀಟ್ ಅನ್ನು ರದ್ದುಗೊಳಿಸುವ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ಅಮೆರಿಕದಲ್ಲಿ ಟ್ವಿಟರ್ ಬ್ಲ್ಯೂ ಚೆಕ್‌ಮಾರ್ಕ್‌ಗಾಗಿ ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಸಾಧನಗಳಲ್ಲಿ ತಿಂಗಳಿಗೆ 11ಡಾಲರ್ ಶುಲ್ಕ ವಿಧಿಸಲಾಗಿದ್ದು ವೆಬ್‌ಗಾಗಿ ಮಾಸಿಕ ಶುಲ್ಕ 8 ಡಾಲರ್ ಆಗಿದೆ. ಅಮೆರಿಕಾದಲ್ಲಿ ವಾರ್ಷಿಕ ಯೋಜನಾ ಶುಲ್ಕ 84 ಡಾಲರ್ ಆಗಿದೆ.

ಟ್ವಿಟರ್ ಈಗ ಹಲವಾರು ದೇಶಗಳಲ್ಲಿ ತನ್ನ ಪ್ರೀಮಿಯಂ ಸೇವೆಯನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸೌದಿ ಅರೇಬಿಯಾ, ಯುಕೆ, ಜಪಾನ್, ಜರ್ಮನಿ ಮತ್ತು ಫ್ರಾನ್ಸ್ ಸೇರಿವೆ.

ಟ್ವಿಟರ್ ಬ್ಲ್ಯೂ ಸಬ್‌ಸ್ಕ್ರೈಬರ್‌ಗಳು 4,000 ದೀರ್ಘ ಅಕ್ಷರ ಮಿತಿಯನ್ನು ಪಡೆಯುತ್ತಾರೆ ಆದರೆ ಇತರ ಬಳಕೆದಾರರಿಗೆ ಅಕ್ಷರದ ಮಿತಿ 280 ಆಗಿದೆ. ಪಾವತಿಸಿದ ಸಬ್‌ಸ್ಕ್ರಿಪ್ಶನ್ ಬಳಕೆದಾರರಿಗೆ 60 ನಿಮಿಷಗಳವರೆಗೆ ಅಥವಾ 2 GB ವರೆಗಿನ ದೊಡ್ಡ ವೀಡಿಯೊಗಳನ್ನು ಕೂಡ ಅಪ್‌ಲೋಡ್ ಮಾಡಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ