ನವದೆಹಲಿ: ಖ್ಯಾತ ವ್ಯಂಗ್ಯ ಚಿತ್ರಕಾರ ಮಂಜುಲ್ ಅವರ ಸಾಮಾಜಿಕ ಜಾಲತಾಣದ ಪ್ರೊಫೈಲ್ ವಿರುದ್ಧ ಕಾನೂನು ಕ್ರಮ ಕೆಗೆದುಕೊಳ್ಳುವಂತೆ ಭಾರತದ ಕಾನೂನು ಸಚಿವಾಲಯದಿಂದ ತನಗೆ ಲೀಗಲ್ ಮನವಿ ಬಂದಿದೆಯೆಂದು ಟ್ವಿಟ್ಟರ್ ಸಂಸ್ಥೆಯು ಈ ಕಲಾವಿದನಿಗೆ ತಿಳಿಸಿದೆ. ಖುದ್ದು ಮಂಜುಲ್, ಸಂಸ್ಥೆಯಿಂದ ತಮಗೆ ಬಂದಿರುವ ಮೇಲನ್ನು ಶುಕ್ರವಾರದಂದು ಶೇರ್ ಮಾಡಿದ್ದಾರೆ. ‘ಈ ಮನವಿಯ ಹಿನ್ನೆಲೆಯಲ್ಲಿ ಮಂಜುಲ್ ಅವರ ವ್ಯಂಗ್ಯಚಿತ್ರಗಳ ಮೇಲೆ ನಾವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಟ್ಚಿಟ್ಟರ್ ಹೇಳಿದೆ. ‘ಭಾರತದ ಕಾನೂನನ್ನು ಅವರ ಟ್ವೀಟ್ ಉಲ್ಲಂಘಿಸುತ್ತದೆ’ ಎಂದಿರುವ ಭಾರತ ಸರ್ಕಾರವು ಮಂಜುಲ್ ಅವರ ನಿರ್ದಿಷ್ಟ ಟ್ಚೀಟ್ ಬದಲಿಗೆ ಅವರ ಪ್ರೊಫೈಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದೆ.
ಸರ್ಕಾರದ ಮನವಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಮಂಜುಲ್ ಅವರು ಕಾನೂನಿನ ನೆರವು ಪಡೆದುಕೊಳ್ಳಬಹುದು, ಅಥವಾ ನಾಗರಿಕ ಸಮಾಜ ಸಂಸ್ಥೆಗಳನ್ನು ಸಂಪರ್ಕಿಸಿ ವಿಷಯವನ್ನು ಬಗೆಹರಿಸಿಕೊಳ್ಳಬಹುದು ಇಲ್ಲವೇ ತಾನೇ ಖುದ್ದಾಗಿ ಆ ಟ್ವೀಟನ್ನು ತೆಗೆದುಹಾಕಬಹುದು, ಎಂದು ಟ್ವಿಟ್ಟರ್ ಸಂಸ್ಥೆ ಹೇಳಿದೆ.
ತಮ್ಮ ಮೇಲ್ ಅನ್ನು ಶೇರ್ ಮಾಡುತ್ತಾ ಮಂಜುಲ್ ಅವರು, ‘ಜೈ ಹೋ ಮೋದಿ ಜೀ ಕಿ ಸರ್ಕಾರ್ ಕೀ,’ ಅಂತ ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ. ತಮ್ಮ ಯಾವ ಟ್ವೀಟ್ ಸರ್ಕಾರಕ್ಕೆ ಮುಜುಗುರವನ್ನು ಉಂಟು ಮಾಡಿದೆ ಅಂತ ತಿಳಿಸಿದ್ದರೆ ಚೆನ್ನಾಗಿತ್ತು ಎಂದು ಅವರು ಹೇಳಿದ್ದಾರೆ.
जय हो मोदी जी की सरकार की! pic.twitter.com/VylSsI2tVX
— MANJUL (@MANJULtoons) June 4, 2021
ಮಂಜುಲ್ ಅವರು ಕೋವಿಡ್-19 ಸೋಂಕಿನ ಎರಡನೇ ಸೃಷ್ಟಿಸಿರುವ ಹಾಹಾಕಾರದ ವಾಸ್ತವಿಕತೆಯನ್ನು ತಮ್ಮ ವ್ಯಂಗ್ಯಚಿತ್ರಗಳಲ್ಲಿ ತೋರಿಸಿ ಆಮೆಗತಿಯಲ್ಲಿ ಸಾಗುತ್ತಿರುವ ಲಸಿಕಾ ಅಭಿಯಾನವನ್ನು ಟೀಕಿಸಿದ್ದರು.
ಸರ್ಕಾರದ ಆದೇಶದ ಮೇರೆಗೆ ಏಪ್ರಿಲ್ನಲ್ಲಿ 52 ಟ್ವೀಟ್ಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದು ಹಾಕಲಾಗಿತ್ತು. ಸದರಿ ಟ್ವೀಟ್ಗಳಿ ಸುಳ್ಳು ಸುದ್ದಿಗಳನ್ನು ಹಬ್ಬುತ್ತಿವೆ ಎಂದು ಸರ್ಕಾರ ಹೇಳಿತ್ತಾದರೂ ಅವು ಎರಡನೇ ಅಲೆಯಲ್ಲಿ ರಾಜ್ಯಗಳು ಆಸ್ಪತ್ರೆಗಳಲ್ಲಿ ಎದುರಿಸುತ್ತಿರುವ ಬೆಡ್ಗಳ ಕೊರತೆ, ಆಕ್ಸಿಜನ್ ಅಲಭ್ಯತೆ, ಔಷಧಿ ಮತ್ತು ಲಸಿಕೆಗಳ ಅಭಾವ ಮೊದಲಾದ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಅವು ಖಂಡಿಸಿದ್ದವು
ಕಾಂಗ್ರೆಸ್ ಧುರೀಣರಾದ ಪವನ್ ಖೇರಾ, ರೇವಂತ್ ರೆಡ್ಡಿ, ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿರುವ ಮೊಲೊಯ್ ಘಾತಕ್, ನಟ ವಿನೀತ್ ಕುಮಾರ್ ಸಿಂಗ್, ಸಿನಿಮಾ ನಿರ್ಮಾಪಕರಾದ ವಿನೋದ್ ಕಪ್ರಿ ಮತ್ತು ಅವಿನಾಶ್ ದಾಸ ಅವರ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡಲಾಗಿತ್ತು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಟ್ವಿಟ್ಟರ್ ನಡುವೆ ಕಾಂಗ್ರಸ್ ಪಕ್ಷದ ಟೂಲ್ಕಿಟ್ ಎಂದು ಅರೋಪಿಸಲಾಗಿರುವ ಡಾಕ್ಯುಮೆಂಟ್ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಕಾನೂನುಗಳ ಹಿನ್ನೆಲೆಯಲ್ಲಿ ನಡೆಯುತ್ತಿರವ ಸಂಘರ್ಷದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕೊರೊನಾ ವೈರಸ್ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರು ಸರ್ಕಾರಕ್ಕೆ ಮಸಿ ಬಳಿಯುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ಟೂಲ್ಕಿಟ್ ಅಥವಾ ಅಪಪ್ರಚಾರ ಸಾಮಗ್ರಿ ಸೃಷ್ಟಿಸಿದೆಯೆಂದು ಅರೋಪಿಸಿ ಮೇ 18 ರಂದು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರ ಟ್ವೀಟ್ ಮಾಡಿದ್ದರು.
ಪಾತ್ರ ಅವರ ಟ್ವೀಟ್ ಅನ್ನು ಟ್ವಿಟ್ಟರ್, ‘ಮ್ಯಾನಿಪುಲೇಟೆಡ್ ಮಿಡಿಯಾ’ ಎಂದು ವರ್ಗೀಕರಿಸಿತ್ತು. ಆದರೆ ಕೆಲ ದಿನಗಳ ನಂತರ ದೆಹಲಿ ಪೊಲೀಸ್ ದಕ್ಷಿಣ ದೆಹಲಿಯ ಲಾಡೋ ಸರಾಯಿ ಮತ್ತು ಗುರುಗ್ರಾಮ್ನಲ್ಲಿರುವ ಟ್ವಿಟ್ಟರ್ ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಗಳನ್ನು ನಡೆಸಿತ್ತು.
ಸಾಮಾಜಿಕ ಜಾಲತಾಣ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಡಿಜಿಟಲ್ ಸುದ್ದಿ ಸರಕನ್ನು ಒಂದು ನಿರ್ದಿಷ್ಟ ಮಿತಿಯೊಳಗಿರಿಸಲು ಫೆಬ್ರುವರಿ 25ರಂದು ಹಲವಾರು ಹೊಸ ಕಾಯ್ದೆಗಳನ್ನು ಜಾರಿಗೊಳಿಸಲಾಗಿತ್ತು. ಈ ಹೊಸ ಕಾನೂನುಗಳಿಂದಾಗಿ ಈ ಜಾಲತಾಣಗಳು ಪ್ರಥಮ ಬಾರಿಗೆ ಸರ್ಕಾರದ ಮೇಲ್ವಿಚಾರಣೆ ವ್ಯಾಪ್ತಿಯಲ್ಲಿ ಬರುವಂತಾಗಿದೆ.
ಹೊಸ 2021 ಮಾಹಿತಿ ತಂತ್ರಜ್ಞಾನದ ( ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ಕಾನೂನುಗಳ ಪ್ರಕಾರ ಈ ಪ್ಲಾಟ್ಫಾರ್ಮ್ಗಳು; ಕಾನೂನುಗಳನ್ನು ಪಾಲಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮುಖ್ಯ ಸಮನ್ವಯಾಧಿಕಾರಿ, ಕಾನೂನು ಎಜೆನ್ಸಿಗಳೊಂದಿಗೆ ಸಹಕರಿಸಲು ನೋಡಲ್ ಅಧಿಕಾರಿಗಳು ಮತ್ತು ಕುಂದು-ಕೊರತೆ ಅಧಿಕಾರಗಳನ್ನು ನೇಮಕ ಮಾಡಿಕೊಳ್ಳಬೇಕು. ಹಾಗೆಯೇ 50 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಸಾಮಾಜಿಕ ಜಾಲತಾಣ ಸರ್ಕಾರದ ಮನವಿ ಮೇರೆಗೆ ಸುದ್ದಿಯೊಂದರ ಮೂಲ ಕರ್ತೃವನ್ನು ಗುರುತಿಸಲು ಶಕ್ತವಾಗಿರಬೇಕು.
ಇದನ್ನೂ ಓದಿ: ಮೋಹನ್ ಭಾಗವತ್ ಸೇರಿ ಆರ್ಎಸ್ಎಸ್ನ ಪ್ರಮುಖ ನಾಯಕರ ಟ್ವಿಟರ್ ಖಾತೆಯ ಬ್ಲ್ಯೂಟಿಕ್ ಕೂಡ ಮಾಯ..!