
ದೆಹಲಿ: ಇಂದು ಅಂದರೆ ಸೋಮವಾರ ಬೆಳ್ಳಂಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಎನ್ಕೌಂಟರ್ ನಡೆದಿದೆ. ಪ್ರಹ್ಲಾದ್‌ಪುರದಲ್ಲಿ ಪೊಲೀಸರು ಇಬ್ಬರು ಕ್ರಿಮಿನಲ್ಗಳಾದ ರಾಜಾ ಖುರೇಷಿ ಮತ್ತು ರಮೇಶ್ ಬಹದ್ದೂರ್ ಎಂಬುವವರನ್ನು ಗುಂಡು ಹಾರಿಸಿ ಎನ್ಕೌಂಟರ್ ಮಾಡಿದ್ದಾರೆ.
ಎನ್ಕೌಂಟರ್ ಆದ ದುಷ್ಕರ್ಮಿಗಳು ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಆರೋಪಿಗಳ ಬಂಧನಕ್ಕೆ ತೆರಳಿದ್ದ ವೇಳೆ ಎನ್ಕೌಂಟರ್ ಮಾಡಲಾಗಿದೆ. ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಪ್ರಹ್ಲಾದ್‌ಪುರದಲ್ಲಿ ಪ್ರದೇಶದಲ್ಲಿ ಎನ್ಕೌಂಟರ್ ನಡೆದಿದ್ದು, ದೆಹಲಿ ಪೊಲೀಸ್ ವಿಶೇಷ ಘಟಕದ ಪೊಲೀಸರು ಆರೋಪಿಗಳನ್ನು ಹತ್ಯೆಗೈದಿದ್ದಾರೆ.
Published On - 9:35 am, Mon, 17 February 20