ಪೂಂಚ್​​ನಲ್ಲಿ ನದಿಗೆ ಬಿದ್ದ ಬೆಂಗಾವಲು ವಾಹನ; ಇಬ್ಬರು ಪೊಲೀಸ್ ಸಿಬ್ಬಂದಿ ಮರಣ, ನಾಲ್ವರಿಗೆ ಗಾಯ

| Updated By: Lakshmi Hegde

Updated on: Nov 17, 2021 | 9:03 AM

ವಿಭಾಗೀಯ ಪೊಲೀಸ್ ಆಯುಕ್ತ ರಾಘವ್​ ಲಾಂಗರ್​ ಜಮ್ಮುವಿಗೆ ಭೇಟಿ ನೀಡಿದ್ದರು. ಅವರಿಗೆ ಭದ್ರತೆ ನೀಡಲು ಪೂಂಚ್​ ಎಸ್​ಎಸ್​ಪಿ ವಿನೋದ್ ಕುಮಾರ್​ ನೇತೃತ್ವದ ತಂಡ ಅಲ್ಲಿಗೆ ಹೋಗಿತ್ತು.

ಪೂಂಚ್​​ನಲ್ಲಿ ನದಿಗೆ ಬಿದ್ದ ಬೆಂಗಾವಲು ವಾಹನ; ಇಬ್ಬರು ಪೊಲೀಸ್ ಸಿಬ್ಬಂದಿ ಮರಣ, ನಾಲ್ವರಿಗೆ ಗಾಯ
ಸಾಂಕೇತಿಕ ಚಿತ್ರ
Follow us on

ಜಮ್ಮು-ಕಾಶ್ಮೀರದ ಪೂಂಚ್​ ಜಿಲ್ಲೆಯಲ್ಲಿ ಪೊಲೀಸ್​ ವಾಹನ ಸ್ಕಿಡ್​ ಆಗಿ ನದಿಗೆ ಬಿದ್ದ ಪರಿಣಾಮ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟು, ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೂಂಚ್​​ನ ಬಫ್ಲಿಯಾಜ್​ ಪ್ರದೇಶದಲ್ಲಿರುವ ಡ್ರೋಗ್ಜಿಯನ್ ಎಂಬ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪೂಂಚ್‌ನ ಹಿರಿಯ ಪೊಲೀಸ್ ಅಧೀಕ್ಷಕರ ಬೆಂಗಾವಲು ವಾಹನ ಇದಾಗಿದ್ದು, ಚಾಲಕ ನಿಯಂತ್ರಣ ಕಳೆದುಕೊಂಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.  

ಈ ಪೊಲೀಸ್​ ವಾಹನದಲ್ಲಿ ಒಟ್ಟು ಆರು ಮಂದಿ ಸಿಬ್ಬಂದಿ ಇದ್ದು, ಎಲ್ಲರೂ ಗಾಯಗೊಂಡಿದ್ದರು. ಆರೂ ಜನರನ್ನು ಸುರನ್​ಕೋಟೆಯ ಉಪ-ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರಲ್ಲಿ ಒಬ್ಬ ಪೊಲೀಸ್​ ಆಸ್ಪತ್ರೆಗೆ ಹೋಗುವಾಗಲೇ ಮೃತಪಟ್ಟಿದ್ದು,  ಉಳಿದ ಐವರನ್ನು ರಾಜೌರಿ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.  ಹಾಗಿದ್ದಾಗ್ಯೂ ಇನ್ನೊಬ್ಬ ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಲೇ ಮೃತರಾಗಿದ್ದಾರೆ.

ವಿಭಾಗೀಯ ಪೊಲೀಸ್ ಆಯುಕ್ತ ರಾಘವ್​ ಲಾಂಗರ್​ ಜಮ್ಮುವಿಗೆ ಭೇಟಿ ನೀಡಿದ್ದರು. ಅವರಿಗೆ ಭದ್ರತೆ ನೀಡಲು ಪೂಂಚ್​ ಎಸ್​ಎಸ್​ಪಿ ವಿನೋದ್ ಕುಮಾರ್​ ನೇತೃತ್ವದ ತಂಡ ಅಲ್ಲಿಗೆ ಹೋಗಿತ್ತು. ಅದಾದ ಬಳಿಕ ಪೀರ್​ ಕಿ ಗಲಿಯಿಂದ ಮೊಘಲ್​ ರಸ್ತೆಯಲ್ಲಿ ಈ ಬೆಂಗಾವಲು ವಾಹನಗಳೆಲ್ಲ ಬರುತ್ತಿದ್ದವು.  ಇನ್ನು ರಾಜೌರಿ ಆಸ್ಪತ್ರೆಗೆ ದಾಖಲಾದ ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಣೆಗಾಗಿ ಹಲವು ಹಿರಿಯ ಅಧಿಕಾರಿಗಳು ಭೇಟಿಕೊಟ್ಟಿದ್ದರು.

ಇದನ್ನೂ ಓದಿ: Hair Care Tips: ಕೂದಲು ಬೆಳ್ಳಗಾಗುತ್ತಿದೆಯೇ? ಪರಿಹಾರಕ್ಕೆ ಈ ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ