Hair Care Tips: ಕೂದಲು ಬೆಳ್ಳಗಾಗುತ್ತಿದೆಯೇ? ಪರಿಹಾರಕ್ಕೆ ಈ ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ

TV9 Digital Desk

| Edited By: shruti hegde

Updated on:Nov 17, 2021 | 8:18 AM

ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ನಿವಾರಿಸಲು ಪರಿಹಾರಗಳೇನು? ಎಂಬುದರ ಕುರಿತಾಗ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Hair Care Tips: ಕೂದಲು ಬೆಳ್ಳಗಾಗುತ್ತಿದೆಯೇ? ಪರಿಹಾರಕ್ಕೆ ಈ ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ
ಸಂಗ್ರಹ ಚಿತ್ರ

ಕಪ್ಪಾದ ಉದ್ದವಾದ ಕೂದಲು ಹೊಂದಿರಬೇಕು ಎಂಬುದು ಕೆಲವರ ಆಸೆಯಾಗಿರುತ್ತದೆ. ವಯಸ್ಸಾದರೂ ಸಹ ಕೂದಲು ಕಪ್ಪಾಗಿರಿಸಲು ಹೆಚ್ಚು ಜನರು ಪ್ರಯತ್ನಿಸುತ್ತಾರೆ. ಸುಂದರವಾದ ಉದ್ದನೇಯ ಕೂದಲು (Hair Care) ನಿಮ್ಮ ಸೌಂದರ್ಯವನ್ನು (Beauty) ಮತ್ತಷ್ಟು ಹೆಚ್ಚಿಸುತ್ತದೆ. ಹೆಚ್ಚಿನ ಒತ್ತಡ ಮತ್ತು ಜೀವನ ಶೈಲಿಯಲ್ಲಿನ (Lifestyle) ಕೆಲವು ಬದಲಾವಣೆಗಳಿಂದ ಕೂದಲು ಬೆಳ್ಳಗಾಗುತ್ತಿರುವ (White Hair) ಸಮಸ್ಯೆ ಕಾಡುತ್ತಿರಬಹುದು. ಹಾಗಿರುವಾಗ ಈ ಸಮಸ್ಯೆಯನ್ನು ನಿವಾರಿಸಲು ಪರಿಹಾರಗಳೇನು? ಎಂಬುದರ ಕುರಿತಾಗ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹಲವು ಜನರಿಗೆ ಬೂದು ಕೂದಲು ಅಥವಾ ಬಿಳಿ ಕೂದಲು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಅದರಲ್ಲಿಯೂ ಕೆಲವರು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಬಿಳಿ ಕೂದಲು ಹೊಂದುತ್ತಿದ್ದಾರೆ. ಪೌಷ್ಟಿಕ ತಜ್ಞರಾದ ಸೋನಾಲಿ ಅವರು ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಹೀಗಿರುವಾಗ ನಿಮ್ಮ ಕೂದಲ ಬಿಳಿಯಾಗುವುದನ್ನು ತಡೆಯಲು ಕೆಲವೊಂದಿಷ್ಟು ಸಲಹೆಗಳಿವೆ ಎಂಬ ಶೀರ್ಷಿಕೆ ನೀಡುವ ಮೂಲಕ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

View this post on Instagram

A post shared by Shonali Sabherwal (@soulfoodshonali)

ಬಿಳಿ ಕೂದಲು ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ ಕಡಲೆ ಕಡಲೆಯನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದರಲ್ಲಿ ದೇಹದ ಆರೋಗ್ಯ ಜೊತೆಗೆ ಕೂದಲಿನ ಆರೋಗ್ಯಕ್ಕೆ ಬೇಕಾಗಿರುವ ಪೋಷಕಾಂಶಗಳು ಕಂಡು ಬರುತ್ತವೆ. ಇದರಲ್ಲಿ ಸತು, ಮೆಗ್ನೀಶಿಯಮ್, ಸೆಲೆನಿಯಮ್, ತಾಮ್ರ, ಸತು ಮತ್ತು ಕಬ್ಬಿಣದ ಅಂಶ ಇರುತ್ತದೆ.

ನೆಲ್ಲಿಕಾಯಿ ನೆಲ್ಲಿಕಾಯಿ ಸೇವನೆ ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ನೀವು ಹಾಗಿರುವಾಗ ನೆಲ್ಲಿಕಾಯಿ ಜ್ಯೂಸ್​ ಅಥವಾ ನೆಲ್ಲಿಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ನಿಮ್ಮ ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.

ಪೌಷ್ಟಿಕ ಮತ್ತು ಶುದ್ಧ ಆಹಾರವನ್ನು ಸೇವಿಸಿ ನೀವು ಸೇವಿಸುವ ಆಹಾರ ಶುದ್ಧವಾಗಿರಲಿ ಅಂದರೆ ಶುಚಿತ್ವವನ್ನು ಹೆಚ್ಚು ಕಾಯ್ದುಕೊಳ್ಳಿ. ಸಕ್ಕರೆ, ಡೈರಿ ಉತ್ಪನ್ನಗಳು, ಪ್ಯಾಕೇಜ್ ಮಾಡಿದ ಆಹಾರ, ಸಮಸ್ಕರಿಸಿದ ಆಹಾರ ಸೇವಿಸುವಾಗ ಗಮನವಿರಲಿ. ಜೊತೆಗೆ ಹೆಚ್ಚು ಪ್ರೋಟೀನ್​ಯುಕ್ತ ಆಹಾರವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ಸ್ವಚ್ಚತೆ ನೀವು ನಿಮ್ಮ ಕೂದಲ ಆರೋಗ್ಯನ್ನು ಕಾಪಾಡಿಕೊಳ್ಳುವುದಾದರೆ ಸ್ವಚ್ಛವಾಗಿರಿ. ವಾರಕ್ಕೆ ಎರಡು ಬಾರಿ ತಲೆ ಸ್ನಾನ ಮಾಡಿ. ಇದು ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ ಜೊತೆಗೆ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:

Hair Care: ಉದ್ದ ಕೂದಲು ಮತ್ತು ಹೊಳಪಿನ ಕೇಶರಾಶಿ ಪಡೆಯಲು ಇಲ್ಲಿವೆ ಕೆಲವು ಸರಳ ಸಲಹೆಗಳು

Hair Care Tips: ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವೊಂದಿಷ್ಟು ಟಿಪ್ಸ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada