Facial Steaming: ಫೇಷಿಯಲ್ ಸ್ಟೀಮಿಂಗ್ ಮಾಡುವುದು ಒಳ್ಳೆಯದೇ? ತಜ್ಞರ ಸಲಹೆಗಳೇನು?
ನೀವು ಫೇಸ್ ಸ್ಟೀಮಿಂಗ್ ಮಾಡಬೇಕು ಅಂದುಕೊಂಡಿದ್ದರೆ ಅಥವಾ ಮಾಡುತ್ತಿದ್ದರೆ ಅದು ಒಳ್ಳೆಯದೇ? ಅದರಿಂದ ಮುಖ ಕಾಂತಿ ಪಡೆದುಕೊಳ್ಳುತ್ತದೆಯೇ? ಚರ್ಮದ ಆರೋಗ್ಯಕ್ಕೆ ಒಳ್ಳೆಯದೇ? ಈ ಕುರಿತಾಗಿ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಾವೆಲ್ಲರೂ ಸುಂದರವಾದ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಇಷ್ಟಪಡುತ್ತೇವೆ. ನಾವು ನಮ್ಮ ಮುಖದ ಕಾಂತಿ ಹಾಳಾಗಲು ಎಂದೂ ಬಿಡುವುದಿಲ್ಲ. ತ್ವಚೆ ಕಾಂತಿ ಹೆಚ್ಚಿಸುವ ಉತ್ಪನ್ನಗಳು ಬಹುಬೇಗ ನಮ್ಮನ್ನು ಸೆಳೆಯುತ್ತವೆ. ಮಾರುಕಟ್ಟೆಯಲ್ಲಿ ಆ ವಸ್ತುವನ್ನು ಕೊಂಡುಬಿಡೋಣ ಅನ್ನುವಷ್ಟರ ಮಟ್ಟಿಗೆ ಮನಸೆಳೆಯುತ್ತದೆ. ಹಾಗಿರುವಾಗ ಡಾ. ನಿಕೇತಾ ಅವರು ಇನ್ಸ್ಟಾಗ್ರಾಮ್ನಲ್ಲಿ ಈ ಕುರಿತಂತೆ ಪೋಸ್ಟ್ ಹಂಚಿಕೊಂಡಿದ್ದಾರೆ. ನೀವು ಫೇಸ್ ಸ್ಟೀಮಿಂಗ್ ಮಾಡಬೇಕೆ ಅಥವಾ ಬೇಡವೇ? ಎಂಬುದರ ಕುರಿತಾಗಿ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನೀವು ಫೇಸ್ ಸ್ಟೀಮಿಂಗ್ ಮಾಡಬೇಕು ಅಂದುಕೊಂಡಿದ್ದರೆ ಅಥವಾ ಮಾಡುತ್ತಿದ್ದರೆ ಅದು ಒಳ್ಳೆಯದೇ? ಅದರಿಂದ ಮುಖ ಕಾಂತಿ ಪಡೆದುಕೊಳ್ಳುತ್ತದೆಯೇ? ಚರ್ಮದ ಆರೋಗ್ಯಕ್ಕೆ ಒಳ್ಳೆಯದೇ? ಈ ಕುರಿತಾಗಿ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸ್ಟೋಮಿಂಗ್ ಮಾಡುವುದು ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ. ನಿಮ್ಮ ಮುಖಕ್ಕೆ ಹಬೆಯಾಡಿಸುವುದರಿಂದ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಇದು ಜಿಗುಟಾದ ಮೇದೋಗ್ರಂಥಿಗಳ ಸ್ರಾವವನ್ನು ಕರಗಿಸುತ್ತದೆ.
View this post on Instagram
ಫೇಷಿಯಲ್ ಸ್ಟೀಮಿಂಗ್ ಪ್ರಯೋಜನಗಳು *ಸ್ಟೀಮ್ ನಿಮ್ಮ ಮುಖದ ಮೇಲಿನ ರಂಧ್ರಗಳನ್ನು ತೆರೆಯುತ್ತದೆ. ಮುಖದಲ್ಲಿನ ಕೊಳೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. *ಇದು ಕಪ್ಪು ಕಲೆಯನ್ನು ಮೃದುಗೊಳಿಸುತ್ತದೆ. ಸ್ಕ್ರಬಿಂಗ್ ಮಾಡುವಾಗ ಅವುಗಳನ್ನು ಸುಲಭದಲ್ಲಿ ತೆಗೆದು ಹಾಕುತ್ತದೆ. *ಬೆಚ್ಚಗಿನ ಉಗಿ ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.
ನಿಮ್ಮ ಮುಖವನ್ನು ಹೇಗೆ ಸ್ಟೀಮ್ ಮಾಡುವುದು? *ನಿಮ್ಮ ಮುಖವನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ *10 ನಿಮಿಷಗಳ ಕಾಲ ಸ್ಟೀಮ್ ಮಾಡಿ *ನಂತರ ಮುಖದಲ್ಲಿನ ನೀರಿನಾಂಶವನ್ನು ಶುದ್ಧ ವಸ್ತ್ರದಿಂದ ತೊಳೆಯಿರಿ *ಮುಖಕ್ಕೆ ಅಲೋವೆರಾ ಜಲ್ ಹಚ್ಚಿ, 5 ನಿಮಿಷದ ಬಳಿಕ ಮುಖ ತೊಳೆದುಕೊಳ್ಳಿ
ಇದನ್ನೂ ಓದಿ:
Health Tips: ಧೂಮಪಾನ ಒಮ್ಮೆಲೆ ಬಿಡಲು ಪ್ರಯತ್ನಿಸುತ್ತಿದ್ದೀರಾ? ವೈದ್ಯರ ಸಲಹೆ ಏನು ತಿಳಿಯಿರಿ
Health Tips: ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆ? ಇಲ್ಲಿವೆ ಸಲಹೆಗಳು