Health Tips: ಧೂಮಪಾನ ಒಮ್ಮೆಲೆ ಬಿಡಲು ಪ್ರಯತ್ನಿಸುತ್ತಿದ್ದೀರಾ? ವೈದ್ಯರ ಸಲಹೆ ಏನು ತಿಳಿಯಿರಿ

ನೀವು ಒಮ್ಮೆಲೆಗೆ ಧೂಮಪಾನವನ್ನು ತ್ಯಜಿಸಿದಾಗ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ. ಒಬ್ಬ ವ್ಯಕ್ತಿ ಸಿಗರೇಟ್ ಸೇದುವುದನ್ನು ಬಿಟ್ಟರೆ ದೇಹದಲ್ಲಿ ಎಷ್ಟು ಬದಲಾವಣೆಗಳಾಗುತ್ತವೆ ಎಂದು ವೈದ್ಯರು ವಿವರಣೆ ನೀಡಿದ್ದಾರೆ.

Health Tips: ಧೂಮಪಾನ ಒಮ್ಮೆಲೆ ಬಿಡಲು ಪ್ರಯತ್ನಿಸುತ್ತಿದ್ದೀರಾ? ವೈದ್ಯರ ಸಲಹೆ ಏನು ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Nov 15, 2021 | 7:10 AM

ಧೂಮಪಾನವು ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಒಂದು ಬಾರಿ ಧೂಮಪಾನ ಮಾಡಲು ಶುರುಮಾಡಿದರೆ. ಅದನ್ನು ಬಿಡುವುದು ಸುಲಭದ ಮಾತಲ್ಲ. ಹೀಗಾಗಿಯೇ ಧೂಮಪಾನವನ್ನು(smoking) ತ್ಯಜಿಸುವುದು ದೊಡ್ಡ ಸವಾಲು ಎಂದು ಹೇಳಲಾಗುತ್ತದೆ. ಜತೆಗೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇದು ಶ್ವಾಸಕೋಶ ಸೇರಿದಂತೆ ದೇಹದ ಎಲ್ಲಾ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ವೈದ್ಯರು ಸಹ ಸಿಗರೇಟ್ ಸೇದುವುದನ್ನು ನಿಲ್ಲಿಸಲು ಸಲಹೆ ನೀಡುತ್ತಾರೆ. ನೀವು ಒಮ್ಮೆಲೆಗೆ ಧೂಮಪಾನವನ್ನು ತ್ಯಜಿಸಿದಾಗ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ. ಒಬ್ಬ ವ್ಯಕ್ತಿ ಸಿಗರೇಟ್ ಸೇದುವುದನ್ನು ಬಿಟ್ಟರೆ ದೇಹದಲ್ಲಿ ಎಷ್ಟು ಬದಲಾವಣೆಗಳಾಗುತ್ತವೆ ಎಂದು ವೈದ್ಯರು ವಿವರಣೆ ನೀಡಿದ್ದಾರೆ.

ಧೂಮಪಾನ ತ್ಯಜಿಸಿದ 8 ಗಂಟೆಗಳ ನಂತರ ನೀವು ಧೂಮಪಾನವನ್ನು ತ್ಯಜಿಸಿದ 8 ಗಂಟೆಗಳ ನಂತರ, ನಿಮ್ಮ ರಕ್ತದಲ್ಲಿನ ನಿಕೋಟಿನ್ ಮತ್ತು ಕಾರ್ಬನ್ ಮಾನಾಕ್ಸೈಡ್ ಪ್ರಮಾಣವು ಕಡಿಮೆಯಾಗುತ್ತದೆ. ಆದರೆ ಅರ್ಧದಷ್ಟು ಇನ್ನೂ ಹಾಗೆಯೇ ಇರುತ್ತದೆ. ಕಾರ್ಬನ್ ಮಾನಾಕ್ಸೈಡ್ ಒಂದು ರಾಸಾಯನಿಕವಾಗಿದ್ದು, ಅದು ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ತೆಗೆದುಹಾಕುತ್ತದೆ. ಇದು ಧೂಮಪಾನಿಗಳಲ್ಲಿ ಸ್ನಾಯು ಮತ್ತು ಮೆದುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಅದೇ ಸಮಯದಲ್ಲಿ 8 ಗಂಟೆಗಳ ನಂತರ ನೀವು ಸಿಗರೇಟ್ ಸೇದಲು ಬಹಳಷ್ಟು ಕಡುಬಯಕೆಗಳನ್ನು ಹೊಂದಿರುತ್ತೀರಿ. ಒಮ್ಮೆಗೆ ಅಂದರೆ 5-10 ನಿಮಿಷಗಳ ಕಾಲ ಧೂಮಪಾನ ಮಾಡುವ ಬಯಕೆಯು ಅಗಾಧವಾಗಿರುತ್ತದೆ. ಇದಕ್ಕಾಗಿ ಚೂಯಿಂಗ್ ಗಮ್ ಸೇವಿಸಿ. ಇದು ಧೂಮಪಾನ ಮಾಡುವ ಬಯಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಧೂಮಪಾನ ತ್ಯಜಿಸಿದ 12 ಗಂಟೆಗಳ ನಂತರ ನೀವು ಧೂಮಪಾನವನ್ನು ತ್ಯಜಿಸಿದ 12 ಗಂಟೆಗಳ ನಂತರ ದೇಹದಲ್ಲಿನ ಕಾರ್ಬನ್ ಮಾನಾಕ್ಸೈಡ್ ಮಟ್ಟವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ದೇಹದಲ್ಲಿ ಬದಲಾವಣೆಯಾಗುತ್ತದೆ. ವಿಶೇಷವಾಗಿ ಹೃದಯದ ಕೆಲಸದಲ್ಲಿ ಬದಲಾವಣೆ ಆಗುತ್ತದೆ. ಏಕೆಂದರೆ ಹೃದಯವು ಆಮ್ಲಜನಕಕ್ಕಾಗಿ ಹೆಚ್ಚು ಶ್ರಮಿಸಬೇಕಾಗಿಲ್ಲ.

ಒಂದು ದಿನದ ನಂತರ ನೀವು ದಿನಕ್ಕೆ ಒಂದು ಪ್ಯಾಕ್ ಸಿಗರೇಟ್ ಸೇದುವವರಾದರೆ ಧೂಮಪಾನ ಮಾಡದವರಿಗಿಂತ ಹೃದಯಾಘಾತದ ಸಾಧ್ಯತೆ ಎರಡು ಪಟ್ಟು ಹೆಚ್ಚು. ನೀವು ಇಡೀ ದಿನ ಸಿಗರೇಟ್ ಇಲ್ಲದೆ ಹೊರಗೆ ಹೋದರೆ ನೀವು ನಿಧಾನವಾಗಿ ಧೂಮಪಾನವನ್ನು ಬಿಡಬಹುದು. ನೀವು ಧೂಮಪಾನವನ್ನು ತ್ಯಜಿಸಿದ ಎರಡು ದಿನಗಳ ನಂತರ ನಿಮ್ಮ ದೇಹದಲ್ಲಿ ಕೆಲವು ಬದಲಾವಣೆಗಳು ಆಗುತ್ತದೆ. ಮತ್ತೊಂದೆಡೆ ದೇಹದಲ್ಲಿರುವ ತ್ಯಾಜ್ಯವನ್ನು ಹೊರಹಾಕುವ ಪ್ರಕ್ರಿಯೆಯೂ ವೇಗಗೊಳ್ಳುತ್ತದೆ. ಅದೇ ಸಮಯದಲ್ಲಿ ಇದು ನಿಕೋಟಿನ್ ಅನ್ನು ನಿವಾರಿಸುತ್ತದೆ. ಈ ಸಮಯದಲ್ಲಿ ವಿಶ್ರಾಂತಿಯ ಕೊರತೆ, ತಲೆಸುತ್ತು, ಹಸಿವು ಅಥವಾ ಸುಸ್ತು ಸಾಮಾನ್ಯವಾಗಿರುತ್ತದೆ. ಹೆಚ್ಚಿನವರಿಗೆ ತೀವ್ರ ತಲೆನೋವು ಕೂಡ ಇರುತ್ತದೆ. ಆದರೆ ಕ್ರಮೇಣ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಲು ಪ್ರಾರಂಭಿಸುತ್ತದೆ.

2 ವಾರಗಳಿಂದ 3 ತಿಂಗಳವರೆಗೆ ನೀವು ಧೂಮಪಾನವನ್ನು ತ್ಯಜಿಸಿದ 2 ವಾರಗಳಿಂದ 3 ತಿಂಗಳವರೆಗೆ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ. ಈ ಸಮಯದಲ್ಲಿ ಶ್ವಾಸಕೋಶಗಳು ಬಲಗೊಳ್ಳುತ್ತವೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ನೀವು ವ್ಯಾಯಾಮ ಮಾಡುವಾಗ ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಒಂದು ವರ್ಷದ ನಂತರ ನೀವು ಧೂಮಪಾನವನ್ನು ತ್ಯಜಿಸಿದ ಒಂದು ವರ್ಷದ ನಂತರ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಈ ಸಮಯದಲ್ಲಿ ಹೃದ್ರೋಗದ ಅಪಾಯವು ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗುತ್ತದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಕೂಡ ಕಡಿಮೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ನವಿಲುಕೋಸು ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯದಲ್ಲಿನ ಬದಲಾವಣೆಯ ಬಗ್ಗೆ ತಿಳಿಯಿರಿ

ಹದಿಹರೆಯದ ವಯಸ್ಸಿನಲ್ಲಿ ಮದ್ಯಪಾನ‌ ಮಾಡಿ ಹೃದಯ ಆರೋಗ್ಯ ಸಮಸ್ಯೆ ತಂದುಕೊಂಡೀರಿ; ಎಚ್ಚರ!

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ