Children’s Day 2021: ಮಕ್ಕಳ ದಿನಾಚರಣೆಯ ಇತಿಹಾಸ ಮತ್ತು ಶುಭಕೋರಲು ಕೆಲವು ಸಂದೇಶಗಳು ಇಲ್ಲಿವೆ

ಮಕ್ಕಳ ದಿನಾಚರಣೆ 2021: ಈ ವಿಶೇಷ ದಿನದಂದು ಮಕ್ಕಳಿಗೆ ಶುಭ ಹಾರೈಸಲು ಕೆಲವು ಆಕರ್ಷಕ ಸಂದೇಶಗಳು ಈ ಕೆಳಗಿನಂತಿವೆ. ಈ ಕೆಲವು ಸಾಲುಗಳನ್ನು ಹೇಳುತ್ತಾ ಕಲಿಯುವ ಮಕ್ಕಳಿಗೆ ವಿಶೇಷವಾಗಿ ಶುಭಾಶಯ ತಿಳಿಸಿ.

Children's Day 2021: ಮಕ್ಕಳ ದಿನಾಚರಣೆಯ ಇತಿಹಾಸ ಮತ್ತು ಶುಭಕೋರಲು ಕೆಲವು ಸಂದೇಶಗಳು ಇಲ್ಲಿವೆ
Children's Day 2021
Follow us
TV9 Web
| Updated By: shruti hegde

Updated on: Nov 14, 2021 | 9:14 AM

ಮುಗ್ಧ ಮಗುವಿನ ನಗುವಿಗೆ ನಮ್ಮೆಲ್ಲಾ ಬೇಸರ, ನೋವನ್ನು ಮರೆಸುವ ಶಕ್ತಿಯಿದೆ. ನಿಷ್ಕಲ್ಮಷ ಹೃದಯದ ಮಕ್ಕಳು ಎಂದಿಗೂ ದೊಡ್ಡವರಂತೆ ಅಸಹ್ಯ ಪಡುವುದಿಲ್ಲ, ಇತರರಿಗೆ ನೋವುಂಟು ಮಾಡುವುದಿಲ್ಲ. ಅಂತಹ ನಿಷ್ಕಲ್ಮಷ ಮನಸ್ಸುಳ್ಳ ಮಕ್ಕಳಿಗಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರ್ಷ ವ್ಯಕ್ತಿಗಳಾಗಿ ಬದುಕಿ ಬಾಳುವ ಮಕ್ಕಳ ದಿನವನ್ನು ಪ್ರತೀ ವರ್ಷ ನವೆಂಬರ್ 14ನೇ ತಾರೀಕಿನಂದು ಆಚರಿಸಲಾಗುತ್ತದೆ. ಹಾಗಿರುವಾಗ ಈ ವಿಶೇಷ ದಿನದಂದು ಮಕ್ಕಳಿಗೆ ಶುಭ ಹಾರೈಸಲು ಕೆಲವು ಆಕರ್ಷಕ ಸಂದೇಶಗಳು ಈ ಕೆಳಗಿನಂತಿವೆ. ಈ ಕೆಲವು ಸಾಲುಗಳನ್ನು ಹೇಳುತ್ತಾ ಕಲಿಯುವ ಮಕ್ಕಳಿಗೆ ವಿಶೇಷವಾಗಿ ಶುಭಾಶಯ ತಿಳಿಸಿ.

ನವೆಂಬರ್ ತಿಂಗಳು ಬಂತೆಂದರೆ ಮಕ್ಕಳ ದಿನಾಚರಣೆಯ ಸಂಭ್ರಮ. ಮಕ್ಕಳ ದಿನಾಚರಣೆಯಂದು ಶಾಲೆಯಲ್ಲಿ ಸಾಂಸ್ಕೃತಿ ಚಟುವಟಿಕೆಗಳು, ಆಟ, ಸಂಗೀತ, ನೃತ್ಯ ಹೀಗೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಮಕ್ಕಳನ್ನು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ. ಶಿಕ್ಷಕರು ಮತ್ತು ಮಕ್ಕಳು ಸೇರಿ ಶಾಲೆಯ ಸ್ವಚ್ಛತೆ ಜೊತೆಗೆ ಕಾರ್ಯಕ್ರಮ, ಭಾಷಣದೊಂದಿಗೆ ಈ ದಿನವನ್ನು ಸಮಭ್ರಮದಿಂದ ಆಚರಿಸುತ್ತಾರೆ.

ಶಾಲೆಯಲ್ಲೊಂದೇ ಅಲ್ಲ, ಮಕ್ಕಳ ಪ್ರತಿ ಹಂತದ ರಕ್ಷಣೆ ಪಾಲಕರು, ಪೋಷಕರದ್ದು. ಹಾಗಿರುವಾಗ ಮಕ್ಕಳಿಗೆ ಈ ದಿನ ಪೋಷಕರು ಶುಭಾಶಯ ತಿಳಿಸಲೇಬೇಕು. ಜೊತೆಗೆ ಈ ದಿನದಂದು ಮಕ್ಕಳ ಭವಿಷ್ಯಕ್ಕೆ ಹಾಗೂ ಅವರ ಜೀವನದ ಸಂತೋಷಕ್ಕೆ ಕೆಲವೊಂದಿಷ್ಟು ಮಾರ್ಗಗಳನ್ನು ಕಂಡುಕೊಳ್ಳಿ. ಉಜ್ವಲ ಭವಿಷ್ಯಕ್ಕೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಮಕ್ಕಳಲ್ಲಿ ಭರವಸೆ ತುಂಬಿ.

ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಅಂದಾಕ್ಷಣ ಜವಹರಲಾಲ್ ನೆಹರು ಅವರು ನೆನಪಿಗೆ ಬಂದೇ ಬರುತ್ತಾರೆ. ನೆಹರು ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಮಕ್ಕಳೊಂದಿಗೆ ಮಗುವಾಗಿ, ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ನೆಹರುರವರು ತಮ್ಮ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಒಪ್ಪಿಕೊಂಡರು. ಆ ಬಳಿಕ 1951ರಲ್ಲಿ ನವೆಂಬರ್ 14ರಂದು ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ನೀವು ಫೇಸ್​ಬಕ್​, ವಾಟ್ಸಾಪ್​ ಮೂಲಕ ಶುಭಾಶಯ ಕೋರಲು ಇಲ್ಲಿವೆ ಕೆಲವೊಂದಿಷ್ಟು ಸಂದೇಶಗಳು

*ಮಕ್ಕಳ ಮುಖದಲ್ಲಿನ ಆ ನಗು ನಮ್ಮೆಲ್ಲಾ ನೋವನ್ನು ನಗಿಸುತ್ತದೆ. ಬದುಕಿನಲ್ಲಿ ಎಲ್ಲಾ ರೀತಿಯ ಸಂತೋಷವು ನಿಮ್ಮದಾಗಲಿ ಮಕ್ಕಳೇ.. ಮಕ್ಕಳ ದಿನಾಚರಣೆಯ ಶುಭಾಶಯಗಳು

*ನಮ್ಮ ಮುಂದಿನ ಭವಿಷ್ಯವು ಸಂತೋಷದಿಂದ ತುಂಬಿರುವಂತೆ ಬಯಸುವುದಾದರೆ ನಾವು ನಮ್ಮ ಮಕ್ಕಳಿಗೆ ಮೊದಲು ಮಾನವರಾಗಲು ಕಲಿಸಬೇಕು. ಒಳ್ಳೆಯ ಪಾಠಗಳನ್ನೇ ಹೇಳಿಕೊಡಬೇಕು. ಪೋಷಕರಿಗಾಗಿ ಈ ಸಂದೇಶ ಎನ್ನುತ್ತಾ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿ

*ಮಕ್ಕಳನ್ನು ಒಳ್ಳೆಯವರನ್ನಾಗಿ ಮಾಡಲು ಉತ್ತಮ ಮಾರ್ಗವೆಂದರೆ ಅವರು ಪ್ರತಿ ಕ್ಷಣ ಸಂತೋಷದಲ್ಲಿರುವಂತೆ ನೋಡಿಕೊಳ್ಳುವುದು. ಮಕ್ಕಳ ದಿನಾಚರಣೆಯ ಶುಭಾಶಯಗಳು.

*ಮಕ್ಕಳು ಉಜ್ವಲ ಭವಿಷ್ಯ ಮತ್ತು ನಾಳೆಯ ಕನಸನ್ನು ಹೊತ್ತು ಸಾಗುತ್ತಾರೆ. ನಿಮ್ಮೆಲ್ಲಾ ಕನಸುಗಳು ನನಸಾಗಲು ನಾನು ಜೊತೆಗಿರುತ್ತೇನೆ. ಮಕ್ಕಳ ದಿನಾಚರಣೆಯ ಶುಭಾಶಯಗಳು.

ಇದನ್ನೂ ಓದಿ:

Republic Day Flower Show 2022: 2022ರ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್

ರಾಜೀವ್ ಗಾಂಧಿ ಆರೋಗ್ಯ ವಿವಿಯ 23ನೇ ಘಟಿಕೋತ್ಸವ | ವೈದ್ಯಕೀಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಸಾಧನೆ ಅಪಾರ: ರಾಮನಾಥ​ ಕೋವಿಂದ್

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ