Diabetes Symptoms: ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ; ಭಾರತದಲ್ಲಿ ಎಳೆ ವಯಸ್ಸಿನಲ್ಲೇ ಹೆಚ್ಚುತ್ತಿದೆ ಮಧುಮೇಹ

Health Tips: ಮಹಿಳೆಯರು ಗರ್ಭಿಣಿಯಾಗುವ ಮೊದಲು ಮತ್ತು ಅವರ ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಮತ್ತು ಅವರ ಮಕ್ಕಳನ್ನು ಬಾಲ್ಯ, ಪ್ರೌಢಾವಸ್ಥೆ ಮತ್ತು ಈಗ ವಯಸ್ಕರಾದಂತೆ ಟ್ರ್ಯಾಕ್ ಮಾಡಿರುವ ಸಂಶೋಧಕರು 3 ತಲೆಮಾರಿನಿಂದ ವ್ಯಕ್ತಿಗಳ ಮಧುಮೇಹದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ.

Diabetes Symptoms: ಮಕ್ಕಳಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ; ಭಾರತದಲ್ಲಿ ಎಳೆ ವಯಸ್ಸಿನಲ್ಲೇ ಹೆಚ್ಚುತ್ತಿದೆ ಮಧುಮೇಹ
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Nov 13, 2021 | 4:49 PM

ಭಾರತದ ಯುವಪೀಳಿಗೆಯಲ್ಲಿ ಇತ್ತೀಚೆಗೆ ಡಯಾಬಿಟಿಸ್ (Diabetes) ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. 45ರಿಂದ 50 ವರ್ಷ ದಾಟಿದವರಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದ ಸಕ್ಕರೆ ಕಾಯಿಲೆ ಈಗ ಮಕ್ಕಳಲ್ಲಿ ಕೂಡ ಕಾಣಿಸಿಕೊಳ್ಳತೊಡಗಿದೆ. ಎಳೆ ವಯಸ್ಸಿನಲ್ಲೇ ಮಕ್ಕಳಲ್ಲಿ ಡಯಾಬಿಟಿಸ್ ಅಥವಾ ಮಧುಮೇಹ ಕಾಣಿಸಿಕೊಳ್ಳಲು ಕಾರಣವೇನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಪುಣೆಯ 700ಕ್ಕೂ ಹೆಚ್ಚು ಕುಟುಂಬಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಸಂಶೋಧನಾ ತಂಡವೊಂದು ಆ ಕುಟುಂಬಗಳ ಅನೇಕ ವ್ಯಕ್ತಿಗಳಲ್ಲಿ ಬಾಲ್ಯದಲ್ಲಿಯೇ ಹೆಚ್ಚಿನ ಗ್ಲೂಕೋಸ್‌ನ ಮಟ್ಟವನ್ನು ಪತ್ತೆಹಚ್ಚಿದೆ.

ಪುಣೆಯ ಕೆಇಎಂ ಆಸ್ಪತ್ರೆಯ ಮಧುಮೇಹ ಘಟಕದಲ್ಲಿ ಸಂಶೋಧಕರು ಕಳೆದ 35 ವರ್ಷಗಳಿಂದ ಭಾರತೀಯರಲ್ಲಿ ಮಧುಮೇಹ ಏಕೆ ಸಾಮಾನ್ಯವಾಗಿದೆ ಎಂಬುದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. 1993ರಲ್ಲಿ ಅವರು ಪುಣೆ ಸಮೀಪದ ಆರು ಹಳ್ಳಿಗಳಲ್ಲಿ ಅಧ್ಯಯನವನ್ನು (PMNS) ಪ್ರಾರಂಭಿಸಿದರು. ನಂತರ 700ಕ್ಕೂ ಹೆಚ್ಚು ಕುಟುಂಬಗಳನ್ನು ಅಧ್ಯಯನಕ್ಕೆ ಒಳಪಡಿಸಿದರು. ಆ ಕುಟುಂಬದ ಮಹಿಳೆಯರು ಗರ್ಭಿಣಿಯಾಗುವ ಮೊದಲು ಮತ್ತು ಅವರ ಗರ್ಭಾವಸ್ಥೆಯಲ್ಲಿ ಮಹಿಳೆಯರನ್ನು ಮತ್ತು ಅವರ ಮಕ್ಕಳನ್ನು ಬಾಲ್ಯ, ಪ್ರೌಢಾವಸ್ಥೆ ಮತ್ತು ಈಗ ವಯಸ್ಕರಾದಂತೆ ಟ್ರ್ಯಾಕ್ ಮಾಡಿರುವ ಸಂಶೋಧಕರು 3 ತಲೆಮಾರಿನಿಂದ ವ್ಯಕ್ತಿಗಳ ಮಧುಮೇಹದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಏನಿದು ಸಂಶೋಧನೆ?: ಸಂಶೋಧಕರು 6, 12 ಮತ್ತು 18ನೇ ವಯಸ್ಸಿನಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಸಾಂದ್ರತೆಗಳು ಮತ್ತು ಇತರ ಪ್ರಮುಖ ಡೇಟಾವನ್ನು ಅಳೆಯುತ್ತಾರೆ. 18 ವರ್ಷಗಳಲ್ಲಿ, 37 ಪ್ರತಿಶತ ಪುರುಷರು ಮತ್ತು 18 ಪ್ರತಿಶತ ಮಹಿಳೆಯರಲ್ಲಿ ಗ್ಲೂಕೋಸ್ ಮಟ್ಟ (ಪ್ರಿಡಿಯಾಬಿಟಿಸ್) ಹೆಚ್ಚಾಗಿದೆ. ಗರ್ಭಾಶಯದಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದಿರುವ ಮಕ್ಕಳು ಕೂಡ ಬಾಲ್ಯದಿಂದಲೂ ಮಧುಮೇಹದ ಅಪಾಯಕಾರಿ ಅಂಶಗಳನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತಿಳಿಸಿದೆ. 6 ಮತ್ತು 12 ನೇ ವಯಸ್ಸಿನಲ್ಲಿ ಅಳೆಯುವಾಗಲೂ ಹೆಚ್ಚಿನ ಗ್ಲೂಕೋಸ್‌ನ ಪ್ರವೃತ್ತಿಯು ಗೋಚರಿಸಿದೆ. ಇದು ಕಳಪೆಯಾಗಿ ಕಾರ್ಯ ನಿರ್ವಹಿಸುವ ಮೇದೋಜೀರಕ ಗ್ರಂಥಿಯ ಪರಿಣಾಮವಾಗಿದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.

ಇಂದಿನ ಕಾಲದ ಮಕ್ಕಳು ಕೂಡ ಫಾಸ್ಟ್ ಫುಡ್‪ಗೆ ಮೊರೆ ಹೋಗಿ ದೈಹಿಕ ಚಟುವಟಿಕೆಗಳು ಇಲ್ಲದೆ ಇರುವ ಕಾರಣದಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದೆ. ಇದು ಮಧುಮೇಹಕ್ಕೆ ಪ್ರಮುಖ ಕಾರಣವೆನ್ನಬಹುದು. ನಿಶ್ಯಕ್ತಿ, ತೂಕ ಇಳಿಯುವುದು, ದಾಹ ಹೆಚ್ಚಾಗುವುದು, ಪದೇ ಪದೇ ಮೂತ್ರ ವಿಸರ್ಜನೆ, ಹೊಟ್ಟೆ ನೋವು, ದೃಷ್ಟಿ ಮಂದವಾಗುವುದು, ಗಾಯಗಳು ನಿಧಾನವಾಗಿ ಒಣಗುವುದು, ಅಸಾಮಾನ್ಯ ತೂಕ ಹೆಚ್ಚಳ, ಸಿಡುಕುತನ, ನಡವಳಿಕೆಗಳಲ್ಲಿ ಬದಲಾವಣೆಯಾಗುವುದು ಮಕ್ಕಳಲ್ಲಿ ಡಯಾಬಿಟಿಸ್ ಇದೆ ಎಂಬುದರ ಸೂಚನೆ. ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ.

ಭಾರತದಲ್ಲಿ ಕೂಡ ಟೈಪ್ 2 ಮಧುಮೇಹಕ್ಕೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದರಿಂದಲೇ ಭಾರತವನ್ನು ವಿಶ್ವದಲ್ಲಿ ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಧುಮೇಹದಿಂದಾಗಿ ದೊಡ್ಡ ಮತ್ತು ಸಣ್ಣ ರಕ್ತನಾಳ, ಮೆದುಳು, ಹೃದಯ, ಕಿಡ್ನಿ, ಕಣ್ಣು, ಪಾದ ಮತ್ತು ನರಗಳಿಗೆ ಹಾನಿ ಆಗುತ್ತದೆ. ಭಾರತದಲ್ಲಿ ಸುಮಾರು 1.4 4 ಕೋಟಿ ಮಕ್ಕಳಲ್ಲಿ ಬೊಜ್ಜು ತುಂಬಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಭಾರತವು ಬೊಜ್ಜು ಹೊಂದಿರುವ ಮಕ್ಕಳಲ್ಲಿ ಎರಡನೇ ಸ್ಥಾನದಲ್ಲಿದೆ. ಬೊಜ್ಜು ಇನ್ಸುಲಿನ್ ಪ್ರತಿರೋಧತೆಯನ್ನು ಉಂಟುಮಾಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಭಾರತದಲ್ಲಿ 20ರಿಂದ 70 ವಯೋಮಾನದವರಲ್ಲಿ ಅಂದಾಜು ಶೇ. 8.7ರಷ್ಟು ಜನರಿಗೆ ಮಧುಮೇಹ ಕಂಡುಬಂದಿದೆ. ಅಂದಾಜಿನ ಪ್ರಕಾರ, ಸುಮಾರು 77 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಯುನಿಸೆಫ್ ಮತ್ತು ಜನಸಂಖ್ಯಾ ಮಂಡಳಿಯ ಮೊದಲ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆ (2016-18) ಪ್ರಕಾರ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಧುಮೇಹವು ಮಕ್ಕಳ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತಿದೆ. 2019ರಲ್ಲಿ ಬಿಡುಗಡೆಯಾದ ಸಮೀಕ್ಷೆಯು ಸುಮಾರು 10 ಮಕ್ಕಳಲ್ಲಿ 1 ಮಗು (5ರಿಂದ 9 ವರ್ಷದೊಳಗಿನ) ಮಧುಮೇಹದಿಂದ ಬಳಲುತ್ತಿದೆ ಎಂದು ತಿಳಿಸಿದೆ. ತಂದೆ-ತಾಯಿಯರ ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ, ತಂಬಾಕು ಬಳಕೆ ಮತ್ತು ಹೆಚ್ಚುತ್ತಿರುವ ಜೀವಿತಾವಧಿ ಈ ಮಧುಮೇಹಕ್ಕೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: Diabetes: ಟೈಪ್ 2 ಮಧುಮೇಹದ ಈ ಮುಖ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

Weight Loss: ನಿದ್ರೆ ಮಾಡುವಾಗ ತೂಕ ಜಾಸ್ತಿ ಆಗುತ್ತಾ? ಕಡಿಮೆಯಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ