Hair Care Tips: ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವೊಂದಿಷ್ಟು ಟಿಪ್ಸ್​

TV9 Digital Desk

| Edited By: shruti hegde

Updated on: Nov 15, 2021 | 7:52 AM

ದಿನಕ್ಕೆ ಒಮ್ಮೆ ಕೂದಲು ಬಾಚಿದರೂ ರಾಶಿಗಟ್ಟಲೆ ಕೂದಲು ಉದುರುತ್ತವೆ ಎಂಬುದು ಹಲವರನ್ನು ಚಿಂತೆಗೀಡು ಮಾಡಿದೆ. ಹಾಗಿರುವಾಗ ನೀವು ತಿಳಿದುಕೊಳ್ಳಬೇಕಾದ ಕೆಲವೊಂದಿಷ್ಟು ಮಾಹಿತಿಗಳು ಈ ಕೆಳಗಿನಂತಿದೆ.

Hair Care Tips: ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವೊಂದಿಷ್ಟು ಟಿಪ್ಸ್​
ಸಾಂಕೇತಿಕ ಚಿತ್ರ

ಉದ್ದವಾದ, ಹೊಳೆಯುವ ಕೂದಲನ್ನು ಪಡೆಯಬೇಕು ಎಂಬುದು ಮಹಿಳೆಯರ ಕನಸು. ಅದನ್ನು ಸಾಧಿಸಲು ಎಷ್ಟೆಲ್ಲಾ ಔಷಧಗಳನ್ನು, ತೈಲಗಳನ್ನು ಬಳಸುತ್ತೇವೆ. ಆದರೆ ಕೂದಲು ಉದುರುವ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ ಎಂಬುದು ಮಹಿಳೆಯರ ಚಿಂತೆ. ಡಾ. ಅಂಚಲ್ ಅವರು ಕೂದಲು ಉದುರುವ ಸಮಸ್ಯೆ ಕುರಿತಾಗಿ ಕೆಲವೊಂದಿಷ್ಟು ಮಾಹಿತಿಯನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಕೂದಲು ಉದುರುವಿಕೆ ಎಂಬುದು ಸಾಮಾನ್ಯ ದೂರು. ದಿನಕ್ಕೆ ಒಮ್ಮೆ ಕೂದಲು ಬಾಚಿದರೂ ರಾಶಿಗಟ್ಟಲೆ ಕೂದಲು ಉದುರುತ್ತವೆ ಎಂಬುದು ಹಲವರನ್ನು ಚಿಂತೆಗೀಡು ಮಾಡಿದೆ. ಹಾಗಿರುವಾಗ ನೀವು ತಿಳಿದುಕೊಳ್ಳಬೇಕಾದ ಕೆಲವೊಂದಿಷ್ಟು ಮಾಹಿತಿಗಳು ಈ ಕೆಳಗಿನಂತಿದೆ.

View this post on Instagram

A post shared by Dr. Aanchal I Dermatologist (@dr.aanchal.md)

*ಹೇರ್ ಆಯಿಲ್ ಕೂದಲ ಉದ್ದವನ್ನು ಹೆಚ್ಚಿಸುತ್ತದೆ. ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದು ಕೂದಲಿನ ಹೊಳಪನ್ನು ಹೆಚ್ಚಿಸಿರುವಂತೆ ಮಾಡುತ್ತದೆ.

*ಗಡುಸಾದ ನೀರು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಗಡುಸಾದ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಕೂದಲು ಉದುರುವ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

*ಕೂದಲು ಉದುರು ಸಮಸ್ಯೆಗೆ ನಿಮ್ಮ ಆಹಾರ ಪದ್ಧತಿಯೂ ಕಾರಣ. ಹೀಗಿರುವಾಗ ತಾಜಾ ಹಣ್ಣುಗಳು, ತರಕಾರಿಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

*ನಿಮಗೆ ಕೂದಲು ಉದುರುವ ಸಮಸ್ಯೆ ಕಾಡುತ್ತಿದ್ದರೆ ನೀವು ವಿಶ್ರಾಂತಿ ಪಡೆಯಬೇಕು. ಆರೋಗ್ಯಕರ ಆಹಾರ, ವ್ಯಾಯಾಮದೊಂದಿಗೆ ದಿನನಿತ್ಯದ ಚಟುವಟಿಕೆ ಆರಂಭಿಸಿ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

*ನೀವು ಒಳ್ಳೆಯ ಆಹಾರವನ್ನು ಸೇವಿಸಿ. ಪೌಷ್ಟಿಕಾಂಶಯುಕ್ತ ಆಹಾರ ಜೊತೆಗೆ ಹಸಿರು ಸೊಪ್ಪುಗಳನ್ನು ಆಹಾರದಲ್ಲಿ ಸೇರಿಸಿ. ಇವು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗುತ್ತದೆ. ಜೊತೆಗೆ ಕೂದಲು ಉದುರುವ ಸಮಸ್ಯೆಯಿಂದ ಸುಧಾರಿಸುತ್ತದೆ.

*ಕಬ್ಬಿಣ, ಫೋಲಿಕ್ ಆಮ್ಲ, ಸೆಲೆನಿಯಮ್, ಮೆಗ್ನೀಶಿಯಮ್, ಸತು ಮತ್ತು ಬಯೋಟಿನ್ ಹೊಂದಿರುವ ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ:

ಬಾಳೆಕಾಯಿ ಹಿಟ್ಟು ತಯಾರಿಸಿದ್ದೀರಾ? ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನಗಳಿವೆ

Hair Care: ದಿನನಿತ್ಯ ಇಂತಹ ಹೇರ್ ಸ್ಟೈಲ್ ಬಳಸುವುದರಿಂದ ಕೂದಲಿನ ಸಮಸ್ಯೆ ಉಂಟಾಗಬಹುದು; ವಿವರ ಇಲ್ಲಿದೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada