AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hair Care: ದಿನನಿತ್ಯ ಇಂತಹ ಹೇರ್ ಸ್ಟೈಲ್ ಬಳಸುವುದರಿಂದ ಕೂದಲಿನ ಸಮಸ್ಯೆ ಉಂಟಾಗಬಹುದು; ವಿವರ ಇಲ್ಲಿದೆ

ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ದಿನಾಲೂ ಒಂದೇ ಹೇರ್ ಸ್ಟೈಲ್ ಬಳಸುವುದು ಕೂಡ ಕಾರಣ ಆಗಬಹುದು. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

Hair Care: ದಿನನಿತ್ಯ ಇಂತಹ ಹೇರ್ ಸ್ಟೈಲ್ ಬಳಸುವುದರಿಂದ ಕೂದಲಿನ ಸಮಸ್ಯೆ ಉಂಟಾಗಬಹುದು; ವಿವರ ಇಲ್ಲಿದೆ
ಹೇರ್​ಸ್ಟೈಲ್
TV9 Web
| Edited By: |

Updated on: Jul 05, 2021 | 9:15 AM

Share

ಈಗೀಗ ಸ್ಟೈಲ್ ಎಂದು ಬಂದಾಗ ಬಹುತೇಕ ಯುವಸಮುದಾಯದ ಜನರು ಸೆಲೆಬ್ರಿಟಿಗಳ ಬೆನ್ನು ಬೀಳುತ್ತಾರೆ. ಅವರಂತೆಯೇ ಉಂಗುರ, ವಾಚ್, ಚಪ್ಪಲಿಯಿಂದ ಹಿಡಿದು, ಬಟ್ಟೆ ತೊಡುವುದು, ಆಭರಣ ಧರಿಸುವುದನ್ನೂ ಅನುಕರಿಸುತ್ತಾರೆ. ಅದರಲ್ಲೂ ತಮ್ಮ ಉಡುಗೆ ತೊಡುಗೆಯ ಬಗ್ಗೆ ಹೆಚ್ಚೇ ಗಮನಹರಿಸುವ ಹೆಣ್ಣುಮಕ್ಕಳು, ಹುಡುಗಿಯರು ತಮ್ಮ ಜೀವನಶೈಲಿಯ ವಿಧಾನದ ಬಗ್ಗೆ ವಿವಿಧ ಪ್ರಯೋಗ ಮಾಡುತ್ತಾ ಕಾಳಜಿಯನ್ನೂ ಹೊಂದಿರುತ್ತಾರೆ. ಬಹುತೇಕರು ತಮ್ಮ ಕೇಶವಿನ್ಯಾಸವನ್ನೂ ವಿಶೇಷವಾಗಿ ಇರಬೇಕು ಎಂದು ಬಯಸುತ್ತಾರೆ.

ಆದರೆ ಕೆಲವೊಮ್ಮೆ ಹೀಗೆ ಭಿನ್ನ ಹೇರ್ ಸ್ಟೈಲ್​ಗಳನ್ನು ನಿತ್ಯವೂ ಅನುಸರಿಸುವುದರಿಂದ ಕೂದಲಿಗೆ ಸಮಸ್ಯೆ ಆಗುವ ಸಾಧ್ಯತೆಯೂ ಇದೆ ಎಂದು ಗಮನದಲ್ಲಿ ಇಟ್ಟುಕೊಳ್ಳಬೇಕು. ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ದಿನಾಲೂ ಒಂದೇ ಹೇರ್ ಸ್ಟೈಲ್ ಬಳಸುವುದು ಕೂಡ ಕಾರಣ ಆಗಬಹುದು. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಟೈಟ್ ಬನ್ ಲಾಕ್​ಡೌನ್ ಹಾಗೂ ಕೊರೊನಾ ಕಾರಣದಿಂದ ನಾವು ಅನಾವಶ್ಯಕವಾಗಿ ಹೊರಗೆ ಹೋಗುತ್ತಿಲ್ಲ. ಹೀಗಾಗಿ ನಾವು ದಿನದ ಹೆಚ್ಚಿನ ಸಮಯ ಮನೆಯಲ್ಲೇ ಕಳೆಯುತ್ತಿದ್ದೇವೆ. ಅಷ್ಟೇ ಅಲ್ಲದೆ ಕೆಲವರು ಮಲಗುವಾಗಲೂ ಟೈಟ್ ಬನ್ ಹೇರ್ ಸ್ಟೈಲ್ ಇಟ್ಟುಕೊಂಡೇ ಮಲಗುತ್ತಾರೆ. ಮಾರನೇ ದಿನ ಅದನ್ನು ಬಿಡಿಸಿ ಇಡದೇ ಮತ್ತೆ ಟೈಟ್ ಬನ್ ಹಾಕಿಕೊಳ್ಳುತ್ತಾರೆ. ಬಹಳ ದಿನಗಳವರೆಗೆ ಹೀಗೆ ಮಾಡುವುದರಿಂದ ತಲೆಸ್ನಾನ ಅಥವಾ ತಲೆಬಾಚಲು ಹೊರಟಾಗ ಕೂದಲು ಉದುರುವಿಕೆ ಉಂಟಾಗಬಹುದು. ಹಾಗೊಂದು ವೇಳೆ ಬನ್ ಹಾಕಿಕೊಳ್ಳಲೇಬೇಕು ಎಂದು ಇದ್ದರೆ, ಲೂಸ್ ಬನ್ ಧರಿಸಬಹುದು.

ಪೋನಿ ಟೈಲ್ ಬೇಸಿಗೆ ಕಾಲದಲ್ಲಿ ಹೈ ಪೋನಿ ಟೈಲ್ ಧರಿಸುವುದನ್ನು ಮಹಿಳೆಯರು ಇಷ್ಟಪಡುತ್ತಾರೆ. ಇದರಿಂದ ದಿನನಿತ್ಯದ ದಿನಚರಿಗೆ ಸಹಾಯವೂ ಆಗುತ್ತದೆ. ಹಾಗೆಂದು ಈ ಹೇರ್ ಸ್ಟೈಲ್ ಕೂಡ ದಿನನಿತ್ಯ ಬಳಸಿದರೆ ಹೇರ್ ಫಾಲ್ ಸಮಸ್ಯೆ ಕಂಡುಬರಬಹುದು. ಕೂದಲನ್ನು ಹೀಗೆ ಕಟ್ಟುವಾಗ ಎಳೆದು ಕಟ್ಟಬೇಕಾಗುತ್ತದೆ ಹಾಗೂ ರಬ್ಬರ್ ಬ್ಯಾಂಡ್ ಬಳಸಬೇಕಾಗುತ್ತದೆ. ಇದರಿಂದ ಕೂದಲು ಉದುರಬಹುದು.

ಟೈಟ್ ಬ್ರೆಡ್ಸ್ ಮನೆಯಲ್ಲೇ ಉಳಿದುಕೊಳ್ಳುವಾಗ ಸಾಮಾನ್ಯವಾಗಿ ಲೂಸ್ ಬ್ರೆಡ್ಸ್​ಗಳನ್ನು ಬಳಸುವುದಿದೆ. ಆದರೆ, ಹೊರಗೆ ಹೋಗುವ ಸಂದರ್ಭ ಬಂದಾಗ ಲೂಸ್ ಬ್ರೆಡ್ಸ್​ ಬಳಸುವುದು ಜಾಸ್ತಿ ಹಾಗೂ ವಿವಿಧ ರೀತಿಯ ಬ್ರೆಡ್ ಹೇರ್ ಸ್ಟೈಲ್ ಬಳಸಲಾಗುತ್ತದೆ. ವಾಟರ್​ಫಾಲ್ ಬ್ರೆಡ್ಸ್, ರಿವರ್ಸ್ ಬ್ರೆಡ್ಸ್ ಇತ್ಯಾದಿ. ಇಂತಹ ಹೇರ್ ಸ್ಟೈಲ್ ಮಾಡುತ್ತಿದ್ದೀರಿ ಅಂತಾದರೂ ಆಗಾಗ ಕೂದಲನ್ನು ಲೂಸ್ ಆಗಿ ಕಟ್ಟಿಕೊಳ್ಳಿ. ಬಿಡಿಸಿಕೊಳ್ಳಿ. ಇದರಿಂದ ಕೂದಲಿಗೆ ಕಡಿಮೆ ಹಾನಿ ಉಂಟಾಗಬಹುದು.

ಇದನ್ನೂ ಓದಿ: ಧೋನಿಯ ದಾಂಪತ್ಯ ಜೀವನಕ್ಕೆ ಭರ್ತಿ 11 ವರ್ಷ; ಈ ಜೋಡಿ ಹಕ್ಕಿಗಳ ಪ್ರೇಮ ಕಥೆ ಶುರುವಾಗಿದ್ದು ಹೇಗೆ ಗೊತ್ತಾ?

ಉದ್ದನೆಯ ಕೂದಲು, ವಿಚಿತ್ರ ಬಟ್ಟೆ, ಅರ್ಧ ಕೆಜಿ ಚಿನ್ನ; ಟ್ರೋಲ್​ ಆದ ರಣವೀರ್​ ಸಿಂಗ್​ ಹೊಸ ಅವತಾರ

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ