Health Tips: ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಇಲ್ಲಿವೆ ಸರಳ ಸಲಹೆಗಳು

ಆರೋಗ್ಯಕರ ಆಹಾರ ವ್ಯವಸ್ಥೆಯಲ್ಲಿ ನೀವು ತಾಜಾ ತರಕಾರಿಗಳು, ಹಣ್ಣುಗಳನ್ನು ಸೇರಿಸುವುದು ಉತ್ತಮ. ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲವು ಸಲಹೆಗಳು ಹೀಗಿವೆ. 

Health Tips: ಮಧುಮೇಹ ಸಮಸ್ಯೆ ನಿಯಂತ್ರಣಕ್ಕೆ ಇಲ್ಲಿವೆ ಸರಳ ಸಲಹೆಗಳು
Follow us
| Updated By: shruti hegde

Updated on: Nov 18, 2021 | 8:03 AM

ಇತ್ತೀಚೆಗೆ ಮಧುಮೇಹ ಸಮಸ್ಯೆ ಕಾಡುತ್ತಿದೆ. ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಕೆಲವು ವ್ಯತ್ಯಾಸದ ಮೂಲಕ  ಆರೋಗ್ಯ ಸಮಸ್ಯೆಗಳು (Health Problem) ಕಂಡು ಬರುತ್ತವೆ. ಹೀಗಿರುವಾಗ ನೀವು ಸೇವಿಸುವ ಆಹಾರದ ಕುರಿತಾಗಿ ಹೆಚ್ಚು ಗಮನವಹಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Sugar level) ನಿಯಂತ್ರಿಸದಿದ್ದಲ್ಲಿ ನೀವು ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ. ಆರೋಗ್ಯಕರ ಆಹಾರ ವ್ಯವಸ್ಥೆಯಲ್ಲಿ ನೀವು ತಾಜಾ ತರಕಾರಿಗಳು, ಹಣ್ಣುಗಳನ್ನು ಸೇರಿಸುವುದು ಉತ್ತಮ. ನೀವು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲವು ಸಲಹೆಗಳು ಹೀಗಿವೆ. 

ಕೊತ್ತಂಬರಿ ಸೊಪ್ಪು ಕೊತ್ತಂಬರಿ ಸೊಪ್ಪು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ಮುಂತಾದ ವಿವಿಧ ಪೋಷಕಾಂಶಗಳು ಕಂಡು ಬರುತ್ತವೆ. ಇದರಲ್ಲಿ ಥಯಾಮಿನ್ ಮತ್ತು ರೈಬೋಫ್ಲಾವಿನ್​ಗಳಂಥಹ ಅಂಶಗಳು ಕಂಡು ಬರುತ್ತವೆ. ಇವು ಮಧುವೇಹ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಟೊಮ್ಯಾಟೊ ಜ್ಯೂಸ್ ಟೊಟ್ಯಾಟೊ ಅಡುಗೆಯ ರುಚಿ ಹೆಚ್ಚಿಸುವುದರ ಜೊತೆಯಲ್ಲಿ ನಿಮ್ಮ ಆರೋಗ್ಯಕ್ಕೂ ಪ್ರಯೋಜನಗಳನ್ನು ನೀಡುತ್ತವೆ. ಮಧುಮೇಹವನ್ನು ಕಡಿಮೆ ಮಾಡಲು ಟೊಮ್ಯಾಟೊ ಒಳ್ಳೆಯದು. ಇದು ಪ್ಯೂರಿನ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಮಧುಮೇಹಿಗಳು ಟೊಟ್ಯಾಟೊ ರಸವನ್ನು ಕುಡಿಯುವುದು ಒಳ್ಳೆಯದು.

ಸೌತೆಕಾಯಿ ರಸ ಸೌತೆಕಾಯಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಸೌತೆಕಾಯಿಯಲ್ಲಿ ನೀರಿನಾಂಶ ಮತ್ತು ವಿಟಮಿನ್ ಸಿ ಅಂಶ ಸಮೃದ್ಧವಾಗಿರುತ್ತದೆ. ಜೊತೆಗೆ ಸೌತೆಕಾಯಿ ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಫೈಬರ್ ಮತ್ತು ಪೊಟ್ಯಾಷಿಯಮ್​ನಂತಹ ಅಂಶವಿರುತ್ತದೆ. ಇದು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ ಜೊತೆಗೆ ನಿಮ್ಮಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹ ಸೌತೆಕಾಯಿ ರಸ ಒಳ್ಳೆಯದು.

ಇದನ್ನೂ ಓದಿ:

Health Benefits: ಪ್ಲಮ್​ ಹಣ್ಣು ಸೇವಿಸಿದ್ದೀರಾ? ಹುಳಿ-ಸಿಹಿ ರುಚಿಯ ಜತೆಗೆ ಇದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ

Eye Care: ಊದಿಕೊಂಡ ನಿಮ್ಮ ಕಣ್ಣುಗಳ ಸಮಸ್ಯೆಗೆ ತ್ವರಿತ ಪರಿಹಾರಗಳು