AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Iron Deficiency: ದೇಹದಲ್ಲಿ ಕಬ್ಬಿಣಾಂಶ ಕೊರತೆ ಲಕ್ಷಣಗಳೇನು? ಪರಿಹಾರವೇನು?

ಕಬ್ಬಿಣದ ಕೊರತೆ ನಿಮ್ಮಲ್ಲಿ ಕಾಡುತ್ತಿದ್ದರೆ ರಕ್ತಹೀನತೆಯಂತಹ ಸಮಸ್ಯೆಗೆ ಹೆಚ್ಚು ಒಳಗಾಗುತ್ತೀರಿ. ಹಾಗಿರುವಾಗ ಕೊರತೆಯ ರೋಗಲಕ್ಷ್ಣಗಳೇನು? ಪರಿಹಾರ ಕ್ರಮಗಳೇನು? ಎಂಬುದನ್ನು ತಿಳಿದುಕೊಳ್ಳಿ.

Iron Deficiency: ದೇಹದಲ್ಲಿ ಕಬ್ಬಿಣಾಂಶ ಕೊರತೆ ಲಕ್ಷಣಗಳೇನು? ಪರಿಹಾರವೇನು?
ದೇಹದಲ್ಲಿ ಕಬ್ಬಿಣಾಂಶದ ಕೊರತೆ
Follow us
TV9 Web
| Updated By: shruti hegde

Updated on: Nov 17, 2021 | 1:11 PM

ಕಬ್ಬಿಣವು ಹಿಮೋಗ್ಲೋಬಿನ್​ನ ಪ್ರಮುಖ ಅಂಶವಾಗಿದೆ. ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳು ಮತ್ತು ಖನಿಜಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಜೊತೆಗೆ ಕಬ್ಬಿಣಾಂಶವುಳ್ಳ ಆಹಾರ ಪದ್ದತಿ ನಿಮ್ಮದಾಗಿದ್ದರೆ ಕೊರತೆಯನ್ನು ನಿವಾರಿಸಿಕೊಳ್ಳಬಹುದು. ಕಬ್ಬಿಣದ ಕೊರತೆ (Iron Deficiency) ನಿಮ್ಮಲ್ಲಿ ಕಾಡುತ್ತಿದ್ದರೆ ರಕ್ತಹೀನತೆಯಂತಹ ಸಮಸ್ಯೆಗೆ ಹೆಚ್ಚು ಒಳಗಾಗುತ್ತೀರಿ. ಇಂಗ್ಲೆಂಟ್​ನ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಕಬ್ಬಿಣ ಕೊರತೆಯಿಂದ ಉಂಟಾಗುವ ಅಪಾಯವನ್ನು ತಪ್ಪಿಸಲು 20 ಮಿಗ್ರಾಂ ಕಬ್ಬಿಣಾಂಶ ನಮಗೆ ಅತ್ಯಗತ್ಯವಾಗಿ ಬೇಕು. ಆದಾಗ್ಯೂ ನೀವು ಕಬ್ಬಿಣದ ಕೊರತೆಯನ್ನು ಅನುಭವಿಸುತ್ತಿದ್ದರೆ ಕಂಡುಬರುವ ಸಾಮಾನ್ಯ ರೋಗಲಕ್ಷಣಗಳು ಹೀಗಿವೆ; *ಹೃದಯ ಬಡಿತದಲ್ಲಿ ಏರಿಳಿತ *ನಿಶ್ಯಕ್ತಿ *ಆಯಾಸ *ಉಸಿರಾಟ ತೊಂದರೆ *ತುರಿಕೆ ಅನುಭವ *ರುಚಿಯಲ್ಲಿ ವ್ಯತ್ಯಾಸ *ಆಹಾರ ನುಂಗಲು ತೊಂದರೆ *ಶಕ್ತಿಯ ಕೊರತೆ *ಕೂದಲು ಉದುರುವಿಕೆ

ಇಷ್ಟೇ ಅಲ್ಲದೇ ಕಬ್ಬಿಣ ಕೊರತೆಯ ಲಕ್ಷಣಗಳು ನಿಮ್ಮ ಚರ್ಮ, ಉಗುರುಗಳ ಮೇಲೆ ಕಾಣಿಸಿಕೊಳ್ಳಬಹುದು. ಜೊತೆಗೆ ರುಚಿಯ ವ್ಯತ್ಯಾಸದಿಂದ ಕಬ್ಬಿಣ ಕೊರತೆ ಲಕ್ಷಣಗಳು ಕಂಡು ಬರುತ್ತವೆ.

ಕಬ್ಬಿಣದ ಕೊರತೆಯ ಅಪಾಯಗಳೇನು? ಪರಿಣಾಮಗಳೇನು? ಮಹಿಳೆಯರಲ್ಲಿ ಕಬ್ಬಿಣದ ಕೊರತೆಯು ಹೆಚ್ಚಾಗಿ ಕಂಡು ಬರುತ್ತದೆ. ಏಕೆಂದರೆ ಋತುಚಕ್ರದ ಸಮಯದಲ್ಲಿ ಬಹಳಷ್ಟು ರಕ್ತವನ್ನು ಮಹಿಳೆಯರು ಕಳೆದುಕೊಳ್ಳುವುದರಿಂದ ಎರಡು ಪಟ್ಟು ಹೆಚ್ಚು ಕಬ್ಬಿಣಾಂಶದ ಅವಶ್ಯಕತೆ ಮಹಿಳೆಯರಿಗೆ. ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಹುದು.

*18 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ 8.7 ಮಿಗ್ರಾಂ ಅಗತ್ಯವಿದೆ *19-50 ವರ್ಷ ಮೇಲ್ಪಟ್ಟವರಿಗೆ 14.8 ಮಿಗ್ರಾಂ ಕಬ್ಬಿಣಾಂಶದ ಅಗತ್ಯವಿದೆ. *50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ 8.7 ಮಿಗ್ರಾಂ ಅಗತ್ಯವಿದೆ.

ನಿಮ್ಮ ದೇಹದಲ್ಲಿ ಕಬ್ಬಿಣಾಂಶದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವ ಸಲಹೆಗಳು *ಊಟಕ್ಕೆ ಮುಂಚಿತವಾಗಿ ಹಾಲು, ಚಹಾವನ್ನು ಸೇವಿಸಬೇಡಿ *ಊಟಕ್ಕೆ ಮೊದಲು ಕಿತ್ತಳೆ ಹಣ್ಣಿನ ರಸವನ್ನು ಸೇವಿಸಬಹುದು *ವಿಟಮಿನ್ ಸಿ ಅಂಶವು ದೇಹ ಕಬ್ಬಿಣ ಅಂಶವನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ *ತಾಜಾ ಹಣ್ಣುಗಳು ತರಕಾರಿಗಳು ಮತ್ತು ವಿಟಮಿನ್ ಸಿ ಬರಿತ ಆಹಾರವನ್ನು ಸೇವಿಸಿ

ಕಬ್ಬಿಣದ ಕೊರತೆಯನ್ನು ಹೋಗಲಾಡಿಸಲು ಸೇವಿಸಬೇಕಾದ ಆಹಾರ ಪದಾರ್ಥಗಳು *ಬೀನ್ಸ್ *ಕಡಲೆ *ಸೋಯಾಬೀನ್ಸ್ *ಧಾನ್ಯಗಳು *ದ್ವಿದಳ ಧಾನ್ಯಗಳು *ವಿಟಮಿನ್ ಸಿ ಭರಿತ ಹಣ್ಣುಗಳು

ಇದನ್ನೂ ಓದಿ:

Benefits of Green Peas: ಅವರೆಕಾಳು ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಗೊತ್ತಾ?

Banana Benefits: ಮಹಿಳೆಯರು ಬಾಳೆಹಣ್ಣು ತಿನ್ನುವುದರಿಂದ ಈ 5 ಸಮಸ್ಯೆಗಳನ್ನು ದೂರ ಮಾಡಬಹುದು

ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಗಂಗಾವತಿಯಲ್ಲಿ ಬೆಂಬಲಿಗರ ಸಭೆ ನಡೆಸಿದ ಜನಾರ್ಧನ ರೆಡ್ಡಿ ಪತ್ನಿ ಅರುಣಾ
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ