Breastfeeding: ಎದೆ ಹಾಲು ಗುಲಾಬಿ ಬಣ್ಣಕ್ಕೆ ತಿರುಗುತ್ತಾ? ಈ ಸಮಸ್ಯೆಗೆ ತಜ್ಞರ ಸಲಹೆಗಳೇನು?

ತಾಯಿಯ ಎದೆ ಹಾಲು ಗುಲಾಬಿ ಬಣ್ಣಕ್ಕೆ ತಿರುಗಲು ಕಾರಣವೇನು? ಎಂಬುದರ ಕುರಿತಾಗಿ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Breastfeeding: ಎದೆ ಹಾಲು ಗುಲಾಬಿ ಬಣ್ಣಕ್ಕೆ ತಿರುಗುತ್ತಾ? ಈ ಸಮಸ್ಯೆಗೆ ತಜ್ಞರ ಸಲಹೆಗಳೇನು?
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Nov 17, 2021 | 3:26 PM

ಋತು ಚಕ್ರದ ಸಮಯದಲ್ಲಿ ಹಾಗೆಯೇ ಗರ್ಭಾವಸ್ಥೆಯಲ್ಲಿ ಮಹಿಳೆಯರ ದೇಹವು ಬಹಳಷ್ಟು ಬದಲಾವಣೆಗಳನ್ನು ಹೊಂದುತ್ತದೆ. ಇದು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗಬಹುದು. ಎದೆ ಹಾಲು (Breastfeeding) ಶಿಶುವಿಗೆ ಅಮೃತವಿದ್ದಂತೆ. ಎಲ್ಲಾ ಪೋಷಕಾಂಶವನ್ನು ಒದಗಿಸುವ ಮೂಲಕ ಶಿಶುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳ ಆರೋಗ್ಯವನ್ನು ರಕ್ಷಿಸುವ ತಾಯಿಯ ಎದೆ ಹಾಲು ಕೆಲ ಸಮಯ ಬೇರೆ ಬಣ್ಣಕ್ಕೆ ತಿರುಗುವು ಸಾಮಾನ್ಯ. ಹಾಗಿರುವಾಗ ಬೇರೆ ಬೆಣ್ಣಕ್ಕೆ ತಿರುಗುವಿಕೆಗೆ ಕಾರಣವೇನು? ಅದರಲ್ಲಿಯೂ ಮುಖ್ಯವಾಗಿ ಎದೆ ಹಾಲು ಗುಲಾಬಿ ಬಣ್ಣಕ್ಕೆ (Pink Milk) ತಿರುಗಲು ಕಾರಣವೇನು? ಎಂಬುದರ ಕುರಿತಾಗಿ ತಜ್ಞರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಹೆರಿಗೆಯ ಬಳಿಕ ತನ್ನ ಎದೆ ಹಾಲು ಗುಲಾಬಿ ಬಣ್ಣಕ್ಕೆ ಹೇಗೆ ತಿರುಗಿತು ಎಂಬುದನ್ನು ಮಹಿಳೆಯೋರ್ವರು ಟಿಕ್​ಟಾಕ್​ನಲ್ಲಿ ವಿಡಿಯೊ ಹಂಚಿಕೊಂಡಿದ್ದರು. ನನಗೆ ಹೆರಿಗೆಯಾದಾಗ ನನ್ನ ಎದೆ ಹಾಲು ಬೇರೆ ಬಣ್ಣಕ್ಕೆ ತಿರುಗುತ್ತದೆ ಎಂದು ನನಗೆ ಯಾರೂ ಹೇಳಿರಲಿಲ್ಲ ಎಂದು ಮಹಿಳೆಯೋರ್ವರು ಹೇಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ಸುಮಾರು 10 ಮಿಲಿಯನ್​ಗೂ ಹೆಚ್ಚಿನ ಬಳಕೆದಾರರು ವಿಡಿಯೊವನ್ನು ವೀಕ್ಷಿಸಿದ್ದರು.

ಎದೆ ಹಾಲು ಸಾಮಾನ್ಯವಾಗಿ ಹಳದಿ, ಬಿಳಿ, ಕೆನೆ, ಕಂದು ಅಥವಾ ತಿಳಿಯಾದ ನೀಲಿ ಬಣ್ಣದ ಛಾಯೆಯನ್ನು ಹೊಂದುವುದು ತಿಳಿದಿದೆ. ಅದಾಗ್ಯೂ ಗರ್ಭಿಣಿಯರ ನಿಯಮಿತವಾಗಿ ಆಹಾರ ಸೇವನೆ ಮಾಡುವುದರ ಹೊರತಾಗಿಯೂ, ಸ್ತನಪಾನದ ಅನುಭದ ಸಮಯದಲ್ಲಿ ಇತರ ಬಣ್ಣಗಳಿಗೂ ತಿರುಗುವುದನ್ನು ಕಂಡು ನಿಮಗೆ ಆಶ್ಚರ್ಯವಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಬೀಟ್ರೂಟ್, ಕಿತ್ತಳೆ ಹಣ್ಣಿನ ರಸ ಅಥವಾ ಜ್ಯೂಸ್ ಈ ರೀತಿಯ ಆಹಾರ ಪದಾರ್ಥಗಳನ್ನು ಅಥವಾ ಪಾನೀಯಗಳನ್ನು ಸೇವಿಸಿದ ಬಳಿಕ ತಾಯಿಯ ಎದೆ ಹಾಲು ಕಿತ್ತಳೆ, ಶಾಯಿ ಅಥವಾ ಕೆಂಪು ಬಣ್ಣದ ಛಾಯೆ ಹೊಂದುವ ಸಾಧ್ಯತೆಗಳಿರುತ್ತದೆ ಎಂದು ಮುಂಬೈನ ಭಾಟಿಯಾ ಆಸ್ಪತ್ರೆಯ ಮಕ್ಕಳ ವೈದ್ಯರಾದ ಡಾ.ವಿನಿತ್ ಸಮ್ದಾನಿ ಹೇಳಿದ್ದಾರೆ.

ಎದೆ ಹಾಲು ತಿಳಿ ಹಸಿರು, ಗುಲಾಬಿ ಅಥವಾ ಕೆಂಪು ಬಣ್ಣವನ್ನು ಹೊಂದಿರುವಂತೆ ಕಾಣಬಹುದು. ಕೆಲವೊಮ್ಮೆ ಸ್ವಲ್ಪ ಪ್ರಮಾಣದಲ್ಲಿ ರಕ್ತವು ಎದೆ ಹಾಲಿನೊಳಗೆ ಸೇರಿರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಹಾಲು ಕಂದು ಅಥವಾ ತುಕ್ಕು ಬಣ್ಣಕ್ಕೆ ಬದಲಾಗುತ್ತದೆ. ಇದಕ್ಕೆ ಕಾರಣ ಗರ್ಭಿಣಿಯರು ಸೇವಿಸುವ ಆಹಾರ. ಅವರು ಏನು ಸೇವಿಸುತ್ತಾರೆ ಎಂಬುದಕ್ಕೆ ಅಲವಂಬಿಸಿರುತ್ತದೆ ಎಂದು ವೈದ್ಯರಾದ ಸಮ್ದಾನಿ ಹೇಳಿದ್ದಾರೆ.

ಈ ಕುರಿತಂತೆ ಕ್ಲೌಡ್ ನೈನ್ ಹಾಸ್ಪಿಟಲ್ ಸ್ತ್ರೀ ರೋಗ ತಜ್ಞೆ ಡಾ. ರೀತು ಸೇಥಿ ಮಾತನಾಡಿ, ಈ ಸಂದರ್ಭದಲ್ಲಿ ಎದೆ ಹಾಲನ್ನು ಆದಷ್ಟು ಬೇಗ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಇದು ಸ್ತನದಲ್ಲಿನ ಸೋಂಕಿನಿಂದಾಗಿರಬಹುದು, ಸ್ತನದಲ್ಲಿ ರಕ್ತಸ್ರವಿಕೆಯಿಂದಲೂ ಆಗಿರಬಹುದು ಇದಲ್ಲದೇ ರಕ್ತನಾಳಗಳ ಕ್ಯಾನ್ಸರ್ ಆಗುವ ಸಾಧ್ಯತೆಗಳೂ ಇರಬಹುದು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ರೋಗ ಲಕ್ಷಣಗಳೇನು? ಗಟ್ಟಿಯಾದ ಸ್ತನ ಒಡೆದ ಮೊಲೆತೊಟ್ಟುಗಳು ಸ್ತನದಲ್ಲಿ ಅಸಹಜ ಸ್ರವಿಸುವಿಕೆ

ಗರ್ಭಧಾರಣೆಯ ಮೊದಲು ಅಥವಾ ಗರ್ಭಾವಸ್ಥೆಯಲ್ಲಿ ಈ ರೋಗಲಕ್ಷಣಗಳು ಯಾರಿಗಾದರೂ ಕಂಡು ಬಂದರೆ ಹಾಲುಣಿಸುವಾಗ ಸ್ತನದಿಂದ ರಕ್ತ ಬರಲು ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಹಾಗಾದರೆ ಮಗುವಿಗೆ ಹಾಕುಣಿಸುವುದು ಸೂಕ್ತವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಸೇಥಿ ಅವರು, ಆ ಸಮಯಕ್ಕೆ ಪರೀಕ್ಷಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಸಂದರ್ಭವನ್ನು ಅವಲಂಬಿಸಿರುತ್ತದೆ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:

Women Health: ಗರ್ಭಿಣಿಯರು ಈ ಕೆಲಸಗಳನ್ನು ಮಾಡಲೇಬಾರದು; ನೆನಪಿರಲಿ

Health Benefits: ಮಹಿಳೆಯರು ಆರೋಗ್ಯವನ್ನು ಈ ರೀತಿ ನೋಡಿಕೊಳ್ಳಬೇಕು

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್