Women Health: ಗರ್ಭಿಣಿಯರು ಈ ಕೆಲಸಗಳನ್ನು ಮಾಡಲೇಬಾರದು; ನೆನಪಿರಲಿ
ಕೆಲವು ಬಾರಿ ಅರೊಗ್ಯದ ಬಗ್ಗೆ ಲಕ್ಷ್ಯವಿಲ್ಲದಿದ್ದಾಗ ಕೆಲವು ಅಚಾತುರ್ಯಗಳು ನಡೆದು ಹೋಗುತ್ತವೆ. ಹಾಗಾಗಿ ಪ್ರತೀ ಹಂತದಲ್ಲಿಯೂ ಸಹ ಗರ್ಭಿಣಿ ಮೈಮರೆಯುವಂತಿಲ್ಲ.
ಗರ್ಭಿಣಿಯರು ಆರೋಗ್ಯದ ಕುರಿತಾಗ ಜಾಗರೂಕರಾಗಿದ್ದರೂ ಸಾಲದು. ಪ್ರತಿ ಕ್ಷಣದಲ್ಲಿಯೂ ಸಹ ಎಚ್ಚರಿಕೆಯಿಂದ ಇರುವುದು ಅತ್ಯವಶ್ಯಕ. ಕೋಪ, ಸಿಟ್ಟು, ಅವಸರವನ್ನೆಲ್ಲಾ ಬದಿಗಿಟ್ಟು ತನ್ನ ಮತ್ತು ಮಗುವಿನ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಹಿಸಬೇಕು. ಮಹಿಳೆ ತನ್ನ ಗರ್ಭಾವಸ್ಥೆಯಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ಅವುಗಳು ಗರ್ಭಿಣಿಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.ಈ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ಕೆಲವು ಬಾರಿ ಅರೊಗ್ಯದ ಬಗ್ಗೆ ಲಕ್ಷ್ಯವಿಲ್ಲದಿದ್ದಾಗ ಕೆಲವು ಅಚಾತುರ್ಯಗಳು ನಡೆದು ಹೋಗುತ್ತವೆ. ಹಾಗಾಗಿ ಪ್ರತೀ ಹಂತದಲ್ಲಿಯೂ ಸಹ ಗರ್ಭಿಣಿ ಮೈಮರೆಯುವಂತಿಲ್ಲ. ಆಹಾರ ಸೇವನೆಯಿಂದ ಹಿಡಿದು ಬೆಳಿಗ್ಗೆ ಎದ್ದ ನಂತರದ ಸಮಯದಿಂದ ರಾತ್ರಿ ಮಲಗುವವರೆಗೆ ಎಚ್ಚರಿಕೆಯಿಂದಿರುವುದು ಒಳ್ಳೆಯದು.
ಗರ್ಭಿಣಿಯರು ಈ ಕೆಲಸಗಳನ್ನು ಮಾಡಬಾರದು ಧೂಮಪಾನ ಮತ್ತು ಮದ್ಯ ಸೇವಿಸಬಾರದು ಧೂಮಪಾನ ಮತ್ತು ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಅದರಲ್ಲಿಯೂ ಮುಖ್ಯವಾಗಿ ಗರ್ಭಿಣಿಯರು ಈ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಗರ್ಭಾವಸ್ಥೆಯಲ್ಲಿ ಸಿಗರೇಟ್, ಆಲ್ಕೋಹಾಲ್ ಸೇವನೆಯು ಮಗುವಿನ ಆರೋಗ್ಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಗರ್ಭಿಣಿಯರು ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು ಉತ್ತಮ.
ಧೂಳಿರುವ ಜಾಗದಿಂದ ದೂರವಿರಿ ಹೆಚ್ಚು ಧೂಳಿರುವ ಜಾಗದಲ್ಲಿ ಓಡಾಡುವುದನ್ನು ತಪ್ಪಿಸಿ. ಹೆಚ್ಚು ಧೂಳಿರುವ ಸ್ಥಳದಲ್ಲಿ ಕಸ ಗುಡಿಸುವುದು, ಓಡಾಡುವುದು ನಿಮಗೆ ಅರ್ಜಿಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ.
ಹೆಚ್ಚು ವ್ಯಾಯಾಮ ಮಾಡಬೇಡಿ ಗರ್ಭಾವಸ್ಥೆಯಲ್ಲಿ ಸಕ್ರಿಯವಾಗಿರಲು ವ್ಯಾಯಾಮ ಮಾಡುವುದು ಒಳ್ಳೆಯದು. ಆದರೆ ಗರ್ಭಾವಸ್ಥೆಯಲ್ಲಿ ಅಧಿಕವಾಗಿ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಆಯಾಸವಾಗಬಹುದು. ವೈದ್ಯರ ಬಳಿ ಸಲಹೆ ಪಡೆದು ವ್ಯಾಯಾಮ ಮಾಡುವ ಅಭ್ಯಾಸ ಮುಂದುವರೆಸಿ.
ಅತಿಯಾದ ಬಿಸಿ ನೀರಿನ ಸ್ನಾನ ಒಳ್ಳೆಯದಲ್ಲ ಚಳಿಗಾಲದಲ್ಲಿಯೂ ಸಹ ಅತಿಯಾದ ಬಿಸಿ ನೀರಿನಿಂದ ಸ್ನಾನ ಮಾಡುವುದು ಗರ್ಭಿಣಿಯರಿಗೆ ಒಳ್ಳೆಯದಲ್ಲ. ಉಗುರು ಬೆಚ್ಚಗಿನ ನೀರನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ. ಹಾಗೂ ಹೆಚ್ಚು ಹೊತ್ತು ಸ್ನಾನ ಮಾಡುವುದನ್ನು ಆದಷ್ಟು ತಪ್ಪಿಸಿ. ಬಿಸಿ ನೀರು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವ ಸಾಧ್ಯತೆಗಳಿರುತ್ತವೆ. ಇದು ಮಗುವಿನಲ್ಲಿ ಅಸ್ವಸ್ತತೆಯನ್ನು ಉಂಟು ಮಾಡಬಹುದು. ಹಾಗಾಗಿ ಈ ವಿಷಯಗಳ ಬಗ್ಗೆ ಹೆಚ್ಚು ಗಮನವಿರಲಿ.
ಇದನ್ನೂ ಓದಿ:
Women Health: ಗರ್ಭಿಣಿಯರಿಗೆ ಜಂಕ್ ಫುಡ್ ಸೇವನೆ ಆರೋಗ್ಯಕ್ಕೆ ಹಿತವಲ್ಲ; ಏಕೆ ಗೊತ್ತಾ?
Women Health: ಒತ್ತಡ ಮತ್ತು ಆತಂಕದಿಂದ ದೂರವಾಗಲು ಮಹಿಳೆಯರಿಗೆ ಸಲಹೆಗಳು
(Women health tips for women not do these work from during pregnancy)
Published On - 8:46 pm, Mon, 20 September 21