Sleeping: ಒಳ್ಳೆಯ ನಿದ್ರೆಗಾಗಿ ಔಷಧಿಗಳ ಮೊರೆ ಹೋಗುವುದನ್ನು ಬಿಡಿ; ಮಲಗುವ ಮುನ್ನ ಈ ಅಭ್ಯಾಸಗಳನ್ನು ಅನುಸರಿಸಿ

ವೈದ್ಯರನ್ನು ಸಂಪರ್ಕಿಸದೆ ನಿದ್ರೆಗಾಗಿ ಯಾವುದೇ ರೀತಿಯ ಔಷಧಿಯನ್ನು ತೆಗೆದುಕೊಳ್ಳಬೇಡಿ. ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗದಿದ್ದರೆ, ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ.

Sleeping: ಒಳ್ಳೆಯ ನಿದ್ರೆಗಾಗಿ ಔಷಧಿಗಳ ಮೊರೆ ಹೋಗುವುದನ್ನು ಬಿಡಿ; ಮಲಗುವ ಮುನ್ನ ಈ ಅಭ್ಯಾಸಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Sep 20, 2021 | 10:20 AM

ಬದಲಾದ ಜೀವನಶೈಲಿ ಮತ್ತು ಸರಿಯಾದ ಸಮಯದಲ್ಲಿ ಊಟ ಮಾಡದ ಕಾರಣದಿಂದಾಗಿ ಕೆಲವೊಮ್ಮೆ ನಮಗೆ ಒಳ್ಳೆಯ ನಿದ್ರೆ ಬರುವುದಿಲ್ಲ. ಇದರಿಂದಾಗಿ ನಾವು ಮರುದಿನ ದಣಿದಂತೆ ಕಾಣುತ್ತೇವೆ. ಇದರ ಹೊರತಾಗಿ, ಕೆಲಸವನ್ನು ಮಾಡಲು ಮನಸ್ಸಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಅತಿಯಾದ ಒತ್ತಡದಿಂದಾಗಿ ನಿದ್ರೆ ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಕೆಲವರು ನಿದ್ರೆ ಪಡೆಯಲು ಔಷಧಿಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸ ಅಲ್ಲ. ಹೀಗಾಗಿ ವೈದ್ಯರನ್ನು ಸಂಪರ್ಕಿಸದೆ ನಿದ್ರೆಗಾಗಿ ಯಾವುದೇ ರೀತಿಯ ಔಷಧಿಯನ್ನು ತೆಗೆದುಕೊಳ್ಳಬೇಡಿ. ರಾತ್ರಿ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗದಿದ್ದರೆ, ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ.

ಒಳ್ಳೆಯ ನಿದ್ರೆಗಾಗಿ ಈ 5 ಸಲಹೆಗಳನ್ನು ಅನುಸರಿಸಿ ಯಾಂತ್ರಿಕ ಸಾಧನಗಳನ್ನು ಕಡಿಮೆ ಉಪಯೋಗಿಸಿ ಇತ್ತೀಚೆಗೆ ಜನರು ಹೆಚ್ಚಿನ ಸಮಯವನ್ನು ಯಾಂತ್ರಿಕ ಸಾಧನಗಳೊಂದಿಗೆ ಅಂದರೆ ಕಂಪ್ಯೂಟರ್, ಮೊಬೈಲ್​ನೊಂದಿಗೆ ಕಳೆಯುತ್ತಾರೆ. ಇದರಿಂದಾಗಿ ದೃಷ್ಟಿ ದುರ್ಬಲವಾಗಬಹುದು. ಇದಲ್ಲದೇ, ಇವುಗಳಿಂದ ಹೊರಹೊಮ್ಮುವ ಬ್ಲೂ-ರೇ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ತಜ್ಞರ ಪ್ರಕಾರ, ಇವುಗಳಿಂದ ಮೆಲಟೋನಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಪೀನಿಯಲ್ ಗ್ರಂಥಿಯಿಂದ ಬಿಡುಗಡೆಯಾಗುತ್ತದೆ. ಇದು ನಿದ್ರಿಸಲು ಅವಕಾಶ ನೀಡುವುದಿಲ್ಲ. ಆದ್ದರಿಂದ, ರಾತ್ರಿ ಮಲಗುವ ಒಂದು ಗಂಟೆ ಮೊದಲು ಎಲ್ಲಾ ಯಾಂತ್ರಿಕ ಸಾಧನಗಳಿಂದ ದೂರ ಇರಿ.

ಪುಸ್ತಕಗಳನ್ನು ಓದಿ ಪುಸ್ತಕ ಓದುವುದು ಒಳ್ಳೆಯ ಅಭ್ಯಾಸ ಮತ್ತು ಇದು ಉತ್ತಮ ಆಯ್ಕೆಯಾಗಿದೆ. ಪುಸ್ತಕ ಓದುವ ಮೂಲಕ ನಿಮ್ಮ ಮನಸ್ಸು ನಿರಾಳವಾಗುತ್ತದೆ. ಮಲಗುವ ಮುನ್ನ ನಿಮ್ಮ ನೆಚ್ಚಿನ ಪುಸ್ತಕವನ್ನು ಓದಬಹುದು.

ಬಿಸಿ ಬಿಸಿಯಾಗಿ ಏನಾದರೂ ಕುಡಿಯಿರಿ ಮಲಗುವ ಮುನ್ನ ಬಿಸಿಯಾಗಿ ಏನಾದರೂ ಕುಡಿಯಿರಿ. ಇದು ಒಳ್ಳೆಯ ನಿದ್ರೆಗೆ ಪ್ರಯೋಜನಕಾರಿ. ನೀವು ಅರಿಶಿಣದ ಹಾಲು ಅಥವಾ ಕ್ಯಾಮೊಮೈಲ್ ಚಹಾವನ್ನು ಕುಡಿಯಬಹುದು. ಈ ಚಹಾವು ನಿಮ್ಮ ಮೆದುಳಿಗೆ ಹಾಗೂ ಕರುಳಿಗೆ ಪ್ರಯೋಜನಕಾರಿ.

ಮಲಗುವ ಮುನ್ನ ಸ್ನಾನ ಮಾಡಿ ತಜ್ಞರ ಪ್ರಕಾರ, ಸ್ನಾನ ಮಾಡುವುದು ಉತ್ತಮ ನಿದ್ರೆಗೆ ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಕೂಡ ಸುಧಾರಿಸುತ್ತದೆ.

ಉಸಿರಾಟದ ವ್ಯಾಯಾಮ ಮಾಡಿ ನಿಮಗೆ ಓದುವುದು ವಿಚಿತ್ರವೆನಿಸಬಹುದು, ಆದರೆ ನೀವು ಮಲಗುವ ಮುನ್ನ ಉಸಿರಾಟದ ವ್ಯಾಯಾಮ ಮಾಡಬಹುದು. ಯೋಗ ತಜ್ಞರು, ಆಧ್ಯಾತ್ಮಿಕ ಗುರುಗಳು, ಮಲಗುವ ಮುನ್ನ ಉಸಿರಾಟದ ವ್ಯಾಯಾಮ ಮಾಡಲು ಶಿಫಾರಸು ಮಾಡುತ್ತಾರೆ. ವಾಸ್ತವವಾಗಿ, ಮಲಗುವ ಮುನ್ನ ಪ್ರಾಣಾಯಾಮ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ನಿದ್ದೆ ಕೂಡ ಚೆನ್ನಾಗಿ ಬರುತ್ತದೆ.

ಇದನ್ನೂ ಓದಿ: Health Tips: ಬಾಳೆ ಎಲೆಯ ಮೇಲೆ ಊಟ ಮಾಡುವ ಅಭ್ಯಾಸ ಇದೆಯೇ? ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

Snoring: ನಿದ್ರೆಯಲ್ಲಿ ಗೊರಕೆ ಏಕೆ ಬರುತ್ತದೆ? ಸಮಸ್ಯೆಯಿಂದ ಹೊರಬರಲು ಈ ಸಲಹೆಗಳನ್ನು ಅನುಸರಿಸಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್