Women Health: ಒತ್ತಡ ಮತ್ತು ಆತಂಕದಿಂದ ದೂರವಾಗಲು ಮಹಿಳೆಯರಿಗೆ ಸಲಹೆಗಳು

ತಿನಿತ್ಯ 30 ರಿಂದ 45 ನಿಮಿಷಗಳ ಕಾಲ ವ್ಯಾಯಾಮ ಅಭ್ಯಾಸದಲ್ಲಿ ತೊಡಗಿಕೊಳ್ಳುವುದು ಉತ್ತಮ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಾಗಿರುವಾಗ ಮಹಿಳೆಯರು ಯಾವ ಯೋಗಾಸನಗಳನ್ನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

Women Health: ಒತ್ತಡ ಮತ್ತು ಆತಂಕದಿಂದ ದೂರವಾಗಲು ಮಹಿಳೆಯರಿಗೆ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 28, 2021 | 8:31 PM

ಮಹಿಳೆಯರು ಹೆಚ್ಚು ಕೆಲಸಗಳನ್ನು ಮಾಡುವುದರಿಂದ ಅವರಿಗೆ ಕೆಲವು ಬಾರಿ ಹೆಚ್ಚು ಒತ್ತಡ ಉಂಟಾಗುತ್ತದೆ. ದೈಹಿಕ ಒತ್ತಡವೊಂದೇ ಅಲ್ಲದೇ ಮಾನಸಿಕ ಒತ್ತಡ ಮತ್ತು ಆತಂಕ ಸೃಷ್ಟಿಯಾಗಬಹುದು. ಹಾಗಿರುವಾಗ ನೀವು ಹೆಚ್ಚು ಆರೋಗ್ಯವಂತರಾಗಿರಲು ಮತ್ತು ಮಾನಸಿಕ ಒತ್ತಡದಿಂದ ಪರಿಹಾರ ಪಡೆಯಲು ಯೋಗಾಸನದಲ್ಲಿ ತೊಡಗುವುದು ಉತ್ತಮ ಮಾರ್ಗವಾಗಿದೆ. ಪ್ರತಿನಿತ್ಯ 30 ರಿಂದ 45 ನಿಮಿಷಗಳ ಕಾಲ ವ್ಯಾಯಾಮ ಅಭ್ಯಾಸದಲ್ಲಿ ತೊಡಗಿಕೊಳ್ಳುವುದು ಉತ್ತಮ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಹಾಗಿರುವಾಗ ಮಹಿಳೆಯರು ಯಾವ ಯೋಗಾಸನಗಳನ್ನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.

ಬದ್ಧಕೋನಾಸನ ಕಾಲುಗಳ ಎರಡು ಪಾದಗಳನ್ನು ಜೋಡಿಸಿ ನೆಲಕ್ಕೆ ಕುಳಿತುಕೊಳ್ಳಿ. ಬಳಿಕ ಕೈಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿದು ಮುಂದಕ್ಕೆ ಬಾಗಿ. ನಿಮ್ಮ ಹಣೆಯನ್ನು ನೆಲಕ್ಕೆ ತಾಗಿಸಬೇಕು. ಸಾಧ್ಯವಾದಷ್ಟು ಹೊತ್ತು ಈ ಭಂಗಿಯಲ್ಲಿಯೇ ಇರಿ. ಈ ಅಭ್ಯಾಸ ಮಾಡುವುದರಿಂದ ಕಾಲು ನೋವು, ಸೊಂಟ ನೋವಿನ ಸಮಸ್ಯೆ ದೂರವಾಗುತ್ತದೆ. ಜತೆಗೆ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.

ಸೇತುಬಂಧಾಸನ ನೆಲದ ಮೇಲೆ ನೇರವಾಗಿ ಮಲಗಿಕೊಳ್ಳಿ. ನಂತರ ಹೊಟ್ಟೆಯ ಭಾಗವನ್ನು ಮೇಲಕ್ಕೆತ್ತಿ ಕೇವಲ ಭುಜ ಮತ್ತು ಪಾದಗಳು ಮಾತ್ರ ನೆಲಕ್ಕೆ ತಾಗಿರಲಿ. ತಲೆಯ ಭಾಗವೂ ಸಹ ನೆಲಕ್ಕೆ ತಾಗಿರಲಿ. ಕೈಗಳಿಂದ ಕಾಲುಗಳು ಹಿಮ್ಮಡಿಯನ್ನು ಹಿಡಿದುಕೊಳ್ಳಿ. ಇದರಿಂದ ದೇಹ ಸದೃಢವಾಗುತ್ತದೆ. ಜತೆಗೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಚಕ್ರಾಸನ ನೇರವಾಗಿ ನಿಂತುಕೊಳ್ಳಿ. ಬಳಿಕ ಎರಡು ಕೈಗಳನ್ನು ಹಿಂದಕ್ಕೆ ಹಾಕಿ ಹಿಮ್ಮುಖವಾಗಿ ಬಾಗಿ. ಹಿಂಭಾಗದಿಂದಲೇ ಕೈಗಳು ನೆಲಕ್ಕೆ ತಾಗಲಿ ಮತ್ತು ಹೊಟ್ಟೆಯ ಭಾಗ ಮೇಲಕ್ಕೆತ್ತಿರಲಿ.

ಧನುರಾಸನ ನಿಮ್ಮ ಹೊಟ್ಟೆ ಮೇಲೆ ಮಲಗಿಕೊಳ್ಳಿ. ತಲೆಯ ಭಾಗವನ್ನು ಮೇಲಕ್ಕೆತ್ತಿ ಮತ್ತು ಕೈಗಳನ್ನು ಮೇಲಕ್ಕೆತ್ತಿ ಹಿಂದಕ್ಕೆ ಚಾಚಿ. ಕಾಲುಗಳನ್ನು ಸಹ ಮೇಲಕ್ಕೆತ್ತಿ ಕೈಗಳಿಂದ ಕಾಲುಗಳ ಹೆಬ್ಬೆರಳನ್ನು ಹಿಡಿದುಕೊಳ್ಳಿ. ಈ ರೀತಿಯಾಗಿ ಮಾಡುವುದರಿಂದ ಆರೋಗ್ಯ ಸ್ಥಿತಿ ಸುಧಾರಿಸುತ್ತದೆ. ಜತೆಗೆ ಮಹಿಳೆಯರ ಆರೋಗ್ಯ ಚೆನ್ನಾಗಿರುತ್ತದೆ.

ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸದ ಮಧ್ಯೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯುತ್ತಿದ್ದೀರಿ. ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮ, ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಸ್ಥಿತಿ ಸುಧಾರಿಸುತ್ತದೆ ಮತ್ತು ದಿನಪೂರ್ತಿ ಚಟುವಟಿಕೆಯಿಂದ ಕೂಡಿರಬಹುದಾಗಿದೆ.

ಇದನ್ನೂ ಓದಿ:

Women Health: ಪಿಸಿಒಡಿ ಸಮಸ್ಯೆ ಯುವತಿಯರಲ್ಲಿ ಹೆಚ್ಚುವಿಕೆಗೆ ಕಾರಣವೇನು? ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರ ವಿಧಾನ ಹೀಗಿದೆ

Women Health: ನಿಮ್ಮ ಮಗು ಆರೋಗ್ಯವಾಗಿ ಮತ್ತು ಚುರುಕಾಗಿ ಬೆಳೆಯಲು ಗರ್ಭಿಣಿಯರಿಗಾಗಿ ಕೆಲವೊಂದಿಷ್ಟು ಟಿಪ್ಸ್​ಗಳು

(Women health yoga asanas for women for health)

Published On - 8:29 pm, Sat, 28 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ