ನಾವು ನಿಮ್ಮೊಂದಿಗೇ ಇದ್ದೆವು ಆದರೆ ನೀವೇ ನಮ್ಮನ್ನು ದೂರ ತಳ್ಳಿದ್ದೀರಿ: ಬಿಜೆಪಿ ಬಗ್ಗೆ ಉದ್ಧವ್ ಮಾತು

ಶಿವಸೇನಾ (ಯುಬಿಟಿ) ಅಧ್ಯಕ್ಷ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಸಿಂಧುದುರ್ಗದ ಸಾವಂತ್ ವಾಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಬಿಜೆಪಿಯನ್ನು ಹಲವಾರು ಬಾರಿ ಗೇಲಿ ಮಾಡಿದರು ಆದರೆ ಪ್ರಧಾನಿ ಮೋದಿಯ ಬಗ್ಗೆ ಮೃದುವಾಗಿ ಮಾತನಾಡುತ್ತಾ, ಸ್ವಲ್ಪ ವಿಚಿತ್ರವಾದ ಸಂಗತಿಯನ್ನು ಹೇಳಿದರು. ನಾವು ಮಿತ್ರರು, ನಿಮ್ಮ ಶತ್ರುಗಳಲ್ಲ, ಇಂದಿಗೂ ಮಿತ್ರರು ಎಂದು ಹೇಳಿದರು.

ನಾವು ನಿಮ್ಮೊಂದಿಗೇ ಇದ್ದೆವು ಆದರೆ ನೀವೇ ನಮ್ಮನ್ನು ದೂರ ತಳ್ಳಿದ್ದೀರಿ: ಬಿಜೆಪಿ ಬಗ್ಗೆ ಉದ್ಧವ್ ಮಾತು
ಮೋದಿ-ಉದ್ಧವ್ ಠಾಕ್ರೆ
Image Credit source: Live Hindustan

Updated on: Feb 05, 2024 | 11:17 AM

ನಾವು ನಿಮ್ಮೊಂದಿಗೇ ಇದ್ದೆವು ಆದರೆ ನೀವೇ ನಮ್ಮನ್ನು ದೂರ ತಳ್ಳಿದ್ದೀರಿ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav Thackeray) ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ಈಗಲೂ ಕೂಡ ನಮ್ಮ ಪಕ್ಷ ಎಂದಿಗೂ ಬಿಜೆಪಿಯ ಶತ್ರುವಲ್ಲ, 2019ರಲ್ಲಿ ಶಿವಸೇನೆ ನಿಮ್ಮೊಂದಿಗಿತ್ತು, ಹಾಗಾಗಿ ನೀವು ಪ್ರಧಾನಿಯಾದಿರಿ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿ ಮಾತನಾಡಿದ್ದಾರೆ. ಇದರ ಹೊರತಾಗಿಯೂ ಬಿಜೆಪಿ ಶಿವಸೇನೆಯನ್ನು ದೂರ ತಳ್ಳಿತ್ತು ಎಂದು ಹೇಳಿದ್ದಾರೆ.

ಠಾಕ್ರೆ ಹೇಳಿಕೆ ನಂತರ ಸಾಕಷ್ಟು ಊಹಾಪೋಹಗಳು ಎದ್ದಿವೆ. ಇತ್ತೀಚೆಗಷ್ಟೇ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಎನ್​ಡಿಎಗೆ ಮರಳಿದ್ದು, ಉದ್ಧವ್ ಅವರ ಹೇಳಿಕೆಯಿಂದ ಹಲವು ಅರ್ಥಗಳನ್ನು ಕಲ್ಪಿಸಿಕೊಳ್ಳಲಾಗುತ್ತಿದೆ. ಉದ್ಧವ್ ಠಾಕ್ರೆ ಅವರ ಶಿವಸೇನೆ ದೀರ್ಘಕಾಲದಿಂದ ಎನ್​ಡಿಎ ಭಾಗವಾಗಿದೆ, ಆದರೆ ಕೆಲವು ವರ್ಷಗಳ ಹಿಂದೆ ಬಿಜೆಪಿ ಹಾಗೂ ಶೀವಸೇನೆ ನಡುವೆ ಘರ್ಷಣೆ ನಡೆದಿತ್ತು. ಈಗ ಶಿವಸೇನೆ ವಿರೋಧ ಪಕ್ಷದ ಇಂಡಿಯಾ ಒಕ್ಕೂಟದ ಭಾಗವಾಗಿದೆ. ನಮ್ಮ ಹಿಂದುತ್ವ ಹಾಗೂ ಕೇಸರಿ ಧ್ವಜ ಇನ್ನೂ ಹಾಗೆಯೇ ಇದೆ ಎಂದರು.

ನಾನು ಪ್ರಧಾನಿ ಮೋದಿಗೆ ಹಿಂದೂ ಶತ್ರುವಾಗಿರಲಿಲ್ಲ ಈಗಲೂ ಕೂಡ ಅಲ್ಲ, ಸೇನೆಯೊಂದಿಗಿನ ಸಂಬಂಧವನ್ನು ಮುರಿಯಲು ಮೋದಿ ನಿರ್ಧರಿಸಿದ್ದಾರೆ.  ಉದ್ಧವ್ ಠಾಕ್ರೆ ಕೊಂಕಣದಲ್ಲಿ ಪ್ರವಾಸ ನಡೆಸುತ್ತಿದ್ದಾರೆ, ಲೋಕಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದಾರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ಮತ್ತಷ್ಟು ಓದಿ: ಉದ್ಧವ್ ಠಾಕ್ರೆ, ಏಕನಾಥ್ ಶಿಂಧೆ ಬಣದ ಶಿವಸೇನಾಗೆ ಹೊಸ ಹೆಸರು ನಿಗದಿ ಪಡಿಸಿದ ಚುನಾವಣಾ ಆಯೋಗ

ಯಾವುದೇ ಚುನಾವಣೆಗಿಂತ ಭಿನ್ನವಾಗಿ 2024ರ ಸಾರ್ವತ್ರಿಕ ಚುನಾವಣೆಯು ಅತ್ಯಂತ ಪ್ರಮುಖ ಚುನಾವಣೆಯಾಗಿದೆ. ಮುಂಬರುವ ಚುನಾವಣೆಗೂ ಮುನ್ನ ಒಗ್ಗಟ್ಟಿನಿಂದ ಇರುವಂತೆ ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿರುವ ಠಾಕ್ರೆ ನಮಗೆ ತೊಂದರೆ ನೀಡಿದವರಿಗೆ ಮುಂದಿನ ಪೀಳಿಗೆ ಅವರ ಹೆಸರನ್ನು ನೆನಪಿಸಿಕೊಳ್ಳದಂತಹ ಕಠಿಣ ಪಾಠವನ್ನು ಕಲಿಸಲಾಗುತ್ತದೆ. ನಾವು ಹಿಂದುತ್ವ ಹಾಗೂ ಎರಡು ಧರ್ಮಗಳ ನಡುವೆ ಬೆಂಕಿ ಹಚ್ಚುವುದಿಲ್ಲ ಎಂದು ತಿಳಿದ ಮುಸ್ಲಿಮರು ನಮ್ಮೊಂದಿಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ