ಅಯೋಧ್ಯೆಯಲ್ಲಿ ಕರ್ನಾಟಕದ ಕೈರುಚಿ, ರಾಮ ಪಥದ ಬಳಿ ಉಡುಪಿ ಹೋಟೆಲ್ ಆರಂಭ

ಅಯೋಧ್ಯೆಯ ಶ್ರೀರಾಮನ ಜನ್ಮಭೂಮಿಯಲ್ಲಿ ಉಡುಪಿ ಹೋಟೆಲ್ ತೆರೆಯಲಾಗಿದೆ. ಮುಧೋಳದ ಲೋಕಾಪುರದ ಗುಣಾಕರ್ ಶೆಟ್ಟಿ ಎಂಬುವವರು ಹೋಟೆಲ್ ಆರಂಭಿಸಿದ್ದಾರೆ.

ಅಯೋಧ್ಯೆಯಲ್ಲಿ ಕರ್ನಾಟಕದ ಕೈರುಚಿ, ರಾಮ ಪಥದ ಬಳಿ ಉಡುಪಿ ಹೋಟೆಲ್ ಆರಂಭ
ಉಡುಪಿ ಹೋಟೆಲ್

Updated on: Dec 01, 2024 | 12:47 PM

ಅಯೋಧ್ಯೆಯ ಶ್ರೀರಾಮನ ಜನ್ಮಭೂಮಿಯಲ್ಲಿ ಉಡುಪಿ ಹೋಟೆಲ್ ತೆರೆಯಲಾಗಿದೆ. ಮುಧೋಳದ ಲೋಕಾಪುರದ ಗುಣಾಕರ್ ಶೆಟ್ಟಿ ಎಂಬುವವರು ಹೋಟೆಲ್ ಆರಂಭಿಸಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಬಾಲ ಮೂರ್ತಿ ಲೋಕಾರ್ಪಣೆಗೊಂಡ ಬಳಿಕ ಇಲ್ಲಿನ ಹೋಟೆಲ್, ವಸತಿ ಗೃಹಗಳ ದರಗಳು ಗಗನಕ್ಕೇರಿವೆ. ಆದರೆ, ನಾವು ಆರಂಭಿಸುತ್ತಿರುವ ಹೋಟೆಲ್ ಮತ್ತು ವಸತಿ ಗೃಹದಲ್ಲಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಿಯಾಯಿತಿ ದರ ನಿಗದಿಪಡಿಸಲಾಗಿದೆ ಎಂದು ಈ ಮೊದಲು ಅವರು ತಿಳಿಸಿದ್ದರು.

ಅಲ್ಲದೇ ಇಡೀ ಹೋಟೆಲ್ ಕನ್ನಡಮಯ ಆಗಿರಲಿದ್ದು, ಕೆಲಸಕ್ಕೆ ಕನ್ನಡಿಗರಿಗೆ ಆಧ್ಯತೆ ನೀಡಲಾಗುವುದು. ಒಟ್ಟಾರೆ ಕರ್ನಾಟಕದಿಂದ ಬರುವ ಭಕ್ತರಿಗೆ ವಿಶೇಷ ಆದರಾತಿಥ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಸಾನಿಧ್ಯದಲ್ಲಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ನೆರವೇರಿಸಿದ್ದಾರೆ.

ಇನ್ಮುಂದೆ ಅಯೋಧ್ಯೆಯಲ್ಲೂ ಶ್ರೀರಾಮನ ಭಕ್ತರಿಗೆ ಕರ್ನಾಟಕದ ಸವಿರುಚಿ ಲಭ್ಯ, ರಾಮಮಂದಿರದಿಂದ 500 ಮೀ. ದೂರ ರಾಮಪಥ್ ರಸ್ತೆಯಲ್ಲಿ ಈ ಹೋಟೆಲ್​ ಇದೆ.

ಮತ್ತಷ್ಟು ಓದಿ: ದೇಶದ ಪ್ರತಿ ಮನೆಯಲ್ಲಿಂದು ರಾಮ ಜ್ಯೋತಿ ಬೆಳಗಲಿದೆ: ಮೋದಿ

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲೋಕಾಪುರ ಮೂಲದ ಗುಣಾಕರಶೆಟ್ಟಿ ಅವರ ಒಡೆತನದ ಹೊಟೆಲ್ ಇದಾಗಿದೆ. ಉಡುಪಿ ಅಯೋಧ್ಯೆ ಫುಡ್ ಪ್ಯಾಲೇಸ್ ಹೆಸರಿನಲ್ಲಿ ಹೋಟೆಲ್ ನಿರ್ಮಿಸಲಾಗಿದೆ. ಕಳೆದ ವರ್ಷ ಜನವರಿ 22ರಂದು ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಗಳು ನೆರವೇರಿದ್ದವು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:47 pm, Sun, 1 December 24