Ram Mandir Inauguration Highlights: ದೇಶದ ಪ್ರತಿ ಮನೆಯಲ್ಲಿಂದು ರಾಮ ಜ್ಯೋತಿ ಬೆಳಗಲಿದೆ: ಮೋದಿ

Ganapathi Sharma
| Updated By: Rakesh Nayak Manchi

Updated on:Jan 22, 2024 | 4:46 PM

Ayodhya Ram Temple Consecration Live Updates in Kannada: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರತಿಷ್ಠಾಪನೆ ಸೋಮವಾರ ನೆರವೇರಿತು. ಸುಮಾರು 5 ಶತಕಗಳ ನಂತರ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ಲೋಕಾರ್ಪಣೆಯಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದು, ದೇಶದಾದ್ಯಂತ ಸಂಭ್ರಮಾಚರಣೆ ನಡೆದಿದೆ. ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಲಭ್ಯ.

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ (Ayodhya Ram Mandir) ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ನೆರವೇರಿದೆ. ಅಯೋಧ್ಯಾ (Ayodhya) ನಗರವು ಸಂಪೂರ್ಣವಾಗಿ ಅಲಂಕರಿಸಲ್ಪಟ್ಟಿದೆ. 500ಕ್ಕೂ ಹೆಚ್ಚು ವರ್ಷಗಳ ಹಿಂದೂಗಳ ಕಾಯುವಿಕೆ ಇಂದು ಕೊನೆಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಜನಪ್ರಿಯ ಕ್ರಿಕೆಟಿಗರು, ಕೈಗಾರಿಕೋದ್ಯಮಿಗಳು, ಸಂತರು, ಸೆಲೆಬ್ರಿಟಿಗಳು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳನ್ನು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಅಮೆರಿಕ ಮತ್ತು ಯುಕೆ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಆಚರಣೆಗಳು ಮತ್ತು ಆಚರಣೆಗಳು ನಡೆಯುತ್ತವೆ. ಭಾರತದಲ್ಲಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು, ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ. ನಾಳೆ (ಜನವರಿ 23) ಬೆಳಗ್ಗೆಯಿಂದ ರಾಮ ಮಂದಿರದಲ್ಲಿ ಸಾರ್ವಜನಿಕರು ರಾಮ ಲಲ್ಲಾನ ದರ್ಶನ ಪಡೆಯಬಹುದಾಗಿದೆ. ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಕ್ಷಣ ಕ್ಷಣದ ಅಪ್​ಡೇಟ್​​ ಇಲ್ಲಿದೆ.

LIVE NEWS & UPDATES

The liveblog has ended.
  • 22 Jan 2024 04:35 PM (IST)

    Ram Mandir Inauguration Live: ಮಹಾಮಸ್ತಕಾಭಿಷೇಕದ ನಂತರ ದೀಪಗಳಿಂದ ಪ್ರಜ್ವಲಿಸಲಿದೆ ಅಯೋಧ್ಯೆ

    ಮಹಾಮಸ್ತಕಾಭಿಷೇಕ ಮುಗಿದ ನಂತರ ಸಂಜೆ ಅಯೋಧ್ಯೆ ದೀಪಗಳಿಂದ ಪ್ರಜ್ವಲಿಸಲಿದೆ. ಇಲ್ಲಿ ‘ರಾಮ ​​ಜ್ಯೋತಿ’ ಬೆಳಗುವ ಮೂಲಕ ದೀಪಾವಳಿ ಆಚರಿಸಲಾಗುತ್ತದೆ. ಇದರೊಂದಿಗೆ ಮನೆಗಳು, ಅಂಗಡಿಗಳು, ಸಂಸ್ಥೆಗಳು ಮತ್ತು ಪೌರಾಣಿಕ ಸ್ಥಳಗಳಲ್ಲಿ ‘ರಾಮ ಜ್ಯೋತಿ’ಯನ್ನು ಬೆಳಗಿಸಲಾಗುತ್ತದೆ. ಸರಯೂ ನದಿಯ ದಡದಿಂದ ಮಣ್ಣಿನಿಂದ ಮಾಡಿದ ದೀಪಗಳಿಂದ ಅಯೋಧ್ಯೆಯು ಬೆಳಗಲಿದೆ. ರಾಮಲಾಲಾ, ಕನಕ್ ಭವನ, ಹನುಮಾನ್ ಗರ್ಹಿ, ಗುಪ್ತರಘಾಟ್, ಸರಯು ಬೀಚ್, ಲತಾ ಮಂಗೇಶ್ಕರ್ ಚೌಕ್, ಮಣಿರಾಮ್ ದಾಸ್ ಕಂಟೋನ್ಮೆಂಟ್ ಸೇರಿದಂತೆ 100 ದೇವಸ್ಥಾನಗಳು, ಪ್ರಮುಖ ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ.

  • 22 Jan 2024 03:51 PM (IST)

    Ram Mandir Inauguration Live: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ 50 ದೇಶಗಳ 92 ವಿಶೇಷ ಆಹ್ವಾನಿತರು

    ಅಯೋಧ್ಯೆ ರಾಮ ಮಂದಿರದಲ್ಲಿ ಮಧ್ಯಾಹ್ನ 12.20ಕ್ಕೆ ಸರಿಯಾಗಿ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಿದ್ದು 12:45ರವರೆಗೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ವಿಧಿ ವಿಧಾನಗಳನ್ನು ಪೂರೈಸಿದರು. ಸುಮಾರು 2 ಗಂಟೆಗಳ ಕಾಲ 25 ರಾಜ್ಯಗಳ ವಿವಿಧ ಸಂಗೀತ ವಾದ್ಯಗಳ ಕಾರ್ಯಕ್ರಮ ನಡೆಯಿತು. 50 ದೇಶಗಳನ್ನು ಪ್ರತಿನಿಧಿಸುವ 92 ವಿಶೇಷ ಆಹ್ವಾನಿತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕೋಟ್ಯಂತರ ಭಕ್ತರು ಅಯೋಧ್ಯೆ ರಾಮನನ್ನು ಕಣ್ತುಂಬಿಕೊಂಡಿದ್ದಾರೆ.

  • 22 Jan 2024 03:16 PM (IST)

    Ram Mandir Inauguration Live: ಕುಬೇರ್ ತಿಲಾಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

    ಅಯೋಧ್ಯೆಯ ಕುಬೇರ್ ತಿಲಾಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಕುಬೇರ್ ತಿಲಾದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

  • 22 Jan 2024 02:41 PM (IST)

    Ram Mandir Inauguration Live: ಭಾರತದ ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀರಾಮ ಇದ್ದಾನೆ: ಮೋದಿ

    ಭಾರತದ ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀರಾಮ ಇದ್ದಾನೆ. ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ರಾಮರಸ ನಮ್ಮ ಜೀವನದ ರೀತಿ, ಅದು ನಿರಂತರವಾದದ್ದು. ರಾಮಮಂದಿರ ನಿರ್ಮಾಣ ಕೇವಲ ವಿಜಯ ಅಲ್ಲ, ವಿನಯದಿಂದ ಕೂಡಿದೆ. ಶ್ರೀರಾಮ ಬೆಂಕಿಯಲ್ಲ, ಶ್ರೀರಾಮ ಶಕ್ತಿ. ಶ್ರೀರಾಮ ವಿವಾದ ಅಲ್ಲ, ರಾಮ ಸಮಾಧಾನ. ಶ್ರೀರಾಮ ವರ್ತಮಾನ ಅಲ್ಲ, ಅನಂತಕಾಲ. ಅಯೋಧ್ಯೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಶ್ರೀರಾಮ ಪ್ರತಿಷ್ಠಾಪನೆಯಾಗಿದೆ. ಶ್ರೀರಾಮ ಭಾರತದ ಚೇತನ ಅಷ್ಟೇ ಅಲ್ಲ ಚಿಂತನ ಕೂಡ. ರಾಮ ವ್ಯಾಪಕ, ವಿಶ್ವ, ವಿಶ್ವಾತ್ಮ, ಪ್ರವಾಹ, ಪ್ರಭಾವ ಕೂಡ ಆಗಿದ್ದಾನೆ. ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಆಗಿದೆ, ಈಗ ಮುಂದೆ ಏನು? ಕಾಲಚಕ್ರ ಬದಲಾಗುತ್ತಿದೆ. ಮುಂದಿನ ಪೀಳಿಗೆ ನಮ್ಮ ಕಾರ್ಯವನ್ನು ಸಾವಿರ ವರ್ಷ ಕಾಲ ನೆನಪು ಇಡುತ್ತವೆ. ದೇವನಿಂದ ದೇಶ, ರಾಮನಿಂದ ರಾಷ್ಟ್ರದ ಚೇತನ ವಿಸ್ತಾರಗೊಳ್ಳಬೇಕಿದೆ. ಭವ್ಯ ಭಾರತದ ಆಧಾರ ಪ್ರಭು ಶ್ರೀರಾಮ ಆಗುತ್ತಾನೆ ಎಂದು ಮೋದಿ ಹೇಳಿದರು.

  • 22 Jan 2024 02:35 PM (IST)

    Ram Mandir Inauguration Live: ದೇಶದ ಪ್ರತಿ ಮನೆಯಲ್ಲಿಂದು ರಾಮ ಜ್ಯೋತಿ ಬೆಳಗಲಿದೆ: ಮೋದಿ

    ಪ್ರಭು ಶ್ರೀರಾಮನ ಅಸ್ತಿತ್ವಕ್ಕಾಗಿ ನಮ್ಮ ದೇಶದಲ್ಲಿ ಕಾನೂನು ಸಂಘರ್ಷ ಕೂಡ ನಡೆದಿದೆ. ಭಾರತದ ನ್ಯಾಯದೇವತೆ ಆದೇಶದಂತೆ ನ್ಯಾಯಬದ್ಧವಾಗಿ ಮಂದಿರ ನಿರ್ಮಾಣವಾಗಿದೆ. ಇಂದು ಇಡೀ ದೇಶ ಇಂದು ರಾಮ ದೀಪಾವಳಿ ಆಚರಿಸುತ್ತಿದೆ. ದೇಶದ ಪ್ರತಿ ಮನೆಯಲ್ಲೂ ಇಂದು ಸಂಜೆ ಶ್ರೀರಾಮನ ಜ್ಯೋತಿ ಬೆಳಗಲಿದೆ. ಕಾಲಚಕ್ರ ಮತ್ತೆ ಬದಲಾವಣೆಯಾಗಿದೆ. ನನ್ನ 11 ದಿನಗಳ ಉಪವಾಸ ವ್ರತ ಶ್ರೀರಾಮನ ಮಂದಿರದಲ್ಲಿ ಅಂತ್ಯಗೊಳಿಸಿದ್ದೇನೆ. ಸಮುದ್ರದಿಂದ ಸರಯೂವರೆಗೆ ಯಾತ್ರೆಯ ಅವಕಾಶ ಸಿಕ್ಕಿದೆ. ಭಾರತದ ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀರಾಮ ಇದ್ದಾನೆ. ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ರಾಮರಸ ನಮ್ಮ ಜೀವನದ ರೀತಿ, ಅದು ನಿರಂತರವಾದದ್ದು. ರಾಮಮಂದಿರ ನಿರ್ಮಾಣ ಕೇವಲ ವಿಜಯ ಅಲ್ಲ, ವಿನಯದಿಂದ ಕೂಡಿದೆ ಎಂದು ಮೋದಿ ಹೇಳಿದರು.

  • 22 Jan 2024 02:24 PM (IST)

    Ram Mandir Inauguration Live: ಇಂದಿನಿಂದ ಹೊಸ ಇತಿಹಾಸದ ಉದಯ: ಮೋದಿ

    ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸದ ಉದಯವಾಗಲಿದೆ. ದೇಶದಲ್ಲಿ ಇಂದು ಪ್ರತಿದಿನವೂ ಒಂದು ವಿಶ್ವಾಸ ಮೂಡುತ್ತಿದೆ. ಈ ಕ್ಷಣ ದೈವಿಕ ಅನುಭವವನ್ನು ಪಡೆಯುತ್ತಿದ್ದೇನೆ. ಪ್ರಭು ಶ್ರೀರಾಮನ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಇಷ್ಟು ವರ್ಷಗಳ ಕಾಲ ನಾವು ಸಮಯ ತೆಗೆದುಕೊಂಡಿದ್ದಕ್ಕೆ ಕ್ಷಮೆಯಾಚಿಸುವೆ. ಪ್ರಭು ಶ್ರೀರಾಮನ ಆಗಮನದಿಂದ ಇಡೀ ದೇಶ ಸಂಭ್ರಮಗೊಂಡಿದೆ ಎಂದು ಮೋದಿ ಹೇಳಿದರು.

  • 22 Jan 2024 02:20 PM (IST)

    Ram Mandir Inauguration Live: ಗುಲಾಮಿ ಮನಸ್ಥಿತಿ ಎದುರಿಸಿ ನಮ್ಮ ದೇಶ ಎದ್ದುನಿಂತಿದೆ: ಮೋದಿ

    ಈ ಕ್ಷಣ ಅತ್ಯಂತ ಪವಿತ್ರವಾದದ್ದು. 2024 ರ ಜನವರಿ 22 ಇದು ಕೇವಲ ದಿನಾಂಕ ಅಲ್ಲ, ಹೊಸ ಕಾಲಚಕ್ರದ ಉದಯ. ಗುಲಾಮಿ ಮನಸ್ಥಿತಿಯನ್ನು ಎದುರಿಸಿ ನಮ್ಮ ರಾಷ್ಟ್ರ ಎದ್ದು ನಿಂತ ಕ್ಷಣವಿದು ಎಂದು ಮೋದಿ ಹೇಳಿದರು.

  • 22 Jan 2024 02:16 PM (IST)

    Ram Mandir Inauguration Live: ಇಂದು ನಮ್ಮ ರಾಮ ಬಂದಿದ್ದಾನೆ: ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಧಾನಿ ಮೋದಿ

    ಇಂದು ನಮ್ಮ ರಾಮ ಬಂದಿದ್ದಾನೆ. ಅನೇಕ ಜನರ ತ್ಯಾಗ, ಬಲಿದಾನ, ಶ್ರಮದ ಫಲವಾಗಿ ಪ್ರಭು ಶ್ರೀರಾಮ ಚಂದ್ರ ಮತ್ತೆ ಬಂದಿದ್ದಾನೆ ಎಂದು  ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಇಂದು ನಮ್ಮೆಲ್ಲರ ರಾಮ ಬಂದಿದ್ದಾನೆ. ವರ್ಷಗಳ ಹೋರಾಟದ ಬಳಿಕ ರಾಮ ಬಂದಿದ್ದಾನೆ. ಈ ಶುಭ ಘಳಿಗೆ ಹಿನ್ನೆಲೆ ಎಲ್ಲರಿಗೂ ಶುಭಾಶಯ. ಹೇಳಲು ಎಷ್ಟೊಂದು ವಿಷಯಗಳು ಇವೆ. ಆದರೆ, ಮಾತುಗಳೇ ಹೊರಳದೇ ನನ್ನ ಕಂಠ ತುಂಬಿ ಬರುತ್ತಿದೆ. ನಮ್ಮ ರಾಮಲಲ್ಲಾ ಇನ್ಮುಂದೆ ಟೆಂಟ್​​ನಲ್ಲಿ ಇರಲ್ಲ, ನಮ್ಮ ರಾಮ ಲಲ್ಲಾ ದಿವ್ಯ ಮಂದಿರದಲ್ಲಿ ಇರಲಿದ್ದಾನೆ ಎಂದು ಮೋದಿ ಹೇಳಿದರು.

  • 22 Jan 2024 01:42 PM (IST)

    Ram Mandir Inauguration Live: ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಅದ್ಭುತ ಕ್ಷಣ: ಮೋದಿ

    ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಅದ್ಭುತ ಕ್ಷಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಅವರು ಸಂದೇಶ ಪ್ರಕಟಿಸಿದ್ದಾರೆ. ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಬಳಿಕ ಪೂಜೆ ನೆರವೇರಿಸಿದ ಮೋದಿ ಕೆಲವೇ ಕ್ಷಣಗಳಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

  • 22 Jan 2024 12:57 PM (IST)

    Ram Mandir Inauguration Live: ರಾಮ ಲಲ್ಲಾನಿಗೆ ಪ್ರಧಾನಿ ಮೋದಿ ಆರತಿ

    ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಮ ಲಲ್ಲಾನಿಗೆ ಪೂಜೆ ನೆರವೇರಿಸಿದರು. ಮೋದಿ ಅವರು ರಾಮ ಲಲ್ಲಾನ ಭವ್ಯ ಮೂರ್ತಿಗೆ ಆರತಿ ಮಾಡಿದರು.

  • 22 Jan 2024 12:41 PM (IST)

    Ram Mandir Inauguration Live: ಅಯೋಧ್ಯೆ ರಾಮ ಮಂದಿರ: ರಾಮ ಲಲ್ಲಾನಿಗೆ ಪ್ರಧಾನಿ ಮೋದಿಯಿಂದ ಪೂಜೆ

    ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಲಲ್ಲಾನಿಗೆ ಪೂಜೆ ನೆರವೇರಿಸುತ್ತಿದ್ದಾರೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆರ್​ಎಸ್​​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇದ್ದಾರೆ.

  • 22 Jan 2024 12:33 PM (IST)

    Ram Mandir Inauguration Live: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ

    ಅಯೋಧ್ಯೆ ನೂತನ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಮಸ್ತ ಜನತೆಯ ಪರವಾಗಿ ಯಜಮಾನನಾಗಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದರೊಂದಿಗೆ, ಭಕ್ತರ ದರ್ಶನಕ್ಕೆ ಬಾಲ ರಾಮ ಮುಕ್ತನಾಗಲಿದ್ದಾನೆ.

  • 22 Jan 2024 12:26 PM (IST)

    Ram Mandir Inauguration Live: ಅತೀವ ಸಂತಸ ತಂದ ಕ್ಷಣ: ಮೋದಿ ಬಣ್ಣನೆ

    ಅಯೋಧ್ಯಾ ಧಾಮದಲ್ಲಿ ಶ್ರೀರಾಮ ಲಲ್ಲಾ ಅವರ ಪ್ರಾಣ ಪ್ರತಿಷ್ಠೆಯ ಅಲೌಕಿಕ ಕ್ಷಣವು ಎಲ್ಲರನ್ನೂ ಭಾವುಕರನ್ನಾಗಿಸಲಿದೆ. ಈ ದಿವ್ಯ ಕಾರ್ಯಕ್ರಮದ ಭಾಗವಾಗಿರುವುದು ನನಗೆ ಅತೀವ ಸಂತಸ ತಂದಿದೆ. ಜಯ್ ಸಿಯಾ ರಾಮ್! ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

  • 22 Jan 2024 12:23 PM (IST)

    Ram Mandir Inauguration Live: ವೇದ ಮಂತ್ರಗಳೊಂದಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ

    ಅಯೋಧ್ಯೆಯ ರಾಮ ಮಂದಿರದ ನೂತನ ಗರ್ಭಗುಡಿಯಲ್ಲಿ ವೇದ ಮಂತ್ರಗಳೊಂದಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದೆ. ಪ್ರಧಾನಿ ಮೋದಿ ಪ್ರಾಣ ಪ್ರತಿಷ್ಠಾಪನೆ ಪೂಜೆ ನೆರವೇರಿಸುತ್ತಿದ್ದಾರೆ.

  • 22 Jan 2024 12:21 PM (IST)

    Ram Mandir Inauguration Live: ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಪೂಜಾ ವಿಧಿವಿಧಾನ ನೆರವೇರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ

    ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪೂಜಾ ವಿಧಿವಿಧಾನ ನೆರವೇರಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉಪಸ್ಥಿತರಿದ್ದಾರೆ.

  • 22 Jan 2024 12:13 PM (IST)

    Ram Mandir Inauguration Live: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭ

    ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಯಜಮಾನರಾಗಿ ಮಂದಿರ ಪ್ರವೇಶಿಸಿದ್ದು, ಸಂಕಲ್ಪದಲ್ಲಿ ಭಾಗವಹಿಸಿದರು.

  • 22 Jan 2024 12:07 PM (IST)

    Ram Mandir Inauguration Live: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಧಾನಿ ಮೋದಿ, ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ

    ಅಯೋಧ್ಯೆಯ ರಾಮ ಮಂದಿರ ತಲುಪಿರುವ ಪ್ರಧಾನಿ ಮೋದಿ ಕೆಲವೇ ಕ್ಷಣಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾಗಲಿದ್ದಾರೆ. ಆ ನಂತರ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಮುಖ್ಯ ಯಜಮಾನರಾಗಿ ಮೋದಿ ಪಾಲ್ಗೊಳ್ಳಲಿದ್ದಾರೆ.

  • 22 Jan 2024 11:16 AM (IST)

    Ram Mandir Inauguration Live: ಅಯೋಧ್ಯೆಯ ರಾಮ ಮಂದಿರ ತಲುಪಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ರಾಮ ಮಂದಿರ ತಲುಪಿದರು. ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಅವರು ಅಲ್ಲಿಂದ ಹೆಲಿಕಾಪ್ಟರ್​ ಮೂಲಕ ರಾಮ ಮಂದಿರದ ಆವರಣಕ್ಕೆ ಬಂದರು. ಕೆಲವೇ ಕ್ಷಣಗಳಲ್ಲಿ ಪ್ರಾಣಪ್ರತಿಷ್ಠಾಪನೆ ಪೂಜಾ ಕೈಂಕೈರ್ಯ ಆರಂಭವಾಗಲಿದೆ.

  • 22 Jan 2024 10:45 AM (IST)

    Ram Mandir Inauguration Live: ಅಯೋಧ್ಯೆ ತಲುಪಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ. ಕೆಲವೇ ಕ್ಷಣಗಳಲ್ಲಿ ಅವರು ರಾಮ ಮಂದಿರ ತಲುಪಲಿದ್ದಾರೆ.

  • 22 Jan 2024 10:37 AM (IST)

    Ram Mandir Inauguration Live: ಕುಟುಂಬ ಸಮೇತ ಅಯೋಧ್ಯೆಗೆ ಬಂದ ಅಮಿತಾಭ್ ಬಚ್ಚನ್

    ಬಾಲಿವುಡ್ ಬಿಗ್​ಬಿ ಅಮಿತಾಭ್ ಬಚ್ಚನ್ ಕುಟುಂಬ ಸಮೇತ ಅಯೋಧ್ಯೆಗೆ ಆಗಮಿಸಿದರು. ಕನ್ನಡ, ತೆಲುಗು ಸಿನಿಮೋದ್ಯಮದ ಗಣ್ಯರು ಸೇರಿದಂತೆ ಸಿನಿಮೋದ್ಯಮದ ಅನೇಕ ಗಣ್ಯರು ಅಯೋಧ್ಯೆಗೆ ಆಗಮಿಸಿದ್ದಾರೆ.

  • 22 Jan 2024 10:01 AM (IST)

    Ram Mandir Inauguration Live: ಕೆಲವೇ ಕ್ಷಣಗಳಲ್ಲಿ ಅಯೋಧ್ಯೆ ತಲುಪಲಿರುವ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿ ಕೆಲವೇ ಕ್ಷಣಗಳಲ್ಲಿ ಅಯೋಧ್ಯೆ ತಲುಪಲಿದ್ದು, ವಿಮಾನ ನಿಲ್ದಾಣದಿಂದ ರಾಮ ಮಂದಿರಕ್ಕೆ ತೆರಳಲಿದ್ದಾರೆ. ಸಾಕೇತ್‌ನಲ್ಲಿರುವ ಹೆಲಿಪ್ಯಾಡ್‌ನಲ್ಲಿ ಇಳಿದು ಅಲ್ಲಿಂದ ದೇವಸ್ಥಾನಕ್ಕೆ ತೆರಳಲಿದ್ದಾರೆ. ಈ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ದೇವಸ್ಥಾನಕ್ಕೆ ಆಗಮಿಸಿದ್ದಾರೆ.

  • 22 Jan 2024 09:36 AM (IST)

    Ram Mandir Inauguration Live: ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಇನ್ನು ಕೆಲವೇ ಕ್ಷಣ ಬಾಕಿ, ಅಯೋಧ್ಯೆಯಲ್ಲಿ ಸಂಭ್ರಮ

    ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಪ್ರಾರಂಭವಾಗಲು ಇನ್ನು ಕೆಲವೇ ಕ್ಷಣಗಳಿವೆ. ರಾಮ ಲಲ್ಲಾಅವರನ್ನು ಸ್ವಾಗತಿಸಲು ಅಯೋಧ್ಯೆ ಸಿದ್ಧವಾಗಿದೆ. ಕ್ರೀಡೆ, ರಾಜಕೀಯ ಮತ್ತು ಚಿತ್ರರಂಗಕ್ಕೆ ಸಂಬಂಧಿಸಿದ ಗಣ್ಯರು ಅಯೋಧ್ಯೆಗೆ ಬಂದಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

  • 22 Jan 2024 08:57 AM (IST)

    Ram Mandir Inauguration Live: ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಹಾಜರಾಗಲ್ಲ ಎಲ್​ಕೆ ಅಡ್ವಾಣಿ

    ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಿಂದ ಬಿಜೆಪಿಯ ಹಿರಿಯ ನಾಯಕ, ರಾಮ ಮಂದಿರದ ರೂವಾರಿ ಎಂದೇ ಪರಿಗಣಿಸಲಾಗಿರುವ ಲಾಲ್ ಕೃಷ್ಣ ಅಡ್ವಾಣಿ ಭಾಗವಹಿಸುವುದಿಲ್ಲ. ಅವರಿಗೆ ಚಳಿಯಿಂದಾಗಿ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ರಾಮಮಂದಿರಕ್ಕಾಗಿ ಹೋರಾಟ ನಡೆಸಿದ್ದ ಅಡ್ವಾಣಿ ದೇಶಾದ್ಯಂತ ರಥಯಾತ್ರೆ ನಡೆಸಿದ್ದರು.

  • 22 Jan 2024 08:09 AM (IST)

    Ram Mandir Inauguration Live: ಕರ್ನಾಟಕದಾದ್ಯಂತ ಸಂಭ್ರಮ, ಎಲ್ಲೆಲ್ಲಿ ಹೇಗಿದೆ ಆಚರಣೆ?

    ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭದ ಪ್ರಯುಕ್ತ ಕರ್ನಾಟಕದಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ರಾಜ್ಯಾದ್ಯಂತ ಭಕ್ತರು ವಿವಿಧ ರೀತಿಯಲ್ಲಿ ಸಂಭ್ರಮ ಆಚರಿಸುತ್ತಿದ್ದಾರೆ. ಪೂರ್ತಿ ವಿವರಗಳಿಗೆ ಈ ಸ್ಟೋರಿ ಓದಿ: ಕರ್ನಾಟಕದಾದ್ಯಂತ ಸಂಭ್ರಮ, ಎಲ್ಲೆಲ್ಲಿ ಹೇಗಿದೆ ಆಚರಣೆ? ಇಲ್ಲಿದೆ ವಿವರ

  • 22 Jan 2024 08:01 AM (IST)

    Ram Mandir Inauguration Live: ಅಯೋಧ್ಯೆಯಿಂದ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ

    ಅಯೋಧ್ಯೆಗೆ ತೆರಳಿರುವ ನಟ, ನಿರ್ದೇಶಕ ರಿಷಭ್ ಶೆಟ್ಟಿ, ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೂ ಮೊದಲು ಅಲ್ಲಿರುವ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ.. ಹನುಮನ ದರ್ಶನ’ ಎಂದು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ಹಂಚಿಕೊಂಡಿದ್ದಾರೆ.

    ಮತ್ತಷ್ಟು ಓದಿ: ‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ..’; ಅಯೋಧ್ಯೆಯಿಂದ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ

  • 22 Jan 2024 07:54 AM (IST)

    Ram Mandir Inauguration Live: ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಬಿಗಿ ಭದ್ರತೆ

    ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಗೆ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮಂದಿರದ ಸುತ್ತ ನಾಲ್ಕು ಹಂತದ ಭದ್ರತೆ ಏರ್ಪಡಿಸಲಾಗಿದ್ದು, ಪೊಲಿಸ್, ಆರ್​ಎಎಫ್, ಕಮಾಂಡೋ, ದೇವಾಲಯ ಭದ್ರತಾ ಅಧಿಕಾರಿಗಳಿಂದ ರಕ್ಷಣೆ ಒದಗಿಸಲಾಗುತ್ತಿದೆ. ಮಂದಿರದ ಕಾರ್ಯಕರ್ತರಿಗೆ ವಿಶೇಷ ಪಾಸ್, ಕಾರ್ಮಿಕರಿಗೂ ಸಹ ವಿಶೇಷ ಪಾಸ್ ನೀಡಲಾಗಿದೆ. ಮಂದಿರದ ಸುತ್ತಮುತ್ತ ಓಡಾಟಕ್ಕೆ ನಿರ್ಭಂದ ಹೇರಲಾಗಿದೆ.

  • 22 Jan 2024 07:52 AM (IST)

    Ram Mandir Inauguration Live: ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ: ಕುಮಾರಸ್ವಾಮಿ

    ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದು, ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ ಎಂದು ಹೇಳಿದ್ದಾರೆ.

    ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ: ಹೆಚ್​ಡಿ ಕುಮಾರಸ್ವಾಮಿ

  • 22 Jan 2024 07:29 AM (IST)

    Ram Mandir Inauguration Live: ಅಯೋಧ್ಯೆ ರಾಮ ಮಂದಿರದ ಫೋಟೋ ತಿರುಚಿ ಪೋಸ್ಟ್ ಮಾಡಿದ ಯುವಕ ಅರೆಸ್ಟ್

    ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ತಾಜುದ್ದೀನ್‌ ದಫೇದಾ‌ರ್ ಎಂಬ ಯುವಕನೊಬ್ಬ ಅಯೋಧ್ಯೆ ರಾಮ ಮಂದಿರದ ಮೇಲೆ ಹಸಿರು ಬಾವುಟ ಹಾರಿಸಿರುವಂತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಗಜೇಂದ್ರಗಡ ಪೊಲೀಸರು ತಾಜುದ್ದೀನ್‌ ದಫೇದಾ‌ರ್ ಎಂಬಾತನನ್ನು ಬಂಧಿಸಿದ್ದಾರೆ. ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ಹೆಚ್ಚಿನ ವಿವರಗಳಿಗೆ ಓದಿ: ಗದಗ: ಅಯೋಧ್ಯೆ ರಾಮ ಮಂದಿರದ ಫೋಟೋ ತಿರುಚಿ ಪೋಸ್ಟ್ ಮಾಡಿದ ಯುವಕ ಅರೆಸ್ಟ್

  • 22 Jan 2024 07:12 AM (IST)

    Ram Mandir Inauguration Live: ಗಮನ ಸೆಳೆಯುತ್ತಿರುವ ಜಾನಪದ ನೃತ್ಯ

    ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಕಲಾವಿದರು ಜಾನಪದ ನೃತ್ಯ ಪ್ರದರ್ಶಿಸುತ್ತಿರುವುದು.

  • 22 Jan 2024 07:02 AM (IST)

    Ram Mandir Inauguration Live: ಕುಟುಂಬಸಮೇತ ಅಯೋಧ್ಯೆಗೆ ತೆರಳಿದ ಹೆಚ್​ಡಿ ದೇವೇಗೌಡ

    ಅಯೋಧ್ಯೆಯಲ್ಲಿ ಇಂದು ರಾಮ ಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಕುಟುಂಬ ಸಮೇತ ಅಯೋಧ್ಯೆಗೆ ತೆರಳಿದ್ದಾರೆ. ದೇವೇಗೌಡರು, ಪತ್ನಿ ಚೆನ್ನಮ್ಮ, ಕುಮಾರಸ್ವಾಮಿ, ನಿಖಿಲ್ ಹೆಚ್​​ಎಎಲ್​ನಿಂದ ಪ್ರೈವೆಟ್​ ಜೆಟ್​ನಲ್ಲಿ ತೆರಳಿದ್ದಾರೆ.

  • 22 Jan 2024 06:58 AM (IST)

    Ram Mandir Inauguration Live: ಪ್ರಾಣ ಪ್ರತಿಷ್ಠಾಪನೆ ಮುಹೂರ್ತ ವಿವರ

    ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಮಧ್ಯಾಹ್ನ 12.29 ರಿಂದ 12.30 ರವರೆಗೆ ಇರಲಿದೆ. ಪ್ರಾಣ ಪ್ರತಿಷ್ಠಾಪನೆಯ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ. ಪೂಜಾ ವಿಧಿವಿಧಾನಗಳನ್ನು ದೇಶದ ಜನರ ಪ್ರತಿನಿಧಿಯಾಗಿ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ.

  • 22 Jan 2024 06:57 AM (IST)

    Ram Mandir Inauguration Live: ಪ್ರಧಾನಿ ಮೋದಿಯವರ ಇಂದಿನ ವೇಳಾಪಟ್ಟಿ

    ಬೆಳಗ್ಗೆ 10.45ಕ್ಕೆ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಲಿಪ್ಯಾಡ್​ಗೆ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ 10.55ಕ್ಕೆ ಹೆಲಿಕಾಪ್ಟರ್‌ನಲ್ಲಿ ಶ್ರೀರಾಮ ಮಂದಿರ ತಲುಪಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆವರೆಗೂ ಸಮಯ ಕಾಯ್ದಿರಿಸಲಾಗಿದೆ. ಮಧ್ಯಾಹ್ನ 12.05-12.55ರವರೆಗೆ ಪ್ರಾಣಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.55ಕ್ಕೆ ಪೂಜಾ ಸ್ಥಳದಿಂದ ಹೊರಡಲಿರುವ ಪ್ರಧಾನಿ ಮೋದಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಲುಪಲಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ಕಾರ್ಯಕ್ರಮ ಸ್ಥಳದಲ್ಲಿರುವ ಮೋದಿ, ಮಧ್ಯಾಹ್ನ 2.10ಕ್ಕೆ ಕುಬೇರ್ ತಿಲಾಗೆ ಭೇಟಿ ನೀಡಲಿದ್ದಾರೆ.

  • 22 Jan 2024 06:57 AM (IST)

    Ram Mandir Inauguration Live: ಟ್ರಸ್ಟ್ ನೀಡಿರುವ ಎಂಟ್ರಿ ಕಾರ್ಡ್‌ ಇದ್ದರೆ ಮಾತ್ರ ಪ್ರವೇಶ

    ಅಯೋಧ್ಯೆಯಲ್ಲಿ ಇಂದು ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ಪಡೆದಿರುವ ಅತಿಥಿಗಳು ಬೆಳಗ್ಗೆ 10.30ರೊಳಗೆ ಮಂದಿರದ ಆವರಣ ಪ್ರವೇಶಿಸಬೇಕು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಡಿರುವ ಕಾರ್ಡ್‌ ಇದ್ದರೆ ಮಾತ್ರ ದೇವಾಲಯಕ್ಕೆ ಎಂಟ್ರಿ ಸಿಗಲಿದೆ. ಎಂಟ್ರಿ ಕಾರ್ಡ್‌ನಲ್ಲಿರುವ ಕ್ಯೂಆರ್‌ ಕೋಡ್‌ ಹೊಂದಾಣಿಕೆ ಬಳಿಕವೇ ಮಂದಿರದೊಳಕ್ಕೆ ಪ್ರವೇಶ ಪಡೆಯಬಹುದಾಗಿದೆ.

  • Published On - Jan 22,2024 6:48 AM

    Follow us
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
    ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ