Ram Mandir Inauguration: ಜನವರಿ 22ನ್ನು ಅಯೋಧ್ಯೆ ರಾಮ ಮಂದಿರ ದಿನವನ್ನಾಗಿ ಘೋಷಿಸಿದ ಕೆನಡಾ
ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಬಗ್ಗೆ ಇಡೀ ಭಾರತದ ಜನರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆದರೂ ಜಗತ್ತಿನಾದ್ಯಂತ ರಾಮನ ಪ್ರತಿಧ್ವನಿ ಮೊಳಗಲಿದೆ. ಕೆನಡಾ ಜನವರಿ 22 ರಂದು ಅಯೋಧ್ಯೆ ರಾಮ ದಿನ ಎಂದು ಘೋಷಿಸಲು ನಿರ್ಧರಿಸಿದೆ.
ರಾಮಮಂದಿರ(Ram Mandir) ಪ್ರಾಣ ಪ್ರತಿಷ್ಠಾ ಸಮಾರಂಭದ ಬಗ್ಗೆ ಇಡೀ ಭಾರತದ ಜನರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆದರೂ ಜಗತ್ತಿನಾದ್ಯಂತ ರಾಮನ ಪ್ರತಿಧ್ವನಿ ಮೊಳಗಲಿದೆ. ಕೆನಡಾ ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ದಿನ ಎಂದು ಘೋಷಿಸಲು ನಿರ್ಧರಿಸಿದೆ.
ಕೆನಡಾದ ಮೂರು ಪುರಸಭೆಗಳು ಜನವರಿ 22 ಅನ್ನು ಅಯೋಧ್ಯೆ ರಾಮಮಂದಿರ ದಿನ ಎಂದು ಘೋಷಿಸಿವೆ. ಹಿಂದೂ ಕೆನಡಿಯನ್ ಫೌಂಡೇಶನ್ (ಎಚ್‌ಸಿಎಫ್) ಸಂಸ್ಥಾಪಕ ಮತ್ತು ಅಧ್ಯಕ್ಷ ಅರುಣೇಶ್ ಗಿರಿ ಮಾತನಾಡಿ, ವಿಶ್ವ ಜೈನ್ ಸಂಘಟನೆ ಕೆನಡಾ (ವಿಜೆಎಸ್‌ಸಿ) ಸಹಯೋಗದೊಂದಿಗೆ ಎಚ್‌ಸಿಎಫ್ ಜನವರಿ 22, 2024 ರಂದು ಮೂರು ನಗರಗಳಾದ ಬ್ರಾಂಪ್ಟನ್, ಓಕ್‌ವಿಲ್ಲೆ ಮತ್ತು ಬ್ರಾಂಟ್‌ಫೋರ್ಡ್‌ನಲ್ಲಿ ಅಯೋಧ್ಯೆ ರಾಮಮಂದಿರ ದಿನವನ್ನು ಯಶಸ್ವಿಯಾಗಿ ಘೋಷಿಸಿದೆ.
ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರು ತಮ್ಮ ಪ್ರಕಟಣೆಯಲ್ಲಿ ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಬಗ್ಗೆ ಮಾತನಾಡಿದ್ದಾರೆ. ಕೆನಡಾದ ಹೊರತಾಗಿ, ಮಾರಿಷಸ್ ಕೂಡ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ದಿನದಂದು ತನ್ನ ಯೋಜನೆಗಳನ್ನು ಘೋಷಿಸಿದೆ.
ಮತ್ತಷ್ಟು ಓದಿ: ಜಪಾನ್ನಲ್ಲಿ ರಾಮಭಕ್ತಿ ಮೆರೆದ ಕನ್ನಡಿಗರು, ಸೊಗಸಾದ ರಾಮಾಯಣ ರೂಪಕ
ಮಾರಿಷಸ್‌ನಲ್ಲಿ ಈ ದಿನವನ್ನು ಸ್ಮರಣೀಯವಾಗಿಸಲು, ದೀಪಗಳನ್ನು ಬೆಳಗಿಸಲಾಗುತ್ತದೆ. ಅಷ್ಟೇ ಅಲ್ಲ ಅಲ್ಲಿ ರಾಮಾಯಣ ಪಾರಾಯಣವೂ ನಡೆಯಲಿದೆ.
ಪ್ರಾಣ ಪ್ರತಿಷ್ಠೆಯ ದಿನದಂದು ಮಾರಿಷಸ್‌ನ ಎಲ್ಲಾ ದೇವಾಲಯಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ ಮತ್ತು ರಾಮಾಯಣವನ್ನು ಪಠಿಸಲಾಗುವುದು. ಮಾರಿಷಸ್ ಸರ್ಕಾರವು ಸರ್ಕಾರಿ ಹಿಂದೂ ನೌಕರರಿಗೆ ಜನವರಿ 22 ರಂದು ರಜೆ ನೀಡಲು ನಿರ್ಧರಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:12 am, Mon, 22 January 24