‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ..’; ಅಯೋಧ್ಯೆಯಿಂದ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ
ಪ್ರಾಣ ಪ್ರತಿಷ್ಠಾಪನೆಗೂ ಮೊದಲು ಅಲ್ಲಿರುವ ಹಲವು ದೇವಾಲಯಕ್ಕೆ ರಿಷಬ್ ಭೇಟಿ ನೀಡಿದ್ದಾರೆ. ‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ.. ಹನುಮನ ದರ್ಶನ’ ಎಂದು ಅವರು ಬರೆದುಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಹಲವು ಸೆಲೆಬ್ರಿಟಿಗಳು ಈಗಾಗಲೇ ಅಯೋಧ್ಯೆ ತಲುಪಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan), ಕನ್ನಡದ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮೊದಲದಾದವರು ಅಯೋಧ್ಯೆ ತಲುಪಿದ್ದಾರೆ. ರಿಷಬ್ ಶೆಟ್ಟಿ ಕೂಡ ಈ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ತೆರಳಿದ್ದಾರೆ. ಈ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಾಣ ಪ್ರತಿಷ್ಠಾಪನೆಗೂ ಮೊದಲು ಅಲ್ಲಿರುವ ಹಲವು ದೇವಾಲಯಕ್ಕೆ ರಿಷಬ್ ಭೇಟಿ ನೀಡಿದ್ದಾರೆ. ‘ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ.. ಹನುಮನ ದರ್ಶನ’ ಎಂದು ಅವರು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಜೊತೆ ಅವರ ಪತ್ನಿಯೂ ಅಯೋಧ್ಯೆಗೆ ತೆರಳಿದ್ದಾರೆ. ರಿಷಬ್ ಅವರು ಹೆಗಲಿಗೆ ಶಾಲು ಹೊದ್ದಿದ್ದಾರೆ. ಹಣೆಗೆ ಅರಿಶಿಣದ ಪಟ್ಟಿ ಬಳಿದುಕೊಂಡಿದ್ದಾರೆ.
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮಕ್ಕೂ ಮುನ್ನ, ಹನುಮನ ದರ್ಶನ..
Blessed 🙏🏼#JaiShreeRam #Ayodhya #RamMandir #RamMandirInauguration #SiyaRam #AyodhyaRamMandir pic.twitter.com/FNx9tpOuBt
— Rishab Shetty (@shetty_rishab) January 21, 2024
ಆಮಂತ್ರಣ ಪತ್ರದ ಬಗ್ಗೆ
ಇತ್ತೀಚೆಗೆ ರಿಷಬ್ ಶೆಟ್ಟಿ ಅವರಿಗೆ ಪ್ರಾಣ ಪ್ರತಿಷ್ಠಾಪನೆಯ ಆಮಂತ್ರಣಪತ್ರ ತಲುಪಿತ್ತು. ಅಯೋಧ್ಯೆಯಿಂದ ಬಂದ ಆಹ್ವಾನ ಪತ್ರಿಕೆಯನ್ನು ಅವರು ಪಡೆದಿದ್ದರು. ಈ ಫೋಟೋನ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
I am deeply grateful for this opportunity, as my heart overflows with gratitude. ✨
ಈ ಅವಕಾಶಕ್ಕೆ ನಾನು ಸದಾ ಚಿರಋಣಿ..
ಜೈ ಶ್ರೀ ರಾಮ್ 🚩| Jai Shree Ram 🕉️ pic.twitter.com/4kfhsiZNVs
— Rishab Shetty (@shetty_rishab) January 19, 2024
ಇದನ್ನೂ ಓದಿ: ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಪ್ರಧಾನಿ ಮೋದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಹಾರೈಕೆ
‘ಶ್ರೀರಾಮ ಜಯ ರಾಮ ಜಯ ಜಯ ರಾಮ. ನಮ್ಮ ಮನೆಗಳಲ್ಲಿ ಬಾಲ್ಯದಿಂದಲೂ ರಾಮನಾಮವ ಭಜಿಸುತ್ತಾ, ಆದರ್ಶಪ್ರಾಯ ಜೀವನದ ಕಥೆಗಳನ್ನು ಗುರು ಹಿರಿಯರಿಂದ ಕೇಳುತ್ತಾ ಬೆಳೆದವರು ನಾವು. ಆ ಶ್ರೀರಾಮ ತಾನು ಮಗುವಾಗಿ ಆಡಿದ, ಪ್ರಭುವಾಗಿ ಆಳಿದ ಅಯೋಧ್ಯೆಗೆ ಬರುವಂತೆ ಆಮಂತ್ರಣ ಕಳುಹಿಸಿದ್ದಾನೆ. ಇದು ನನ್ನ ಪೂರ್ವ ಜನ್ಮದ ಪುಣ್ಯ. ಅಯೋಧ್ಯೆಗೆ ಜಯವಾಗಲಿ, ಶ್ರೀರಾಮನಿಗೆ ಜಯವಾಗಲಿ’ ಎಂದು ರಿಷಬ್ ಶೆಟ್ಟಿ ಪೋಸ್ಟ್ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 am, Mon, 22 January 24