ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವೇ ಧ್ರುವ ಮಕ್ಕಳಿಗೆ ನಾಮಕರಣ

ರಾಮ ಮಂದಿರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದ ದಿನವೇ ಮಕ್ಕಳಿಗೆ ನಾಮಕರಣ ಮಾಡಲು ಅವರು ಮುಂದಾಗಿದ್ದಾರೆ. ಚಿರು ಸರ್ಜಾ ಸಮಾಧಿ ಇರೋ ನೆಲಗುಳಿಯಲ್ಲಿ ಮಕ್ಕಳ ನಾಮಕರಣ ಶಾಸ್ತ್ರ ನಡೆಯಲಿದೆ.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವೇ ಧ್ರುವ ಮಕ್ಕಳಿಗೆ ನಾಮಕರಣ
ಪ್ರೇರಣಾ-ಧ್ರುವಾ
Follow us
Malatesh Jaggin
| Updated By: ರಾಜೇಶ್ ದುಗ್ಗುಮನೆ

Updated on:Jan 22, 2024 | 9:41 AM

ಇಂದು (ಜನವರಿ 22) ಅಯೋಧ್ಯೆಯ ರಾಮ ಮಂದಿರದಲ್ಲಿ (Rama Mandir) ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಚಿತ್ರರಂಗದವರು, ಕ್ರಿಕೆಟ್ ದಿಗ್ಗಜರು, ರಾಜಕಾರಣಿಗಳು ಸೇರಿ ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಈ ವಿಶೇಷ ದಿನದಂದು ಧ್ರುವ ಸರ್ಜಾ ಅವರು ತಮ್ಮ ಮಕ್ಕಳಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ. ರಾಮಾಯಣ ಮಹಾಭಾರತದಲ್ಲಿ ಬರುವ ಪಾತ್ರಗಳ ಹೆಸರನ್ನೇ ಅವರು ಇಡಲಿದ್ದಾರೆ ಎಂದು ತಿಳಿದು ಬಂದಿದೆ.

ಧ್ರುವ ಸರ್ಜಾ ಅವರು ಹನುಮನ ಭಕ್ತರು. ಆಂಜನೇಯನ ಕಂಡರೆ ಅವರಿಗೆ ಅಪಾರ ಭಕ್ತಿ. ರಾಮನ ಬಂಟ ಎಂಬ ಖ್ಯಾತಿ ಆಂಜನೇಯನಿಗೆ ಇದೆ. ಈ ಕಾರಣದಿಂದಲೇ ರಾಮ ಮಂದಿರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದ ದಿನವೇ ಮಕ್ಕಳಿಗೆ ನಾಮಕರಣ ಮಾಡಲು ಅವರು ಮುಂದಾಗಿದ್ದಾರೆ. ಚಿರು ಸರ್ಜಾ ಸಮಾಧಿ ಇರೋ ನೆಲಗುಳಿಯಲ್ಲಿ ಮಕ್ಕಳ ನಾಮಕರಣ ಶಾಸ್ತ್ರ ನಡೆಯಲಿದೆ.

ಧ್ರುವ ಸರ್ಜಾ ಹಾಗೂ ಪ್ರೇರಣ ದಂಪತಿಗೆ ಈಗ ಇಬ್ಬರು ಮಕ್ಕಳು. ಮಗಳು ಜನಿಸಿ ಸಾಕಷ್ಟು ಸಮಯ ಕಳೆದಿದೆ. ಆದಾಗ್ಯೂ ಅವರು ಮಗಳಿಗೆ ಹೆಸರನ್ನು ಇಟ್ಟಿರಲಿಲ್ಲ. ಈಗ ಒಂದೇ ದಿನ ಇವರ ನಾಮಕರಣ ನಡೆಯುತ್ತಿರುವುದು ವಿಶೇಷ. 2022ರ ಅಕ್ಟೋಬರ್2 ರಂದು ಮಗಳ ಜನನ ಆಗಿತ್ತು. 2023ರ ಸೆಪ್ಟೆಂಬರ್ ನಲ್ಲಿ ಗಂಡು ಮಗು ಜನಿಸಿತ್ತು. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬ ಭಾಗಿ ಆಗಲಿದೆ. ರಾಮಾಯಣ ಹಾಗು ಮಹಾಭಾರತದಲ್ಲಿನ ಹೆಸರನ್ನ ಮಕ್ಕಳಿಗೆ ಇಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಹನುಮಾನ್​’ ಚಿತ್ರಕ್ಕೆ ಸಿಕ್ತು ಧ್ರುವ ಸರ್ಜಾ ಬೆಂಬಲ; ತೇಜ ಸಜ್ಜಾಗೆ ‘ಆ್ಯಕ್ಷನ್​ ಪ್ರಿನ್ಸ್​’ ಶುಭ ಹಾರೈಕೆ

ಧ್ರುವ ಸರ್ಜಾ ಅವರ ನಟನೆಯ ‘ಮಾರ್ಟಿನ್’ ಸಿನಿಮಾ ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ಕೆಲಸ ಪೂರ್ಣಗೊಂಡಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ‘ಕೆಡಿ’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:27 am, Mon, 22 January 24