‘ಕಾಟೇರ’ ಕತೆ ನಾನು ಮಾಡಿಸಿದ್ದೆ, ಯಾರಿಗೆ ಏನು ಧಕ್ಕಬೇಕೆಂಬುದು ನಿರ್ಧರಿತ: ಉಮಾಪತಿ ಶ್ರೀನಿವಾಸ್

Kaatera: ದರ್ಶನ್​ ನಟನೆಯ ‘ಕಾಟೇರ’ ಸಿನಿಮಾ ಸೂಪರ್ ಹಿಟ್ ಆಗಿದೆ. ರಾಕ್​ಲೈನ್ ವೆಂಕಟೇಶ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆದರೆ ಈ ಸಿನಿಮಾವನ್ನು ತಮ್ಮ ಬ್ಯಾನರ್​ಗಾಗಿ ತಾವು ಬರೆಸಿಕೊಂಡಿದ್ದುದಾಗಿ ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ.

‘ಕಾಟೇರ’ ಕತೆ ನಾನು ಮಾಡಿಸಿದ್ದೆ, ಯಾರಿಗೆ ಏನು ಧಕ್ಕಬೇಕೆಂಬುದು ನಿರ್ಧರಿತ: ಉಮಾಪತಿ ಶ್ರೀನಿವಾಸ್
Follow us
ಮಂಜುನಾಥ ಸಿ.
|

Updated on:Jan 21, 2024 | 6:02 PM

ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ದೊಡ್ಡ ಹಿಟ್ ಆಗಿದೆ. ದರ್ಶನ್​ರ ಸ್ಟಾರ್​ಡಮ್​ ಮಾತ್ರವೇ ಅಲ್ಲದೆ ಸಿನಿಮಾದಲ್ಲಿರುವ ಕಂಟೆಂಟ್​ನಿಂದಾಗಿ ಈ ಸಿನಿಮಾ ಗೆದ್ದಿದೆ ಎನ್ನಲಾಗುತ್ತಿದೆ. ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಕಲೆಕ್ಷನ್ 200 ಕೋಟಿಗೂ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಇದರ ನಡುವೆ ಚಿತ್ರರಂಗದ ಮತ್ತೊಬ್ಬ ಯಶಸ್ವಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ‘ಕಾಟೇರ’ ಸಿನಿಮಾದ ಕತೆ ತಮ್ಮ ನಿರ್ಮಾಣ ಸಂಸ್ಥೆಗಾಗಿ ತಾವು ಮಾಡಿಸಿದ್ದಾಗಿ ಹೇಳಿದ್ದಾರೆ.

ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ‘ಉಪಾಧ್ಯಕ್ಷ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾ ಕುರಿತಾಗಿ ನೀಡಿದ ಸಂದರ್ಶನದಲ್ಲಿ ‘ಕಾಟೇರ’ ಸಿನಿಮಾದ ಯಶಸ್ಸಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ‘ಇಂದು ಸಿನಿಮಾ ಮಾಡುವುದು ಸುಲಭವಿಲ್ಲ. ಸಿನಿಮಾದ ಹಲವು ವಿಭಾಗಗಳಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ‘ಕಾಟೇರ’ ಸಿನಿಮಾ ಈ ಮಟ್ಟದ ಯಶಸ್ಸಾಗಿದೆ ಅವರೆಲ್ಲರ ಶ್ರಮ ಕಾರಣ. ನಿರ್ದೇಶಕರು ಚೆನ್ನಾಗಿ ಕೆಲಸ ಮಾಡಿದ್ದಾರೆ, ಜಡೇಶ್ ಒಳ್ಳೆ ಕತೆ ಮಾಡಿದ್ದಾರೆ. ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ದರ್ಶನ್ ಬಹಳ ಚೆನ್ನಾಗಿ ನಟಿಸಿದ್ದಾರೆಂದು ಎಲ್ಲರೂ ಹೇಳುತ್ತಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ:ಅಳಿದು ಉಳಿದವರ ಕಥೆ ಹೇಳಲು ಬಂದ ‘ಕಾಟೇರ’ ಕಥೆಗಾರ; ದುನಿಯಾ ವಿಜಯ್ ಜೊತೆ ಹೊಸ ಸಿನಿಮಾ

‘ಕಾಟೇರ’ ಸಿನಿಮಾದ ಕತೆಯೊಟ್ಟಿಗೆ ನನಗೆ ಬಂಧವಿದೆ. ಆ ಕತೆ ನಮ್ಮ ಬ್ಯಾನರ್​ಗಾಗಿ ನಾನು ಮಾಡಿಸಿದ್ದೆ. ಕಾರಣಾಂತರಗಳಿಂದ ಆಗಲಿಲ್ಲ, ಇರಲಿ ತೊಂದರೆ ಇಲ್ಲ, ಸರಸ್ವತಿ ಯಾರೊಬ್ಬರ ಆಸ್ತಿಯಲ್ಲ, ಯಾರಿಗೆ ಏನು ಧಕ್ಕಬೇಕು ಎನ್ನುವುದು ಪೂರ್ವ ನಿರ್ಧರಿತ, ಅದೇ ಅವರಿಗೆ ಧಕ್ಕುತ್ತದೆ. ಬಹಳ ದಿನಗಳ ನಂತರ ಎಲ್ಲರೂ ಚಿತ್ರಮಂದಿರಕ್ಕೆ ಬಂದು ‘ಕಾಟೇರ’ ಸಿನಿಮಾ ನೋಡಿದರು. ಬರೀ ಅಭಿಮಾನಿಗಳು ಮಾತ್ರವೇ ಅಲ್ಲ, ಬೇರೆ ನಟರ ಅಭಿಮಾನಿಗಳು ಸಹ ಬಂದು ‘ಕಾಟೇರ’ ಸಿನಿಮಾ ನೋಡಿದರು. ನನಗೆ ಖುಷಿ ಏನೆಂದರೆ ನನ್ನ ಅಭಿರುಚಿ ಯಶಸ್ವಿ ಆಯಿತೆಂಬ ಖುಷಿ ಇದೆ. ನನ್ನ ಜಡ್ಜ್​ಮೆಂಟ್ ರಾಂಗ್ ಆಗಿಲ್ಲ ಎಂಬ ಖುಷಿ ಇದೆ’ ಎಂದಿದ್ದಾರೆ.

ಸಿನಿಮಾಗಳ ಸಕ್ಸಸ್ ರೇಟ್​ ಬಗ್ಗೆ ಮಾತನಾಡುತ್ತಾ, ‘ಇದು ಒಳ್ಳೆಯ ಸಿನಿಮಾ, ಇದು ಕೆಟ್ಟ ಸಿನಿಮಾ ಎಂದು ವ್ಯತ್ಯಾಸ ಮಾಡಲಾಗದು. ಪ್ರಾರಂಭದಲ್ಲಿ ಎಲ್ಲವೂ ಒಳ್ಳೆಯ ಸಿನಿಮಾಗಳೇ ಆದರೆ ಆ ಸಿನಿಮಾವನ್ನು ಸರಿಯಾಗಿ ಎಕ್ಸಿಕ್ಯೂಟ್ ಮಾಡುವುದರಲ್ಲಿ ಹಲವರು ಎಡವುತ್ತಾರೆ. ಮೈಮರೆತು ತಪ್ಪು ಮಾಡ್ತಾರೆ, ಪಾತ್ರಗಳಿಗೆ ಎಲಿವೇಷನ್ ತೆಗೆದುಕೊಳ್ಳುವುದು, ವಿನಾ ಕಾರಣ ಪಾತ್ರಗಳನ್ನು ಕೊಲ್ಲುವುದು ಇತ್ಯಾದಿಗಳಿಂದಾಗಿ ಸಿನಿಮಾ ಸೋಲುತ್ತದೆ ಎಂದಿರುವ ಉಮಾಪತಿ, ‘‘ಕಾಟೇರ’, ‘ಕಾಂತಾರ’ ಕರ್ನಾಟಕದ ಹೆಮ್ಮೆಯನ್ನು ಮೇಲಕ್ಕೆತ್ತಿವೆ’ ಎಂದಿದ್ದಾರೆ.

ದರ್ಶನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ರಾಬರ್ಟ್’ ಅನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿದ್ದರು. ಮತ್ತೊಂದು ಸಿನಿಮಾ ಇವರಿಬ್ಬರ ಕಾಂಬಿನೇಷನ್​ನಲ್ಲಿ ಬರುವುದಕ್ಕಿತ್ತು. ಆದರೆ ಅಷ್ಟರಲ್ಲಿ ಈ ಇಬ್ಬರ ಸಂಬಂಧದಲ್ಲಿ ಬಿರುಕುಂಟಾಯ್ತು. ‘ಕಾಟೇರ’ ಸಿನಿಮಾದ ಕತೆ ಉಮಾಪತಿ ಶ್ರೀನಿವಾಸ್ ಕೈತಪ್ಪಲು ಆ ಬಿರುಕೇ ಕಾರಣವಾ ಎಂಬ ಅನುಮಾನವೂ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Sun, 21 January 24

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ