ವೇದಿಕೆಯಲ್ಲೇ ಮಾಜಿ ಬಿಜೆಪಿ ಶಾಸಕನಿಗೆ ಪಕ್ಷದ ಕಾರ್ಯಕರ್ತರಿಂದ ಥಳಿತ

ಮಧ್ಯಪ್ರದೇಶದ ಉಜ್ಜಯಿನಿಯ ಮಾಜಿ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಚೌಹಾಣ್ ಅವರಿಗೆ ವೇದಿಕೆಯಲ್ಲಿಯೇ ಪಕ್ಷದ ಕಾರ್ಯಕರ್ತರು ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ವೇದಿಕೆಯಲ್ಲೇ ಮಾಜಿ ಬಿಜೆಪಿ ಶಾಸಕನಿಗೆ ಪಕ್ಷದ ಕಾರ್ಯಕರ್ತರಿಂದ ಥಳಿತ
ಮಾಜಿ ಬಿಜೆಪಿ ಶಾಸಕನಿಗೆ ಪಕ್ಷದ ಕಾರ್ಯಕರ್ತರಿಂದ ಥಳಿತ

Updated on: Nov 29, 2024 | 9:44 PM

ಉಜ್ಜಯಿನಿ: ಬಿಜೆಪಿಯ ಮಾಜಿ ಶಾಸಕ ಮತ್ತು ರಾಜ್ಯ ಉಪಾಧ್ಯಕ್ಷ ಬಹದ್ದೂರ್ ಸಿಂಗ್ ಚೌಹಾಣ್ ಅವರು ಉಜ್ಜಯಿನಿಯ ಮಹಿದ್‌ಪುರದಲ್ಲಿ ವೇದಿಕೆಗೆ ಬಲವಂತವಾಗಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಅವರನ್ನು ಥಳಿಸಿದ್ದಾರೆ. ಕೆಲವು ಆಂತರಿಕ ವಿವಾದಗಳಿಂದಾಗಿ ಮಹಿದ್‌ಪುರದಲ್ಲಿ ಬಿಜೆಪಿಯಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಇದೇ ಕಾರಣದಿಂದ ಉಜ್ಜಯಿನಿ ಉಸ್ತುವಾರಿ ಸಚಿವ ಗೌತಮ್ ತೆತ್ವಾಲ್ ಮತ್ತು ಸಂಸದ ಅನಿಲ್ ಫಿರೋಜಿಯಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಬಹದ್ದೂರ್ ಸಿಂಗ್ ಚೌಹಾಣ್ ಅವರನ್ನು ಆಹ್ವಾನಿಸಿರಲಿಲ್ಲ.

ಮಾಜಿ ಶಾಸಕ ಬಹದ್ದೂರ್ ಸಿಂಗ್ ಚೌಹಾಣ್ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದರು. ಅವರು ಬಲವಂತವಾಗಿ ವೇದಿಕೆಗೆ ಹತ್ತಿದರು. ಇದು ಅವರ ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು.

ಇದನ್ನೂ ಓದಿ: ಪ್ರಧಾನಿ ಮೋದಿ ಹಿಂದೆ ಮಹಿಳಾ ಎಸ್‌ಪಿಜಿ ಕಮಾಂಡೋ ಇರುವ ಫೋಟೋ ವೈರಲ್; ಅಸಲಿ ಸಂಗತಿ ಇಲ್ಲಿದೆ

ಈ ಘರ್ಷಣೆಯನ್ನು ಸೆರೆಹಿಡಿದಿರುವ ವಿಡಿಯೋ ಮೂಲಕ ಘಟನೆ ಮುನ್ನೆಲೆಗೆ ಬಂದಿದೆ. ಶಾಸಕ ಚೌಹಾಣ್‌ ಅವರನ್ನು ಸುತ್ತುವರಿದ ಜನರು ವಾಗ್ವಾದಕ್ಕಿಳಿದಿರುವುದನ್ನು ವೀಡಿಯೊ ತೋರಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us