ರೂಪಾಂತರಿ ಕೊರೊನಾ ವೈರಸ್ ದಾಳಿಗೆ ಇಂಗ್ಲೆಂಡ್ ತತ್ತರಿಸಿ ಹೋಗಿದೆ. ಹರಡುತ್ತಿರುವ ವೇಗ ಹೆಚ್ಚುತ್ತಿದ್ದು ಇದನ್ನು ತಡೆಯಲು ಬ್ರಿಟನ್ನಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಇಂಗ್ಲೆಂಡ್‌ನಲ್ಲಿ ಸತತ 7ನೇ ದಿನವೂ 50,000ಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆಯಾಗಿದೆ. ಹಾಗೂ ಲಂಡನ್‌ನಲ್ಲಿ ಕೊವಿಡ್ ಟೆಸ್ಟ್ ಪಾಸಿಟಿವ್ ರೇಟ್ ಶೇ. 28ರಷ್ಟಿದೆ.
ಶಾಲೆಗಳನ್ನು ತೆರೆದು ಎಡವಟ್ಟು ಮಾಡಿಕೊಂಡಿತಾ ಇಂಗ್ಲೆಂಡ್?
ರೂಪಾಂತರಿ ಕೊರೊನಾ ಇಂಗ್ಲೆಂಡ್‌ನಲ್ಲಿ ತನ್ನ ಅಬ್ಬರ ಹೆಚ್ಚಿಸಿದೆ. ಇದರ ಆರ್ಭಟಕ್ಕೆ ಬ್ರಿಟನ್ ಜನರು ಬೆಚ್ಚಿಬಿದ್ದಿದ್ದಾರೆ. ಇಂಗ್ಲೆಂಡ್ ರಾಜಧಾನಿ ಲಂಡನ್‌ನಲ್ಲಿ ಪ್ರತಿದಿನ ರೂಪಾಂತರಿ ಕೊರೊನಾದ ಅಬ್ಬರ ಹೆಚ್ಚುತ್ತಿದೆ. ಈ ಸೋಂಕಿಗೆ ಮಕ್ಕಳು ಹೆಚ್ಚಾಗಿ ತುತ್ತಾಗುತ್ತಿದ್ದಾರೆ.
ಆಸ್ಪತ್ರೆಯ ಮಕ್ಕಳ ವಾರ್ಡ್ಗಳು ಕೊರೊನಾ ಪೀಡಿತರಿಂದ ತುಂಬಿವೆ. ತಾತ್ಕಾಲಿಕ ಆಸ್ಪತ್ರೆಗಳನ್ನ ತೆರೆಯಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ. ರೂಪಾಂತರಿ ವೈರಸ್ ತಡೆಯಲು ಪ್ರಾಥಮಿಕ ಶಾಲೆಗಳನ್ನು ಕ್ಲೋಸ್ ಮಾಡಲಾಗಿದೆ. ಚೀನಾ ವೈರಸ್ಗಿಂತಾ ಶೇ.70ರಷ್ಟು ವೇಗದಲ್ಲಿ ರೂಪಾಂತರಿ ಕೊರೊನಾ ಹರಡುತ್ತಿದೆ.
ವೇಗ ಪಡೆದುಕೊಂಡ ರೂಪಾಂತರ ಕೊರೊನಾ: ಬ್ರಿಟನ್ನಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸಿದ ಪ್ರಧಾನಿ ಬೋರಿಸ್ ಜಾನ್ಸನ್
Published On - 9:57 am, Tue, 5 January 21