ಮುಂಬೈ ಡ್ರಗ್ಸ್ ಮಾಫಿಯಾ ಕೇಸ್: ನಟಿಯೊಬ್ಬರನ್ನ ಬಂಧಿಸಿದ NCB
ಕೆಲತಿಂಗಳಿಂದ ಸಾಕಷ್ಟು ಸದ್ದು ಮಾಡಿ ತಣ್ಣಗಾಗಿದ್ದ ಡ್ರಗ್ಸ್ ಮಾಫಿಯಾ ಕೇಸ್ ಇದೀಗ ಮತ್ತೆ ಸುದ್ದಿಯಾಗ್ತ್ತಿದೆ. ಇದೀಗ ನಟಿಯೊಬ್ಬರು ಲಿಸ್ಟ್ಗೆ ಹೊಸದಾಗಿ ಸೇರ್ಪಡೆಯಾಗಿದ್ದು, ನಿನ್ನೆ ಮುಂಬೈನಲ್ಲಿ ಇಡೀ ದಿನ ವಿಚಾರಣೆ ನಡೆಸಿರುವ ಎನ್‌ಸಿಬಿ ಅಧಿಕಾರಿಗಳು ಆ ನಟಿಯನ್ನ ಅರೆಸ್ಟ್ ಮಾಡಿದ್ದಾರೆ. ಹಾಗಾದ್ರೆ ಯಾರು ಆ ನಟಿ..? ಅದರ ಡೀಟೇಲ್ಸ್ ಇಲ್ಲಿದೆ.
ದೆಹಲಿ: ಡ್ರಗ್ಸ್ ದಂಧೆ ಎಲ್ಲೆಲ್ಲಿ ಬೇರು ಬಿಟ್ಟಿದೆ ಅನ್ನೋದೇ ತನಿಖಾಧಿಕಾರಿಗಳಿಗೆ ತಿಳಿಯದಾಗಿದೆ. ಯಾಕೆಂದರೆ ಬಗೆದಷ್ಟು ಈ ಮಾಫಿಯಾ ಆಳಕ್ಕೆ ಹೋಗುತ್ತಿದೆ. ಒಬ್ಬೊಬ್ಬರೇ ಈ ದಂಧೆಯಲ್ಲಿ ಲಾಕ್ ಆಗ್ತಿದ್ದಾರೆ. ಹೀಗೆ ಮತ್ತೊಬ್ಬ ನಟಿ ಎನ್‌ಸಿಬಿ ಬಲೆಗೆ ಬಿದ್ದಿದ್ದು, ಇನ್ನಷ್ಟು ದಂಧೆಕೋರರಿಗೆ ಎನ್‌ಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಡ್ರಗ್ಸ್ ಕೇಸ್ ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಸಿನಿ ಜಗತ್ತನ್ನೇ ನಡುಗಿಸಿತ್ತು. ಈ ಕೇಸ್ನಲ್ಲಿ ಹೆಸರಾಂತ ನಟ, ನಟಿಯರು ಜೈಲು ಸೇರಿದ್ದಾರೆ. ಸ್ಯಾಂಡಲ್‌ವುಡ್ ನಟಿಯರು ಜೈಲೂಟ ಸವಿದಿದ್ದಾರೆ. ಇದೀಗ ಶ್ವೇತಾ ಕುಮಾರಿ ಎಂಬ ನಟಿಯನ್ನು ಡ್ರಗ್ಸ್ ಕೇಸ್ನಲ್ಲಿ ಅರೆಸ್ಟ್ ಮಾಡಲಾಗಿದೆ.
NCB ಬಲೆಗೆ ಮತ್ತೋರ್ವ ನಟಿ ಅಷ್ಟಕ್ಕೂ ನಾಲ್ಕೈದು ತಿಂಗಳಿಂದ NCB ಅಧಿಕಾರಿಗಳು ಮಾಯಾನಗರಿ ಮುಂಬೈನ ಗಲ್ಲಿ ಗಲ್ಲಿಗಳನ್ನೂ ಜಾಲಾಡಿ ಡ್ರಗ್ಸ್ ಜಾಲದಲ್ಲಿರುವ ಕಿರಾತಕರನ್ನ ಮಟ್ಟ ಹಾಕುತ್ತಿದ್ದಾರೆ. ಮುಂಬೈ ಪೆಡ್ಲರ್ ಕರೀಂ ಸಹಚರ ಆಗಿದ್ದ ಚಾಂದ್ ಶೇಖ್ ಎಂಬಾತನ ಬಂಧಿಸಿದ್ದ NCB ಅಧಿಕಾರಿಗಳು ಆತ ನೀಡಿದ ಮಾಹಿತಿ ಆಧಾರದ ಮೇಲೆ ನಟಿ ಶ್ವೇತಾ ಕುಮಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ನಟಿ ಶ್ವೇತಾ ಡ್ರಗ್ಸ್ ಪಡೆಯುತ್ತಿದ್ದರಲ್ಲದೆ, ಡ್ರಗ್ಸ್ ಮಾರಾಟದಲ್ಲೂ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಡ್ರಗ್ ಪೆಡ್ಲರ್ ಜೊತೆಗೆ ಸಂಪರ್ಕ ಸಹ ಹೊಂದಿದ್ದರೆನ್ನಲಾಗಿದೆ. ನಟಿಯ ಬಂಧನದ ಸಂದರ್ಭದಲ್ಲಿ 10 ಲಕ್ಷ ನಗದು, 10 ಗ್ರಾಂ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ನಟಿಯ ಮೊಬೈಲ್ ಅನ್ನು ಎನ್‌ಸಿಬಿ ವಶಪಡಿಸಿಕೊಂಡಿದ್ದು, ಮೊಬೈಲ್ ಕಾಲ್ ಡಿಟೇಲ್ಸ್, ಮೊಬೈಲ್ ನಂಬರ್ಸ್, ವಾಟ್ಸಾಪ್ ಚಾಟ್ ಜಾಲಾಡುತ್ತಿದ್ದಾರೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಒಟ್ನಲ್ಲಿ ಡ್ರಗ್ಸ್ ಜಾಲ ಬಗೆದಷ್ಟು ಆಳಕ್ಕೆ ಹಬ್ಬಿರುವುದು ನಟಿ ಶ್ವೇತಾ ಕುಮಾರಿ ಬಂಧನದಿಂದ ಸ್ಪಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ NCB ಲಿಸ್ಟ್ನಲ್ಲಿ ಯಾರಿದ್ದಾರೆ, ಇನ್ನೂ ಯಾಱರು ಈ ಬಲೆಯಲ್ಲಿ ಲಾಕ್ ಆಗಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.
Published On - 7:35 am, Tue, 5 January 21