ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ | 05-01-2021
LIVE NEWS & UPDATES
-
11 ಜನರಲ್ಲಿ ರೂಪಾಂತರಿ ಕೊರೊನಾ ದೃಢ
06:38 pm ಬ್ರಿಟನ್ನಿಂದ ಹಿಂದಿರುಗಿದ 11 ಜನರಲ್ಲಿ ರೂಪಾಂತರಿ ಕೊರೊನಾ ದೃಢಪಟ್ಟಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
-
ರೆಸ್ಟ್ ಮಾಡುವ ವಯಸ್ಸು ನನ್ನದಲ್ಲ ಎಂದ ಕೇಂದ್ರ ಸಚಿವ ಸದಾನಂದ ಗೌಡ
06:31 pm ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ ನೀಡಿದ್ದು, ನಾನು ಒಂದೆರಡು ದಿನಗಳ ಕಾಲ ಮಾತ್ರ ರೆಸ್ಟ್ ಮಾಡುತ್ತೇನೆ. ರೆಸ್ಟ್ ಮಾಡುವ ವಯಸ್ಸು ನನ್ನದಲ್ಲ. ಬಜೆಟ್ ಪೂರ್ವಭಾವಿ ಸಭೆಗಳಿದ್ದು, ಈ ಸಭೆಗಳಲ್ಲಿ ನಾನು ಭಾಗಹಿಸುತ್ತೇನೆ. ಈಗ ನನ್ನ ಆರೋಗ್ಯ ಸ್ಥಿತಿ ಸಹಜವಾಗಿದೆ ಎಂದು ಡಿವಿಎಸ್ ಹೇಳಿದ್ದಾರೆ.
-
ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ನಿಂದ ಆರಂಭ
06:25 pm ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 8 ರಿಂದ ಏಪ್ರೀಲ್ 8ರವರೆಗೆ ನಡೆಯಲಿದ್ದು, ಎರಡು ಸದನಗಳು ಕೊರೊನಾ ಸೋಂಕಿನ ಕಾರಣದಿಂದಾಗಿ ಕೇವಲ 4 ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸಲಿದೆ.
ನಾಳೆಯಿಂದ ಆರಂಭವಾಗಲಿದೆ ದೇಶ್ ಜಾಗ್ರಣ್ ಅಭಿಯಾನ
06:17 pm ನಾಳೆಯಿಂದ 2 ವಾರಗಳ ಕಾಲ ದೇಶ್ ಜಾಗ್ರಣ್ ಅಭಿಯಾನ ಪ್ರಾರಂಭವಾಗಲಿದೆ ಮತ್ತು ದೇಶದಾದ್ಯಂತ ಈ ಹಿನ್ನೆಲೆಯಲ್ಲಿ ದೆಹಲಿ ಚಲೋ ಪ್ರತಿಭಟನೆ ಮತ್ತಷ್ಟು ತೀವ್ರವಾಗಲಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್ ಹೇಳಿದ್ದಾರೆ.
From tomorrow, for 2 weeks, 'Desh Jagran Abhiyan' will be started & protests will be deepened throughout the country: Yogendra Yadav, Swaraj India https://t.co/OQAp5IJECS
— ANI (@ANI) January 5, 2021
ಈ ಬಾರಿ ಬರ್ತ್ ಡೇ ಸೆಲಬ್ರೇಶನ್ ಬೇಡ ಎಂದ ಯಶ್
06:14 pm ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಭಿಮಾನಕ್ಕೆ ಧನ್ಯವಾದ ಹೇಳುತ್ತಾ, ಈ ವರ್ಷ ಹುಟ್ಟುಹಬ್ಬದ ಸೆಲೆಬ್ರೆಶನ್ ಬೇಡ ಎಂದು ಅಭಿಮಾನಿಗಳಲ್ಲಿ ಯಶ್ ಮನವಿ ಮಾಡಿಕೊಂಡಿದ್ದಾರೆ. ಈ ಬಾರಿ ಯಶ್ ಹುಟ್ಟುಹಬ್ಬದ ಗಿಫ್ಟ್ ಆಗಿ ಕೆಜಿಎಫ್ 2 ಟೀಸರ್ ರಿಲೀಸ್ ಆಗಲಿದೆ.
ಜನರ ಜೀವ ಉಳಿಸುವುದು ನಮ್ಮ ಉದ್ದೇಶ: ಭಾರತ್ ಬಯೋಟಿಕ್ ಸಂಸ್ಥೆ ಅಧ್ಯಕ್ಷ ಕೃಷ್ಣಾ ಎಲ್ಲಾ ಮತ್ತು ಸೆರಮ್ ಸಂಸ್ಥೆ ಸಿಇಒ ಅದರ್ ಪೂನಾವಲ್ಲಾ
05:49 pm ಭಾರತದಲ್ಲಿ ಕೊರೊನಾ ಲಸಿಕೆ ಉತ್ಪಾದಿಸುತ್ತಿರುವ ಸೆರಮ್ ಮತ್ತು ಭಾರತ್ ಬಯೋಟಿಕ್ ಸಂಸ್ಥೆಗಳು ಜನರ ಒಳಿತಿಗಾಗಿ ಕಾರ್ಯನಿರ್ವಹಿಸಲಿವೆ.ಜನರ ಜೀವ ಉಳಿಸುವುದು ನಮ್ಮ ಉದ್ದೇಶ ಎಂದು ಭಾರತ್ ಬಯೋಟಿಕ್ ಸಂಸ್ಥೆ ಅಧ್ಯಕ್ಷ ಕೃಷ್ಣಾ ಎಲ್ಲಾ ಮತ್ತು ಸೆರಮ್ ಸಂಸ್ಥೆ ಸಿಇಒ ಅದರ್ ಪೂನಾವಲ್ಲಾ ಜಂಟಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಇಬ್ಬರೂ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
This should clarify any miscommunication. We are all united in the fight against this pandemic. https://t.co/oeII0YOXEH
— Adar Poonawalla (@adarpoonawalla) January 5, 2021
ಜನವರಿ 13 ರಿಂದ ಕೊರೊನಾ ವ್ಯಾಕ್ಸಿನ್ ನೀಡುವ ಸಾಧ್ಯತೆ: ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ. ರಾಜೇಶ್ ಭೂಷಣ್
05:36 pm ಜನವರಿ 13 ರಿಂದ ಕೊರೊನಾ ವ್ಯಾಕ್ಸಿನ್ ನೀಡುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮತ್ತು ಐಸಿಎಂಆರ್ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಇನ್ನು 10 ದಿನಗಳಲ್ಲಿ ಕೊರೊನಾ ವ್ಯಾಕ್ಸಿನ್ ಹಾಕುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ. ರಾಜೇಶ್ ಭೂಷಣ್ ಹೇಳಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೇಂದ್ರ ಸಚಿವ ಸದಾನಂದಗೌಡ
05:27 pm ಶುಗರ್ ಲೆವೆಲ್ ಕಡಿಮೆಯಾದ ಹಿನ್ನೆಲೆಯಲ್ಲಿ ಭಾನುವಾರ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ದಾಖಲಾಗಿದ್ದ, ಕೇಂದ್ರ ಸಚಿವ ಸದಾನಂದಗೌಡ ಡಿಸ್ಚಾರ್ಜ್ ಆಗಿದ್ದಾರೆ.
ದಕ್ಷಿಣ ಆಫ್ರಿಕಾದ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಕೆಲಸ ಮಾಡುವುದಿಲ್ಲ ಎಂದ ಬ್ರಿಟನ್ ವಿಜ್ಞಾನಿಗಳು
05: 14 pm ದಕ್ಷಿಣ ಆಫ್ರಿಕಾದ ಹೊಸ ಪ್ರಭೇದದ ಕೊವಿಡ್ ವಿರುದ್ಧ ಲಸಿಕೆ ಕೆಲಸ ಮಾಡುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ವೈರಸ್ ಬಗ್ಗೆ ಬ್ರಿಟನ್ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಬ್ರಿಟನ್‌ಗಿಂತ ದಕ್ಷಿಣ ಆಫ್ರಿಕಾದಲ್ಲಿ ವೈರಸ್ ವೇಗವಾಗಿ ಹರಡಲಿದ್ದು, ಲಸಿಕೆಗಳು ಹೊಸ ತಳಿ ಸೋಂಕಿನ ವಿರುದ್ಧ ವಿಫಲವಾಗಬಹುದು ಎಂದು ತಿಳಿಸಿದ್ದಾರೆ.
71ಕ್ಕೆ ಏರಿದ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ
05:05 pm ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ ಇಂದು 71ಕ್ಕೆ ಏರಿಕೆಯಾಗಿದೆ. ಒಂದೇ ದಿನ 33 ಜನರಿಗೆ ರೂಪಾಂತರಿ ಕೊರೊನಾ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಐಸಿಎಂಆರ್‌ನಿಂದ ಮಾಹಿತಿ ಲಭ್ಯವಾಗಿದ್ದು, ದೆಹಲಿ ನ್ಯಾಷನಲ್ ಮೀಡಿಯಾ ಸೆಂಟರ್‌ನ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಹೇಳಿದ್ದಾರೆ.
ಭಾರತದ ಬ್ರೀಟಿಷ್ ಹೈಕಮೀಷನರ್ ಆಗಿ ನೇಮಕಗೊಂಡ ಅಲೆಕ್ಸ್ ಎಲ್ಲಿಸ್
ಅಲೆಕ್ಸ್ ಎಲ್ಲಿಸ್ ಸಿಎಂಜಿಯನ್ನು ಭಾರತದ ಬ್ರೀಟಿಷ್ ಹೈಕಮೀಷನರ್ ಆಗಿ ನೇಮಕ ಮಾಡಲಾಗಿದೆ.
Alex Ellis CMG appointed as the British High Commissioner to India. (File photo) pic.twitter.com/sheYW69T5m
— ANI (@ANI) January 5, 2021
ಸರ್ಕಾರಿ ನೌಕರರ ವೇತನದಲ್ಲಿ ತಾರತಮ್ಯ: ಸಂಸದ ಶಶಿ ತರೂರ್ ಟ್ವೀಟ್
04:46 pm ವಿವಿಧ ಸರಕಾರಿ ನೌಕರರ ವೇತನದಲ್ಲಿನ ತಾರತಮ್ಯವನ್ನು ತೋರಿಸುವ ಸುತ್ತೋಲೆಯನ್ನು ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ಆ ಮೂಲಕ ಕೇರಳದ ಕಾಲೇಜು ಪ್ರಾಧ್ಯಾಪಕರೊಬ್ಬರು ನನಗೆ ಇದನ್ನು ಕಳಿಸಿದ್ದಾರೆ ಎಂದು ಹೇಳಿರುವ ತರೂರ್, ಕಸಗುಡಿಸುವ ನೌಕರರಿಗೆ ಒಳ್ಳೆಯ ವೇತನ ಸಿಗುತ್ತದೆ ಎಂದು ಶ್ಲಾಘಿಸುತ್ತೇವೆ. ಅದೇ ವೇಳೆ ಸುಮಾರು ವರ್ಷ ಓದಿ, ಪರಿಶ್ರಮದಿಂದ ಉನ್ನತ ಪದವಿ ಪಡೆದು ಅಸಿಸ್ಟೆಂಟ್ ಪ್ರೊಫೆಸರ್ ಆದವರಿಗೆ ಸಿಗುವುದು ಕಡಿಮೆ ವೇತನ ಎಂಬ ಒಕ್ಕಣೆಯೊಂದಿಗೆ ಯುಜಿಸಿ ಸುತ್ತೋಲೆಯನ್ನು ಟ್ವೀಟಿಸಿದ್ದಾರೆ.
A college professor in Kerala sent me this evidence of the financial worth of her educational qualifications: while we all applaud that sweepers are paid well, studying long & hard for the higher degrees required by an Assistant Professor earns her a lower salary! pic.twitter.com/mcJtlQxS5v
— Shashi Tharoor (@ShashiTharoor) January 3, 2021
ಭಾರತದ 2 ಕೊವಿಡ್ ಲಸಿಕೆಗಳಿಗೆ ಬ್ರೆಜಿಲ್‌ನಿಂದ ಬೇಡಿಕೆ
04:37 pm ಭಾರತದ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಎಂಬ 2 ಲಸಿಕೆಗಳಿಗೆ ಬ್ರೆಜಿಲ್‌ನಿಂದ ಬೇಡಿಕೆ ಬಂದಿದೆ. ಆದರೆ ಭಾರತದ ಈ 2 ಲಸಿಕೆಗಳನ್ನು ರಫ್ತು ಮಾಡುವುದಕ್ಕೆ ನಿರ್ಬಂಧವಿದೆ. ಹೀಗಾಗಿ ಕೊವಿಡ್ ಲಸಿಕೆ ಪಡೆಯುವುದಕ್ಕೆ ರಾಜತಾಂತ್ರಿಕ ಮಾತುಕತೆಗೆ ಮುಂದಾಗಿರುವ ಬ್ರೆಜಿಲ್ ಭಾರತವನ್ನು ಆ ಮೂಲಕ ಒಪ್ಪಿಸಲು ನಿರ್ಧಾರಿಸಿದೆ.
ಗಂಗೂಲಿ ಕಾಣಿಸಿಕೊಂಡಿದ್ದ ಜಾಹಿರಾತು ತಡೆಹಿಡಿದ ಅದಾನಿ ವಿಲ್ಮರ್ ಸಂಸ್ಥೆ
04:26 pm ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೃದಯಾಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಫಾರ್ಚೂನ್ ರೈಸ್ ಬ್ರಾನ್ ಕುಕ್ಕಿಂಗ್ ಆಯಿಲ್ ಹೆಸರಿನಡಿಯಲ್ಲಿದ್ದ ಅಡುಗೆ ಎಣ್ಣೆಯನ್ನು ತಡೆಹಿಡಿಯಲಾಗಿದೆ. ಉತ್ತಮ ಆರೋಗ್ಯಕ್ಕಾಗಿ ಮತ್ತು ಹೃದಯ ಸಂಬಂಧಿ ತೊಂದರೆಗಳನ್ನು ದೂರವಿಡಲು ಅದಾನಿ ಫಾರ್ಚೂನ್ ರೈಸ್ ಬ್ರಾನ್ ಕುಕ್ಕಿಂಗ್ ಆಯಿಲ್ ಬಳಸಿ ಎಂದು ಹೇಳಿದ ಗಂಗೂಲಿಗೇ ಹೃದಯಾಘಾತವಾಗಿದೆ. ಈ ಸಂಸ್ಥೆಯನ್ನು ನಾವು ನಂಬಬಹುದೇ ಎಂದು ಟೀಕೆ ವ್ಯಕ್ತವಾದ ಬೆನ್ನಲ್ಲೇ, ಅದಾನಿ ವಿಲ್ಮರ್ ಸಂಸ್ಥೆ ಸದರಿ ಜಾಹೀರಾತನ್ನು ತಡೆಹಿಡಿದಿದೆ.
ಮತ್ತೊಂದು ಪ್ರಕರಣದಲ್ಲೂ ಬಿಎಸ್‌ವೈಗೆ ಹಿನ್ನಡೆ
04:14 pm ಆಲಂ ಪಾಷಾ 2014ರಲ್ಲಿ ಮುರುಗೇಶ್ ನಿರಾಣಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೊರ್ಟ್ ವಿಚಾರಣೆ ನಡೆಸಿದೆ. ಮುರುಗೇಶ್ ನಿರಾಣಿ, ಬಿಎಸ್ವೈ ವಿರುದ್ಧ ಅಲಮ್ ಪಾಷಾ ಸಲ್ಲಿಸಿದ್ದ ಅರ್ಜಿ ಅಂಗೀಕರಿಸಿದ ಹೈಕೋರ್ಟ್ ಖಾಸಗಿ ದೂರು ಮುಂದುವರಿಸಲು ಆದೇಶಿಸಿದೆ. ಈ ನಿಟ್ಟಿನಲ್ಲಿ ಮತ್ತೊಂದು ಪ್ರಕರಣದಲ್ಲೂ ಬಿ.ಎಸ್. ಯಡಿಯೂರಪ್ಪಗೆ ಹಿನ್ನಡೆಯಾಗಿದೆ.
ಬ್ರಿಟನ್ ಪ್ರಧಾನಿ ಜಾನ್ಸನ್ ಬೋರಿಸ್ ಭಾರತಕ್ಕೆ ಭೇಟಿ ನೀಡುವುದು ಬಹುತೇಕ ಖಚಿತ
03:59 pm ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಬ್ರಿಟನ್ ಪ್ರಧಾನಿ ಜಾನ್ಸನ್ ಬೋರಿಸ್ರನ್ನು ಮುಖ್ಯ ಅಥಿತಿಯಾಗಿ ಆಹ್ವಾನಿಸಲಾಗಿದ್ದು, ಭಾರತದ ಆಮಂತ್ರಣವನ್ನು ಸ್ವೀಕರಿಸಿದ ಬೋರಿಸ್ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಲಿದ್ದಾರೆ. ಜಾನ್ಸನ್ ಬೋರಿಸ್ ಗಣರಾಜ್ಯೋತ್ಸವ ಸಮಾರಂಭಕ್ಕೆ ಬರುವುದು ಬಹುತೇಕ ಖಚಿತವಾಗಿದೆ.
ನಾಳೆ ಸಿಲಿಕಾನ್ ಸಿಟಿಯಲ್ಲಿ ರುಪ್ಸಾ ಬೃಹತ್ ಪ್ರತಿಭಟನೆ
03:37 pm ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ರುಪ್ಸಾ ಖಾಸಗಿ ಶಾಲಾ ಒಕ್ಕೂಟದಿಂದ ಪ್ರತಿಭಟನೆ ನಡೆಯಲಿದ್ದು, ಮೌರ್ಯ ಸರ್ಕಲ್‌ನಿಂದ ಫ್ರೀಡಂಪಾರ್ಕ್‌ವರೆಗೆ ಮೆರವಣಿಗೆ ನಡೆಯಲಿದೆ. ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಕರೆಕೊಟ್ಟಿರುವ ಈ ಪ್ರತಿಭಟನೆಗೆ ಸಿದ್ದಗಂಗಾ ಶ್ರೀಗಳು ಸಾಥ್ ನೀಡಿದ್ದು, ರಾಜ್ಯದ 30 ಜಿಲ್ಲೆಗಳಿಂದ ಆಗಮಿಸಲಿರುವ ಖಾಸಗಿ ಶಾಲಾ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಸಚಿವ ಸ್ಥಾನ ನೀಡಿದರೆ ಬೇಡ ಎನ್ನುವುದಕ್ಕೆ ನಾನು ಸನ್ಯಾಸಿಯಲ್ಲ: ಶಾಸಕ ಎನ್.ಮಹೇಶ್
03:21 pm ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಬಿಆರ್ಟಿ ಮಂತ್ರಿಗಿರಿ ಸಿಕ್ಕಿದರೆ ಬೇಡ ಎನ್ನುವುದಿಲ್ಲ ಸಂತೋಷದಿಂದ ಸ್ವೀಕರಿಸುತ್ತೇನೆ. ನನಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಮಾತು ಈಗಾಗಲೇ ಕೇಳಿ ಬರುತ್ತಿದ್ದು, ಮಂತ್ರಿಗಿರಿ ಪಡೆದು ಪಕ್ಷಕ್ಕೆ ಹೋಗಲು ಕಾರ್ಯಕರ್ತರು ಸಲಹೆ ನೀಡಿದ್ದಾರೆ. ಸಚಿವ ಸ್ಥಾನ ನೀಡಿದರೆ ಬೇಡ ಎನ್ನುವುದಕ್ಕೆ ನಾನು ಸನ್ಯಾಸಿಯಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬಿಳಿಗಿರಿ ರಂಗನಾಥ ಬೆಟ್ಟದಲ್ಲಿ ಹೇಳಿಕೆ ನೀಡಿದ್ದಾರೆ.
ಚೆನ್ನೈನಲ್ಲಿ ಭರ್ಜರಿ ಮಳೆ
03:13 pm ಚೆನ್ನೈನ ಬಹುತೇಕ ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
Tamil Nadu: Severe water-logging in parts of Chennai following heavy rainfall; visuals from T Nagar pic.twitter.com/54qVy3PU7q
— ANI (@ANI) January 5, 2021
ವಿಡಿಯೋ ಕಾನ್ಫರೆನ್ಸ್ ಮೂಲಕ ಟಾಯ್ಕಥಾನ್ 2021 ಬಿಡುಗಡೆ
03:10 pm ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಟಾಯ್ಕಥಾನ್ 2021 ಎಂಬ ಆಟಿಕೆ ಹ್ಯಾಕಥಾನ್ ಅನ್ನು ಬಿಡುಗಡೆ ಮಾಡಿದರು. ಆ ಮೂಲಕ ಶೇಕಡಾ 80 ರಷ್ಟು ಆಟಿಕೆಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದ್ದು, ಈ ಆಟಿಕೆಗಳನ್ನು ಇಲ್ಲಿಯೂ ತಯಾರಿಸುವ ಸಾಮರ್ಥ್ಯ ನಮಗೆ ಇದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹುದ್ದೆಗೆ ರಾಜಿನಾಮೆ ನೀಡಿದ ಪಶ್ಚಿಮ ಬಂಗಾಳದ ರಾಜ್ಯ ಸಚಿವ
02:49 pm ಪಶ್ಚಿಮ ಬಂಗಾಳದ ರಾಜ್ಯ ಸಚಿವ ಲಕ್ಷ್ಮಿ ರತನ್ ಶುಕ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಸೇವಾ ಇಲಾಖೆಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ಡಾ. ಮುರಳಿ ಹುಟ್ಟುಹಬ್ಬಕ್ಕೆ ಶುಭಕೋರಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
02:38 pm ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಬಿಜೆಪಿಯ ಹಿರಿಯ ಮುಖಂಡ ಡಾ. ಮುರಳಿ ಮನೋಹರ್ ಜೋಶಿಯನ್ನು ಭೇಟಿಯಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೋಶಿಯವರಿಗೆ ಜನ್ಮದಿನದ ಶುಭಕೋರಿದ್ದಾರೆ.
.
ಬೆಂಗಳೂರಿನಲ್ಲಿ ಮತ್ತೊಬ್ಬರಿಗೆ ರೂಪಾಂತರಿ ಕೊರೊನಾ ದೃಢ
02:22 pm ಶಿವಮೊಗ್ಗದ ಸೋಂಕಿತನ ಸಂಪರ್ಕದಲ್ಲಿದ್ದ ಸಿಂಗಸಂದ್ರದ ನಿವಾಸಿಗೆ ರೂಪಾಂತರಿ ಸೋಂಕು ದೃಢಪಟ್ಟಿದ್ದು, ಆ ಮೂಲಕ ಬೆಂಗಳೂರು ನಗರದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಆಸ್ಪತ್ರೆಯಿಂದ ನಾಳೆ ಡಿಸ್ಚಾರ್ಜ್ ಆಗಲಿರುವ ಸೌರವ್ ಗಂಗೂಲಿ
02:18 pm ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದು, ಪ್ರತಿದಿನವೂ ಮನೆಯಲ್ಲಿಯೇ ಅವರಿಗೆ ವೈದ್ಯಕೀಯ ಸೇವೆ ಒದಗಿಸಲಾಗುತ್ತದೆ. ಆದರೆ ಸೌರವ್ ಗಂಗೂಲಿಯ ಮುಂದಿನ ಹಂತದ ವೈದ್ಯಕೀಯ ಚಿಕಿತ್ಸೆಗಾಗಿ ಇನ್ನೂ 3-4 ವಾರಗಳು ಬೇಕು ಎಂದು ಕೊಲ್ಕತ್ತಾ ಆಸ್ಪತ್ರೆಯ ಎಮ್ಡಿ ಮತ್ತು ಸಿಇಒ ಡಾ. ರೂಪಾಲಿ ಬಾಸು ಹೇಳಿದ್ದಾರೆ.
ಇಂದು ಸಂಜೆ 4 ಗಂಟೆಗೆ ಕೇಂದ್ರದ ಆರೋಗ್ಯ ಇಲಾಖೆ ಮತ್ತು ಐಸಿಎಂಆರ್ ಜಂಟಿ ಪತ್ರಿಕಾಗೋಷ್ಠಿ
02:15 pm ಕೊರೊನಾ ವೈರಸ್ ವಿರುದ್ಧದ ಕ್ರಮ, ಲಸಿಕೆ ಹಾಗೂ ಈ ನಿಟ್ಟಿನಲ್ಲಿನ ಸಿದ್ಧತೆಗಳ ಬಗ್ಗೆ ಇಂದು ಸಂಜೆ 4 ಗಂಟೆಗೆ ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ಕೇಂದ್ರದ ಆರೋಗ್ಯ ಇಲಾಖೆ ಮತ್ತು ಐಸಿಎಂಆರ್ ಜಂಟಿ ಪತ್ರಿಕಾಗೋಷ್ಠಿ ನಡೆಯಲಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ.ರಾಜೇಶ್ ಭೂಷಣ್, ಐಸಿಎಂಆರ್ ಡಿ.ಜಿ ಬಲರಾಮ ಭಾರ್ಗವ ಭಾಗವಹಿಸಲಿದ್ದಾರೆ.
ಫೈಜರ್ ಲಸಿಕೆ ಪಡೆದ ಪೋರ್ಚುಗಲ್ನ ಆರೋಗ್ಯ ಕಾರ್ಯಕರ್ತೆ ಸಾವು
02:10 pm ಪೋರ್ಚುಗಲ್ನ ಆರೋಗ್ಯ ಕಾರ್ಯಕರ್ತೆ ಸೋನಿಯಾ ಆಕೆವೆಡೋ (41) ಫೈಜರ್ ಲಸಿಕೆಯನ್ನು ಪಡೆದ 48 ಗಂಟೆಗಳಲ್ಲಿ ಮೃತಪಟ್ಟಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈಕೆಗೆ ಯಾವುದೇ ಅಡ್ಡಪರಿಣಾಮವೂ ಇರಲಿಲ್ಲ. ಆದರೂ ಸಾವನ್ನಪ್ಪಿದ್ದಾರೆ ಎಂದು ಡೈಲಿ ಮೇಲ್ ತಿಳಿಸಿದೆ.
Portuguese health worker, 41, dies two days after getting the Pfizer covid vaccine https://t.co/3rbwycD0Qi
— Daily Mail Online (@MailOnline) January 4, 2021
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
01:44 pm ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಡಿನೋಟಿಫಿಕೇಷನ್ ಆರೋಪ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಜನಾಗೊಳಿಸಿದ್ದು, ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಆ ಮೂಲಕ ಲೋಕಾಯುಕ್ತ ಪೊಲೀಸರ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಬಿಎಸ್ವೈ ವಿರುದ್ಧ ತನಿಖೆ ಮುಂದುವರಿಸಲು ಸೂಚನೆ ನೀಡಿದೆ.
ಹಕ್ಕಿ ಜ್ವರ ಕಂಡುಬಂದ ಹಿನ್ನೆಲೆ ಮೈಸೂರಿನಲ್ಲಿ ಹೈ ಅಲರ್ಟ್ ಘೋಷಣೆ
01:35 pm ಮಹಾರಾಷ್ಟ್ರ ಹಾಗೂ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಂಡುಬಂದ ಹಿನ್ನೆಲೆ ವಲಸೆ ಹಕ್ಕಿಗಳ ಬಗ್ಗೆ ತೀವ್ರ ನಿಗಾವಹಿಸಲು ಮೈಸೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ರಂಗನತಿಟ್ಟು, ಮೃಗಾಲಯ ಹಾಗೂ ಕೆರೆಗಳಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ ಎಂದು ಮೈಸೂರಿನ ಡಿಸಿಎಫ್ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಆನ್ಲೈನ್ ಕ್ಲಾಸ್ ಬಂದ್: ಪ್ರತಿಭಟನೆಗೆ ಮಂದಾದ ಪೊಷಕರು
01:14 pm ಬೆಂಗಳೂರಿನ ಲಗ್ಗೇರೆಯ ನಾರಾಯಣ ಟೆಕ್ನೋ ಶಾಲೆಯಲ್ಲಿ ಶೇಖಡಾ 50ರಷ್ಟು ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಆನ್ಲೈನ್ ತರಗತಿ ಬಂದ್ ಮಾಡಿರುವ ಘಟನೆ ನಡೆದಿದ್ದು, ಈ ಹಿನ್ನಲೆಯಲ್ಲಿ ಶಾಲೆಯ ಮುಂದೆ ಪೊಷಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಮಣಿದ ಶಾಲೆಯ ಆಡಳಿತ ಮಂಡಳಿ ಆನ್ಲೈನ್ ಕ್ಲಾಸ್ ಆರಂಭ ಮಾಡಲು ಒಪ್ಪಿಗೆ ನೀಡಿದೆ.
ಡಿ.ಕೆ. ಶಿವಕುಮಾರ್ಗೆ ಪುತ್ರಿ ಮದುವೆಯ ಆಮಂತ್ರಣ ನೀಡಿದ ಜಮೀರ್ ಅಹಮದ್ ಖಾನ್
12:26 pm ಇಂದು ಬೆಳಿಗ್ಗೆ ಜಮೀರ್ ಅಹಮದ್ ಖಾನ್ ತನ್ನ ಪುತ್ರಿಯ ಮದುವೆಯ ಆಮಂತ್ರಣ ಪತ್ರಿಕೆಯನ್ನು ಡಿ.ಕೆ. ಶಿವಕುಮಾರ್ಗೆ ನೀಡಿ ಮದುವೆಗೆ ಆಹ್ವಾನಿಸಿದರು. ಅರಬ್ ಶೈಲಿಯ ವಿನ್ಯಾಸದ ಆಮಂತ್ರಣ ಕಿಟ್ನಲ್ಲಿ ಡ್ರೈಫ್ರೂಟ್ಸ್ ಹಾಗೂ ಚಾಕಲೆಟ್ ಇಟ್ಟಿದ್ದು ಈ ಉಡುಗೊರೆಯ ಜೊತೆ ಆಮಂತ್ರಣ ಪತ್ರಿಕೆ ನೀಡಿದ್ದು ವಿಶೇಷವಾಗಿತ್ತು.
ಈಗ ಭಾರತ ನಿಧಾನವಾಗಿಯಂತೂ ಅಭಿವೃದ್ಧಿಯಾಗುತ್ತಿಲ್ಲ: ಪ್ರಧಾನಿ ನರೇಂದ್ರ ಮೋದಿ
12:12 pm ಕಳೆದ ದಶಕಗಳಲ್ಲಿನ ಭಾರತದ ಪ್ರಗತಿಯ ಹಿಂದಿನ ಕಾರಣಗಳ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ , ಆದರೆ ಈಗ ಭಾರತ ನಿಧಾನವಾಗಿಯಂತೂ ಅಭಿವೃದ್ಧಿಯಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅದರ ವೇಗ ಮತ್ತು ವ್ಯಾಪ್ತಿ ಗಣನೀಯವಾಗಿ ಹೆಚ್ಚಾಗಿದೆ ಎಂದು ಪೈಪ್‌ಲೈನ್ ಲೋಕಾರ್ಪಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸೆಕ್ಯುರಿಟಿಯಿಂದಲೇ ಮನೆಗಳ್ಳತನ: Liveನಲ್ಲಿ ಕೃತ್ಯ ನೋಡಿದ ಮನೆ ಮಾಲಿಕ
11:58 am ನಗರದ ಕೆ.ಜಿ. ಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಸೆಕ್ಯುರಿಟಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಸಂಜಯ್ ಎಂಬಾತ ಮನೆಯ ಮಾಲೀಕ ದೀಪಕ್ ಎಂಬುವವರ ಮನೆಯಲ್ಲಿ ಕಳ್ಳತನ ಎಸಗಿದ್ದಾನೆ. ದೀಪಕ್ ಕುಟುಂಬ ಸಮೇತರಾಗಿ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜ. 1ರಂದು ತಿರುಪತಿಗೆ ತೆರಳಿದ್ದರು. ಮನೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಸೆಕ್ಯುರಿಟಿ ಸಂಜಯ್ಗೆ ತಿಳಿಸಿದ್ದು, ಈ ಸಮಯದಲ್ಲಿ ಸಂಜಯ್ ತನ್ನ ಮಿತ್ರರೊಡನೆ ಸುಮಾರು ₹49 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದಾನೆ. ಕಳ್ಳತನದ ದೃಶ್ಯವನ್ನು ಮನೆ ಮಾಲಿಕ ದೀಪಕ್ ಸಿಸಿ ಕ್ಯಾಮರಾದ ಮೂಲಕ ನೋಡಿದ್ದಾರೆ. ಸದ್ಯ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಶೋಧ ಕಾರ್ಯ ನಡೆಯುತ್ತಿದೆ.
ಅಭಿವೃದ್ಧಿ ವೇಗವನ್ನು ನಾವು ಹೆಚ್ಚಿಸಿಕೊಳ್ಳಬೇಕು: ಪ್ರಧಾನಿ ನರೇಂದ್ರ ಮೋದಿ
11:45 am 2 ರಾಜ್ಯಗಳ ಪ್ರಗತಿಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದ್ದು, ಆ ಮೂಲಕ ಮಂಗಳೂರು ಕೆಮಿಕಲ್ ಫರ್ಟಿಲೈಸರ್ ಕಂಪನಿಗೆ ಇಂಧನ ಪೂರೈಸಲಾಗುತ್ತದೆ. ಇದು ಕಡಿಮೆ ವೆಚ್ಚದಲ್ಲಿ ಇಂಧನ ಒದಗಿಸಲಿದ್ದು, ಈ ಗ್ಯಾಸ್ ಪೈಪ್‌ಲೈನ್‌ನಿಂದ ರೈತರಿಗೆ ಅನುಕೂಲವಾಗಲಿದೆ. ಎರಡು ರಾಜ್ಯಗಳ ಮಾಲಿನ್ಯ ನಿಯಂತ್ರಿಸುವಲ್ಲೂ ಇದು ಸಹಕಾರಿಯಾಗಿದ್ದು, ಆ ಮೂಲಕ ನಾವು ನಮ್ಮ ಅಭಿವೃದ್ಧಿ ವೇಗ ಹೆಚ್ಚಿಸಿಕೊಳ್ಳಬೇಕು ಎಂದು ಪೈಪ್ ಲೈನ್ ಲೋಕಾರ್ಪಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ- ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
11:23 am ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ– ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿ, 450 ಕಿ.ಮೀ ಉದ್ದದ ಪೈಪ್ ಲೈನ್ ಅನ್ನು ರಾಷ್ಟ್ರಕ್ಕೆ ಅರ್ಪಿಸುತ್ತಿರುವುದು ಹೆಮ್ಮೆ ತಂದಿದೆ. ಇಂದು ಭಾರತಕ್ಕೆ ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ಕೇರಳದ ಜನರಿಗೆ ಮಹತ್ವದ ದಿನವಾಗಿದೆ ಎಂದು ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ- ಮಂಗಳೂರು ಅನಿಲ ಪೈಪ್ ಲೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ
11:25 am ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ– ಮಂಗಳೂರು ಅನಿಲ ಪೈಪ್ ಲೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಪಾಲರು ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಉಪಸ್ಥಿತರಿದ್ದಾರೆ.
ದೆಹಲಿಯ ಸೆಂಟ್ರಲ್ ವಿಸ್ಟಾ ಮರುನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ
11:24 am ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಆ ಮೂಲಕ ದೆಹಲಿಯ ಸೆಂಟ್ರಲ್ ವಿಸ್ಟಾ ಮರುನಿರ್ಮಾಣ ಯೋಜನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಸುಪ್ರೀಂ ಕೋರ್ಟ್ನ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ಪರಿಸರ ಒಪ್ಪಿಗೆಯನ್ನು ಎತ್ತಿ ಹಿಡಿದಿದೆ.
ಸ್ಮಾಶನದ ಮೆಲ್ಛಾವಣಿ ಕುಸಿದು ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
11:11 am ಉತ್ತರ ಪ್ರದೇಶದ ಗಾಜಿಯಾಬಾದ್ನ ಮುರದ್ನಗರದಲ್ಲಿ ಸ್ಮಾಶನದ ಮೆಲ್ಛಾವಣಿ ಕುಸಿದು ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದು, ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೃಷಿ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಇಂದು ವಿಚಾರಣೆ
10.42 am ಮೂರು ಕೃಷಿ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಎಂಟು ಅರ್ಜಿಗಳನ್ನು ಸರ್ವೋಚ್ಛ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ. ಜೊತೆಗೆ, ಹರಿಯಾಣದ ರೈತರ ಮೇಲಿನ ಪೊಲೀಸರ ಬಲ ಪ್ರಯೋಗವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ನ್ಯಾಯಮೂರ್ತಿಗಳಿಗೆ ಬರೆದ ಪತ್ರವನ್ನು ಪುರಸ್ಕರಿಸಿದ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.
ಇಂದು ಬೆಳಗ್ಗೆ ಮಂಗಳೂರು-ಕೊಚ್ಚಿ ಅನಿಲ ಪೈಪ್ ಲೈನ್ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ
10:39 am ಪ್ರಧಾನಿ ನರೇಂದ್ರ ಮೋದಿ ಇಂದು (ಜ.5) ಬೆಳಗ್ಗೆ 11 ಗಂಟೆಗೆ, ಮಂಗಳೂರು–ಕೊಚ್ಚಿ ಅನಿಲ ಪೈಪ್ ಲೈನ್ನ್ನು ಉದ್ಘಾಟಿಸಲಿದ್ದಾರೆ. ಕೇರಳದ ಕೊಚ್ಚಿ ಹಾಗೂ ಕರ್ನಾಟಕದ ಮಂಗಳೂರು ನಡುವಿನ ಅನಿಲ ಪೈಪ್ ಲೈನ್ನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಅರ್ಪಿಸಲಿದ್ದು, ಈ ಕಾರ್ಯವು, ‘ಒಂದು ದೇಶ ಒಂದು ಗ್ಯಾಸ್ ಗ್ರಿಡ್’ ಎಂಬ ಘೋಷ ವಾಕ್ಯಕ್ಕೆ ಮೈಲುಗಲ್ಲಾಗಲಿದೆ ಎಂದು ಪ್ರಧಾನಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ ಯುಕನನ್ನು ಬಂಧಿಸಿದ ಪೊಲೀಸರು
10:31am 71 ವರ್ಷದ ವೃದ್ಧೆಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಜ್ಯೂಲಿರೋಸ್ (31) ಎಂಬಾತ ಸಂತ್ರಸ್ತೆಯ ಮನೆಯಲ್ಲಿ ಕೆಲ ಸಮಯದಿಂದ ಬಾಡಿಗೆಗೆ ಇದ್ದ. ಅಲ್ಲದೇ ಒಬ್ಬಂಟಿಯಾಗಿದ್ದ ವೃದ್ಧೆಗೆ ಚಿಕ್ಕ ಪುಟ್ಟ ಸಹಾಯ ಮಾಡಿ ನಂಬಿಕೆ ಗಿಟ್ಟಿಸಿಕೊಂಡಿದ್ದು, ಜನವರಿ 2 ರಂದು ಮುಖ್ಯ ದ್ವಾರದ ಗ್ಲಾಸ್ ಒಡೆದು ಒಳಗೆ ನುಗ್ಗಿ, ಕೊಠಡಿಯಲ್ಲಿ ಮಲಗಿದ್ದ ವೃದ್ಧೆಯನ್ನು ಅತ್ಯಾಚಾರ ಮಾಡಿ ಪರಾರಿಯಾಗಿದ್ದಾನೆ ಘಟನೆ ಬಳಿಕ ವೃದ್ಧೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುಖ್ಯಮಂತ್ರಿ ಭೇಟಿಗೆ ಆಗಮಿಸುತ್ತಿರುವ ಬಿಜೆಪಿ ಶಾಸಕರು
10:20 am ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿಗೆ ಬಿಜೆಪಿ ಪಕ್ಷದ ಶಾಸಕರಾದ ಉಮೇಶ್ ಕತ್ತಿ, ಬೆಳ್ಳಿಪ್ರಕಾಶ್, ಸುರೇಶ್, ಅರುಣ್ ಕುಮಾರ್, ಚಂದ್ರಪ್ಪ, ಪರಣ್ಣ ಮುನವಳ್ಳಿ ಭೇಟಿ ನೀಡುತ್ತಿದ್ದು, ವಿಧಾನ ಪರಿಷತ್ ಸದಸ್ಯ ಆರ್. ಶಂಕರ್, ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ್ ಕೋರೆ ಕೂಡಾ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.
ರೂಪಾಂತರಿ ಕೊರೊನಾ ವೈರಸ್ ದಾಳಿಗೆ ಇಂಗ್ಲೆಂಡ್‌ನಲ್ಲಿ ಮಕ್ಕಳೆ ಟಾರ್ಗೆಟ್
10:15 am ರೂಪಾಂತರಿ ಕೊರೊನಾ ವೈರಸ್ ದಾಳಿಗೆ ಇಂಗ್ಲೆಂಡ್ ತತ್ತರಿಸಿ ಹೋಗಿದ್ದು, ಇಂಗ್ಲೆಂಡ್‌ನಲ್ಲಿ ಸತತ 7ನೇ ದಿನವೂ 50,000ಕ್ಕೂ ಹೆಚ್ಚು ಕೊರೊನಾ ಕೇಸ್ ಪತ್ತೆಯಾಗಿದೆ ಹಾಗೂ ಲಂಡನ್‌ನಲ್ಲಿ ಕೊವಿಡ್ ಟೆಸ್ಟ್ ಪಾಸಿಟಿವ್ ರೇಟ್ ಶೇ. 28ರಷ್ಟಿದೆ. ಇದನ್ನು ತಡೆಯಲು ಬ್ರಿಟನ್ನಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಈ ಸೋಂಕಿಗೆ ಮಕ್ಕಳು ಹೆಚ್ಚಾಗಿ ತುತ್ತಾಗುತ್ತಿದ್ದಾರೆ ಎನ್ನುವುದು ವಿಪರ್ಯಾಸ.
ಶಿಕ್ಷಕಿಗೆ ಕೊರೊನಾ ಪಾಸಿಟಿವ್: ಎರಡು ದಿನಗಳ ಕಾಲ ಶಾಲೆ ಬಂದ್
10:03 am ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಕಿಗೆ ನಿನ್ನೆ ಕೊರೊನಾ ಇರುವುದು ಧೃಡವಾದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ವದಗನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಜೆ ನೀಡಲಾಗಿದ್ದು, ಶಾಲೆಯನ್ನು ಸಂಪೂರ್ಣವಾಗಿ ಅಧಿಕಾರಿಗಳು ಬಂದ್ ಮಾಡಿದ್ದಾರೆ.
3ನೇ ಟೆಸ್ಟ್ ಪಂದ್ಯದಿಂದ ಕೆ.ಎಲ್.ರಾಹುಲ್ ಔಟ್
09:54 am ಗಾಯದ ಸಮಸ್ಯೆಯಿಂದ ಬಳಲುತ್ತಿರುವ ರಾಹುಲ್ ಆಸೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದು, ಶೀಘ್ರವೇ ಕೆ.ಎಲ್.ರಾಹುಲ್ ಭಾರತಕ್ಕೆ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಬಾರ್ಡರ್–ಗವಾಸ್ಕರ್ ಟ್ರೋಫಿಯಿಂದಲೂ ಹೊರಗುಳಿದಿದ್ದಾರೆ.
ಸಾಲಭಾದೆ ತಾಳಲಾರದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೈತ
09:43 am ಬೆಳೆ ವೈಫಲ್ಯದಿಂದಾಗಿ ಉಂಟಾದ ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಪುಟ್ಟರಾಜು(41) ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮತ್ತು ಜೆಡಿಎಸ್ ಮುಖಂಡರಾಗಿದ್ದರು. ಪುಟ್ಟರಾಜು 4 ಎಕರೆ ಜಮೀನು ಹೊಂದಿದ್ದು, ತಂಬಾಕು ಕೃಷಿಯಲ್ಲಿ ಜೀವನ ತೊಡಗಿಸಿಕೊಂಡಿದ್ದರು. ಕೃಷಿಗೆಂದು ಪಟ್ಟಣದ ಎಸ್.ಬಿ.ಐ ಬ್ಯಾಂಕ್ನಲ್ಲಿ 8 ಲಕ್ಷ ಬೆಳೆ ಸಾಲ ಮಾಡಿದ್ದು, ಕೆ.ಆರ್ ನಗರದ ಖಾಸಗಿ ಬ್ಯಾಂಕ್ನಲ್ಲಿ 4 ಲಕ್ಷ ಬೆಳೆ ಸಾಲವಿತ್ತು. ಕಳೆದ 2 ವರ್ಷಗಳಿಂದ ತಂಬಾಕು ಬೆಳೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದ ಕಾರಣ ಆದಾಯದಲ್ಲಿ ನಷ್ಟ ಉಂಟಾಗಿದ್ದು, ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮತ್ತೆ ಲಾಕ್‌ಡೌನ್ ಘೋಷಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
09:35 am ರೂಪಾಂತರ ಕೊರೊನಾ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೆ ಕಠಿಣ ಲಾಕ್‌ಡೌನ್ ಘೋಷಿಸಿದ್ದಾರೆ. ಫೆಬ್ರವರಿ ಮಧ್ಯದವರೆಗೆ ಜನರು ಮನೆಯಲ್ಲಿಯೇ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬುಧವಾರದಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರ ಸರ್ಕಾರಿ ಮಾಧ್ಯಮ ದೂರದರ್ಶನದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯಲ್ಲೂ ಶುರುವಾಯಿತು ಹಕ್ಕಿ ಜ್ವರದ ಭಯ
09:30 am ಕ್ರಾಂಗ್ರಾ ಜಿಲ್ಲೆಯ ಪಾಂಗ್ ಅಣೆಕಟ್ಟು ಪ್ರದೇಶದಲ್ಲಿ ಪಕ್ಷಿ ಜ್ವರದಿಂದಾಗಿ 1700ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಸಾವನ್ನಪ್ಪಿದೆ. ಈವರೆಗೆ ಸುಮಾರು 1775 ವಲಸೆ ಹಕ್ಕಿಗಳು ಸಾವನ್ನಪ್ಪಿದ್ದು, ಪಕ್ಷಿ ಜ್ವರದ ಬಗ್ಗೆ ನಮಗೆ ಅನುಮಾನವಿದೆ. ಈ ನಿಟ್ಟಿನಲ್ಲಿ 10 ಕಿ.ಮೀ ಎಚ್ಚರಿಕೆ ವಲಯವನ್ನು ಘೋಷಿಸಲಾಗಿದ್ದು, ಅಲ್ಲಿ ಮೊಟ್ಟೆಗಳ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ ಮತ್ತು ಕೋಳಿ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಪಶುಸಂಗೋಪನಾ ಇಲಾಖೆ ತಿಳಿಸಿದೆ.
ಸೆಂಟ್ರಲ್ ವಿಸ್ಟಾ ಕುರಿತ ತೀರ್ಪು ಇಂದು ಹೊರಬಿಳಲಿದೆ
09:16 am ಸೆಂಟ್ರಲ್ ವಿಸ್ಟಾ ಪ್ರದೇಶದ ಪುನರಾಭಿವೃದ್ಧಿಗಾಗಿ ಕೇಂದ್ರ ಯೋಜನೆಯ ಮಾನ್ಯತೆಯನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಲಿದೆ.
ಆಕಸ್ಮಿಕ ಬೆಂಕಿ: ಅಗ್ನಿಗೆ ಆಹುತಿಯಾದ ಜಮೀನನಲ್ಲಿದ್ದ ಸೂರ್ಯಕಾಂತಿ ಬೆಳೆ
09:04 am ಸೂರ್ಯಕಾಂತಿ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಬೆಳೆನಾಶವಾದ ಘಟನೆ ಪರಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಯಾಗಿರುವ ಶ್ರಿದೇವಿ ಎನ್ನುವವರ ಜಮೀನಿನಲ್ಲಿ ಈ ಘಟನೆ ಸಂಭವಿಸಿದ್ದು, ಒಟ್ಟು 26 ಎಕರೆ ಜಮೀನಿನಲ್ಲಿ ಶ್ರಿದೇವಿ ಸೂರ್ಯಕಾಂತಿ ಬೆಳೆ ಬೆಳೆಯುತ್ತಿದ್ದರು. ಆಕಸ್ಮಿಕವಾಗಿ ಜಮೀನಿಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸೂರ್ಯಪಾನ ನಾಶವಾಗಿದೆ. ಬೆಂಕಿಯ ಜ್ವಾಲೆ ವೇಗವಾಗಿದ್ದ ಕಾರಣ ಪಕ್ಕದಲ್ಲಿದ್ದ ಜಮೀನಿಗೂ ಬೆಂಕಿ ವಿಸ್ತರಣೆಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದ್ದಾರೆ. ಸದ್ಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಬೈಕ್ ಡಿಕ್ಕಿ: ಶಿಕ್ಷಕ ಸ್ಥಳದಲ್ಲೇ ಸಾವು
08:53 am ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಗ್ರಾಮದ ಬಳಿ ನಡೆದಿದೆ. ಉದ್ಬಾಳ ಸರ್ಕಾರಿ ಶಾಲೆ ಶಿಕ್ಷಕ ರಾಮಯ್ಯ ನಾಯಕ್ (35) ಮೃತ ದುರ್ದೈವಿ. ರಾಮಯ್ಯ ನಾಯಕ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನಿಂತಿದ್ದ ವಾಹನಕ್ಕೆ ಡಿಕ್ಕಿಯಾಗಿದ್ದರ ಪರಿಣಾಮ ಸ್ಥಳದಲ್ಲೇ ಶಿಕ್ಷಕ ಮೃತಪಟ್ಟಿದ್ದು, ಸದ್ಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮ ಓದುಗರಿಗೆ ಹೊಸ ವರ್ಷದ ಶುಭ ಹಾರೈಕೆಗಳು. ನಿಮ್ಮ ಓದು ನಮ್ಮ ಹುಮ್ಮಸ್ಸು. ಹೊಸ ಯೋಚನೆಗೆ ತಿದಿಯೊತ್ತುವ ಈ ಸಮಯದಲ್ಲಿ ನಾವು ಟಿವಿ9 ಕನ್ನಡ ಡಿಜಿಟಲ್ Live Blog ಪ್ರಾರಂಭಿಸಿದ್ದೇವೆ. ಸುತ್ತಲಿನ ಗದ್ದಲದಿಂದ ದೂರ ಕುಳಿತು ಕ್ಷಣ ಕ್ಷಣದ ಸುದ್ದಿ ಓದುವ, ನೋಡುವ ಅವಕಾಶ ನಿಮಗೆ. ಹಳ್ಳಿಯಿಂದ ದಿಲ್ಲಿಯೇನು ಇಡೀ ಪ್ರಪಂಚದ ಸುದ್ದಿ ಟಿವಿ9 ಕನ್ನಡ ಡಿಜಿಟಲ್ Live Blog ನಲ್ಲಿ ಪ್ರತಿ ದಿನ ಹರಿದು ಬರಲಿದೆ. ಬನ್ನಿ ಇಂದಿನ ಸುದ್ದಿಯ ಹರಿವನ್ನು ಆನಂದಿಸೋಣ.
Published On - Jan 05,2021 6:39 PM