ಜೀವಿತಾವಧಿಯಲ್ಲಿ ಕೂಡಿಟ್ಟ 65 ಸಾವಿರ ರೂ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿಗೆ ದೃಷ್ಟಿ ವಿಕಲಚೇತನ ಮನವಿ

| Updated By: ಆಯೇಷಾ ಬಾನು

Updated on: Oct 20, 2021 | 12:58 PM

ತಮ್ಮ ಹಳೆಯ (ಬ್ಯಾನ್ ಆಗಿರುವ ನೋಟುಗಳು) 500 ಮತ್ತು 1,000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಡಲು ಸಹಾಯ ಕೇಳಿದ್ದಾರೆ.

ಜೀವಿತಾವಧಿಯಲ್ಲಿ ಕೂಡಿಟ್ಟ 65 ಸಾವಿರ ರೂ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿಗೆ ದೃಷ್ಟಿ ವಿಕಲಚೇತನ ಮನವಿ
ಜೀವಿತಾವಧಿಯಲ್ಲಿ ಕೂಡಿಟ್ಟ 65 ಸಾವಿರ ರೂ ಹಳೆಯ ನೋಟನ್ನು ಬದಲಾಯಿಸಿಕೊಡುವಂತೆ ಜಿಲ್ಲಾಧಿಕಾರಿಗೆ ದೃಷ್ಟಿ ವಿಕಲಚೇತನ ಮನವಿ
Follow us on

ತಮಿಳುನಾಡು: ಬ್ಯಾನ್ ಆಗಿರುವ ಹಳೆಯ ನೋಟುಗಳನ್ನು ಬದಲಾಯಿಸಿಕೊಡುವಂತೆ 65 ವರ್ಷ ವಯಸ್ಸಿನ ದೃಷ್ಟಿ ವಿಕಲಚೇತನರೊಬ್ಬರು ಕೃಷ್ಣಗಿರಿ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಹಳೆಯ (ಬ್ಯಾನ್ ಆಗಿರುವ ನೋಟುಗಳು) 500 ಮತ್ತು 1,000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಡಲು ಸಹಾಯ ಕೇಳಿದ್ದಾರೆ.

ದೃಷ್ಟಿಹೀನ ಭಿಕ್ಷುಕನೊಬ್ಬ ಭಿಕ್ಷಾಟನೆ ಮಾಡಿ ಒಟ್ಟು 65,000 ರೂ. ಜೋಡಿಸಿದ್ದು ಅನಾರೋಗ್ಯದ ಕಾರಣ ಹಣ ವಿಟ್ಟಿರುವ ಜಾಗವನ್ನ ಮರೆತಿದ್ದಾರೆ. ಕಣ್ಣು ಕಾಣದ‌ ಪರಿಣಾಮ ಹಣ ಇಟ್ಟಿದ್ದ ಜಾಗ ಸಿಕ್ಕಿರಲಿಲ್ಲ. ಸದ್ಯ ಹಣ ಇಟ್ಟ ಜಾಗ ನೆನಪಾಗಿ ಹಣ ಸಿಕ್ಕಿದ್ದು ಸ್ಥಳೀಯರ ಸಹಾಯದಿಂದ ಹಳೆಯ ನೋಟುಗಳ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚಲಾವಣೆಯಾಗದ ಹಳೆಯ ನೋಟನ್ನು ಬದಲಿಸಿ ಹೊಸ ನೋಟುಗಳನ್ನ ನೀಡುವಂತೆ ಕೃಷ್ಣಗಿರಿ ಜಿಲ್ಲಾಧಿಕಾರಿಯವರ ಬಳಿ ಬೇಡಿಕೊಂಡಿದ್ದಾರೆ.

ಚಿನ್ನಕಣ್ಣು ಎಂಬ ವ್ಯಕ್ತಿ ಕೃಷ್ಣಗಿರಿ ಜಿಲ್ಲೆಯ ಚಿನ್ನಗೌಂಡನೂರು ಗ್ರಾಮದಲ್ಲಿ ಚಿಕ್ಕ ಗುಡಿಸಿಲಿನಲ್ಲಿ ವಾಸವಾಗಿದ್ದಾರೆ. ಇವರು ತಮ್ಮ ಐದನೇ ವಯಸ್ಸಿನಲ್ಲೇ ದೃಷ್ಟಿಹೀನರಾಗಿದ್ದು, ಭಿಕ್ಷೆ ಬೇಡುವ ಮೂಲಕ ಹಣ ಜೋಡಿಸಿದ್ದಾರಂತೆ. ಅವರು ನಾಲ್ಕು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದರು ಮತ್ತು ಅವರ ಜೀವಿತಾವಧಿಯ ಉಳಿತಾಯ 65,000 ರೂ.ಗಳನ್ನು ಎಲ್ಲಿ ಇಟ್ಟಿದ್ದರು ಎಂಬುದನ್ನು ಮರೆತಿದ್ದರು. ಈ ನಡುವೆ ನೋಟ್ ಬ್ಯಾನ್ ಆಗಿದ್ದು ಇದರ ಬಗ್ಗೆ ಅವರಿಗೆ ಅರಿವಿರಲಿಲ್ಲ. ಆದರೆ ಸ್ಥಳೀಯರಿಂದ ಈ ಬಗ್ಗೆ ಮಾಹಿತಿ ಸಿಕ್ಕಿದ್ದು ತಮ್ಮ ಜೀವಿತಾವಧಿಯಿಂದ ಕಾಪಾಡಿಕೊಂಡು ಬಂದಿದ್ದ ಹಣವನ್ನು ಬಳಸಲಾಗುವುದಿಲ್ಲ ಎಂದು ನೊಂದಿದ್ದರು. ಸದ್ಯ ಈಗ ಹಣವೂ ಸಿಕ್ಕಿದ್ದು ಅದನ್ನು ಬದಲಾಯಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Facebook: ಹೊಸ ಹೆಸರಿನೊಂದಿಗೆ ಮರುಬ್ರ್ಯಾಂಡ್ ಆಗಲಿದೆಯಂತೆ ಫೇಸ್​ಬುಕ್ ಎನ್ನುತ್ತಿವೆ ಮೂಲಗಳು

Published On - 12:54 pm, Wed, 20 October 21