ಕಾಶ್ಮೀರಿ ಪ್ರತ್ಯೇಕತಾವಾದಿ ಪಕ್ಷ ತೆಹ್ರೀಕ್-ಎ-ಹುರಿಯತ್( Tehreek-E-Hurriyat) ಅನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆಕಟ್ಟುವಿಕೆ ಕಾಯ್ದೆ(UAPA) ಅಡಿಯಲ್ಲಿ ಕಾನೂನು ಬಾಹಿರ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಭಾರತದಿಂದ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕಿಸಲು ಹಾಗೂ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸಲು ಈ ನಿಷೇಧಿತ ಸಂಘಟನೆ ಕೆಲಸ ಮಾಡುತ್ತಿತ್ತು.ಈ ಗುಂಪು ಭಾರತದ ವಿರುದ್ಧ ಅಪಪ್ರಚಾರ ಮಾಡುವುದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದೆ, ಹಾಗೆಯೇ ಭಯೋತ್ಪಾದಕ ಚಟುವಟಿಕೆಗಳನ್ನು ಮುಂದುವರೆಸುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯನ್ನು ತಕ್ಷಣವೇ ತಡೆಹಿಡಿಯಲಾಗುವುದು ಎಂದು ಶಾ ಹೇಳಿದ್ದಾರೆ.
ಮತ್ತಷ್ಟು ಓದಿ: ಭಾರತದಲ್ಲಿ ಉಗ್ರ ಸಂಘಟನೆಯು ಸುವ್ಯವಸ್ಥಿತ ಜಾಲಗಳ ಮೂಲಕ ಹಣ ಸಂಗ್ರಹಿಸಿದೆ: ಎಫ್‌ಎಟಿಎಫ್ ವರದಿ
ತೆಹ್ರೀಕ್ ಎ ಹುರಿಯತ್ ಸಂಘಟನೆಯನ್ನು ಕಾನೂನು ಬಾಹಿರ ಎಂದು ಕರೆಯುವ ಮುನ್ನ ದೀರ್ಘಕಾಲ ಪರಿಶೀಲನೆ ನಡೆಸಿ ಬಳಿಕ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಮೃತ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಅವರ ನೇತೃತ್ವದಲ್ಲಿತ್ತು, ಅವರು ಮಸರತ್ ಆಲಂ ಭಟ್ ಅವರ ಉತ್ತರಾಧಿಕಾರಿಯಾದರು. ಭಟ್ ಅವರು ಭಾರತ ವಿರೋಧಿ ಮತ್ತು ಪಾಕಿಸ್ತಾನದ ಪರ ಪ್ರಚಾರಕ್ಕೂ ಹೆಸರುವಾಸಿಯಾಗಿದೆ.
ಇದಕ್ಕೂ ಮೊದಲು, ಗೃಹ ಸಚಿವಾಲಯವು ಡಿಸೆಂಬರ್ 27 ರಂದು ಮಸರತ್ ಆಲಂ ಗ್ರೂಪ್ ಅನ್ನು ನಿಷೇಧಿಸಿತ್ತು. ದೇಶ ವಿರೋಧಿ ಚಟುವಟಿಕೆಗಳಿಂದಾಗಿ ಸಂಘಟನೆಯನ್ನು 5 ವರ್ಷಗಳ ಕಾಲ ನಿಷೇಧಿಸಲಾಗಿದೆ ಎಂದು ಗೃಹ ಸಚಿವ ಶಾ ಹೇಳಿದ್ದರು. ಈ ಸಂಘಟನೆ ಮತ್ತು ಅದರ ಸದಸ್ಯರು ದೇಶವಿರೋಧಿ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ