Diamond Hunt: ದುರಾಸೆ ಪ್ರಾಣ ತೆಗೆಯಿತಾ? ವಜ್ರ ಆಯ್ದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಪಕ್ಕದ ರಾಜ್ಯದ ವ್ಯಕ್ತಿ, ಅಸಲಿಗೆ ಅಲ್ಲಿ ಏನಾಯಿತು?

|

Updated on: Oct 12, 2023 | 5:54 PM

Vijayawada: ಚಂದರ್ಲಪಾಡು ಮಂಡಲದ ಗುಡಿಮೆಟ್ಲ ಅರಣ್ಯ ಪ್ರದೇಶದಲ್ಲಿ ಕೆಲ ದಿನಗಳಿಂದ ವಜ್ರ ಬೇಟೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎನ್ ಟಿಆರ್ ಜಿಲ್ಲೆಯ ಚಂದರ್ಲಪಾಡು ಮಂಡಲದಲ್ಲಿ ವಜ್ರ ಬೇಟೆಗೆಂದು ನೆರೆ ತೆಲಂಗಾಣ ರಾಜ್ಯದಿಂದ ಬಂದಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

Diamond Hunt: ದುರಾಸೆ ಪ್ರಾಣ ತೆಗೆಯಿತಾ? ವಜ್ರ ಆಯ್ದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಪಕ್ಕದ ರಾಜ್ಯದ ವ್ಯಕ್ತಿ, ಅಸಲಿಗೆ ಅಲ್ಲಿ ಏನಾಯಿತು?
ದುರಾಸೆ ಪ್ರಾಣ ತೆಗೆಯಿತಾ? ವಜ್ರ ಆಯ್ದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಪಕ್ಕದ ರಾಜ್ಯದ ವ್ಯಕ್ತಿ
Follow us on

ವಿಜಯವಾಡ, ಅಕ್ಟೋಬರ್ 12: ದುರಾಸೆ ಕೆಲವೊಮ್ಮೆ ಪ್ರಾಣವನ್ನೇ ತೆಗೆದುಬಿಡುತ್ತದೆ. ಇತ್ತೀಚೆಗೆ ವಜ್ರ ಬೇಟೆಗೆಂದು ಬಂದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೃಷ್ಣಾ ಜಿಲ್ಲೆಯ ಗುಡಿಮೆಟ್ಲ ಬೆಟ್ಟದಲ್ಲಿ ವಜ್ರ ಬೇಟೆಗೆಂದು ಪಕ್ಕದ ರಾಜ್ಯದ ನಿವಾಸಿಯೊಬ್ಬರು ಬಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಆತನನ್ನು ಕೊಲೆ ಮಾಡಲಾಗಿದೆಯೇ? ಅದು ಅಸಹಜ ಸಾವು ಎಂದು ತಿಳಿದುಬಂದಿದೆ. ಆ ವಿವರಗಳೇನು? ಅವರು ಯಾರು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಎನ್ ಟಿಆರ್ ಜಿಲ್ಲೆಯ ಚಂದರ್ಲಪಾಡು ಮಂಡಲದಲ್ಲಿ ವಜ್ರ ಬೇಟೆಗೆಂದು ನೆರೆ ರಾಜ್ಯದಿಂದ ಬಂದಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮಾಹಿತಿ ಪಡೆದ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಮೂಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಚಂದರ್ಲಪಾಡು ಪಿಎಸ್‌ಪಿ ರಾಮಕೃಷ್ಣ ಪ್ರಕಾರ, ತೆಲಂಗಾಣ ರಾಜ್ಯ ನಾಗಾರ್ಜುನ ಸಾಗರದ ಇಸ್ರಾಂ ರಾಮಬಾಬು (40) ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಚಂದರ್ಲಪಾಡು ಮಂಡಲದ ಗುಡಿಮೆಟ್ಲ ಅರಣ್ಯ ಪ್ರದೇಶದಲ್ಲಿ ಕೆಲ ದಿನಗಳಿಂದ ವಜ್ರ ಬೇಟೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿರುವಾಗ ರಾಂಬಾಬು ಕೂಡ ವಜ್ರ ಹುಡುಕಲು ಮೂರು ದಿನಗಳ ಹಿಂದೆ ಗುಡಿಮೆಟ್ಲಕ್ಕೆ ಬಂದಿದ್ದರು.

Also Read: ತೆಲಂಗಾಣ ಅಸೆಂಬ್ಲಿ ಚುನಾವಣೆ: ನಾಮಪತ್ರ ಸಲ್ಲಿಕೆಗೆ 4 ಶುಭ ದಿನ! ಅಭ್ಯರ್ಥಿಗಳು ಕೈಯಲ್ಲಿ ತಮ್ಮ ಜಾತಕ ಹಿಡಿದು ಜ್ಯೋತಿಷಿಗಳ ಮನೆ ಎಡತಾಕುತ್ತಿದ್ದಾರೆ!

ಬುಧವಾರ ವಜ್ರ ಬೇಟೆಗೆಂದು ಬಂದಿದ್ದ ಕೆಲವರಿಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ರಾಂಬಾಬು ಮೃತಪಟ್ಟಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಚಂದರ್ಲಪಾಡು ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಜ್ರ ಬೇಟೆಗಾರನನ್ನು ಕೊಲೆ ಮಾಡಲಾಗಿದೆಯೇ? ಬೇರೆ ಕಾರಣದಿಂದ ಸಾವು ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ