ಸರ್ಕಾರಿ ಸ್ವಾಮ್ಯದ ಮತ್ತೊಂದು ಸಂಸ್ಥೆ ಮಾರಾಟಕ್ಕೆ!

|

Updated on: Feb 01, 2020 | 1:56 PM

ದೆಹಲಿ: ಸರ್ಕಾರಿ ಸ್ವಾಮ್ಯದ ಮತ್ತೊಂದು ಸಂಸ್ಥೆ ಮಾರಾಟಕ್ಕಿಟ್ಟಿದೆ. ವಿಮಾ ಭದ್ರತೆ ಕಲ್ಪಿಸುವ ಭಾರತೀಯ ಜೀವ ವಿಮಾ ಸಂಸ್ಥೆಯಲ್ಲಿ ತನ್ನ ಪಾಲನ್ನು ಸ್ವಲ್ಪ ಮಟ್ಟಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಲೋಕಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು. ಷೇರು ಮಾರುಕಟ್ಟೆಯ ಪಾಲುದಾರಿಕೆ ಮಾರಾಟ: ಎಲ್‌ಐಸಿ ಹೂಡಿಕೆಯಲ್ಲಿನ ಸರ್ಕಾರದ ಪಾಲುದಾರಿಕೆಯಲ್ಲಿ ಸ್ವಲ್ಪ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಐಪಿಒ ಮೂಲಕ ಎಲ್‌ಐಸಿಯಲ್ಲಿನ ಪಾಲು ಮಾರಾಟ ಮಾಡಲಾಗುವುದು. ಅಲ್ಲದೆ, ಐಡಿಬಿಐ ಬ್ಯಾಂಕ್‌ನಲ್ಲಿನ ಸರ್ಕಾರದ […]

ಸರ್ಕಾರಿ ಸ್ವಾಮ್ಯದ ಮತ್ತೊಂದು ಸಂಸ್ಥೆ ಮಾರಾಟಕ್ಕೆ!
Follow us on

ದೆಹಲಿ: ಸರ್ಕಾರಿ ಸ್ವಾಮ್ಯದ ಮತ್ತೊಂದು ಸಂಸ್ಥೆ ಮಾರಾಟಕ್ಕಿಟ್ಟಿದೆ. ವಿಮಾ ಭದ್ರತೆ ಕಲ್ಪಿಸುವ ಭಾರತೀಯ ಜೀವ ವಿಮಾ ಸಂಸ್ಥೆಯಲ್ಲಿ ತನ್ನ ಪಾಲನ್ನು ಸ್ವಲ್ಪ ಮಟ್ಟಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಲೋಕಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಷೇರು ಮಾರುಕಟ್ಟೆಯ ಪಾಲುದಾರಿಕೆ ಮಾರಾಟ:
ಎಲ್‌ಐಸಿ ಹೂಡಿಕೆಯಲ್ಲಿನ ಸರ್ಕಾರದ ಪಾಲುದಾರಿಕೆಯಲ್ಲಿ ಸ್ವಲ್ಪ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಐಪಿಒ ಮೂಲಕ ಎಲ್‌ಐಸಿಯಲ್ಲಿನ ಪಾಲು ಮಾರಾಟ ಮಾಡಲಾಗುವುದು. ಅಲ್ಲದೆ, ಐಡಿಬಿಐ ಬ್ಯಾಂಕ್‌ನಲ್ಲಿನ ಸರ್ಕಾರದ ಪಾಲುದಾರಿಕೆ, ಷೇರು ಮಾರುಕಟ್ಟೆಯಲ್ಲಿ ಸರ್ಕಾರದ ಪಾಲುದಾರಿಕೆ ಸಹ ಮಾರಾಟ ಮಾಡಲಾಗುತ್ತೆ. ಅಲ್ಲದೆ, ದೇಶದಲ್ಲಿ 5 ಲಕ್ಷ ಸಣ್ಣ, ಮಧ್ಯಮ ಕೈಗಾರಿಕೆಗಳು ಪುನಶ್ಚೇತನಗೊಂಡಿದೆ. ಹೂಡಿಕೆದಾರರ ವಿಶ್ವಾಸ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Published On - 1:04 pm, Sat, 1 February 20