ಇನ್ಮುಂದೆ ಆದಾಯ ತೆರಿಗೆ ಮೇಲಿನ ರಿಯಾಯ್ತಿಯನ್ನು ತೆಗೆದು ಹಾಕ್ತಾರಂತೆ: ನಿರ್ಮಲಾ ಬಾಂಬ್
ದೆಹಲಿ: ಕೇಂದ್ರ ಬಜೆಟ್ ಅಂದ್ರೇನೇ ಹಾಗೆ.. ದೇಶದ ಆರ್ಥಿಕ ಲೆಕ್ಕಾಚಾರದ ಜೊತೆಜೊತೆಗೆ ಜನ ತಮ್ಮ ಹಣಕಾಸಿನಲ್ಲೂ ಪೈಸಾಗೆ ಪೈಸಾ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಅದರಲ್ಲೂ ವ್ಯಾಪಕವಾಗಿ ಅನ್ವಯವಾಗುವ ಆದಾಯದ ಮೇಲಿನ ತೆರಿಗೆ ಬಗ್ಗೆ ಜನ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಪ್ರತಿ ಬಜೆಟ್ ಮಂಡನೆಯಲ್ಲೂ ಆದಾಯ ತೆರಿಗೆಯ ಲೆಕ್ಕಾಚಾರ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹಾತೊರೆಯುತ್ತಾರೆ. ಅದರಲ್ಲೂ ಆದಾಯ ತೆರಿಗೆ ರಿಯಾಯ್ತಿ ಎಷ್ಟಿದೆ? ಎಂಬುದನ್ನು ತಿಳಿದುಕೊಳ್ಳಲು ಕಾದುಕುಳಿತಿರುತ್ತಾರೆ. ಇದನ್ನು ಚೆನ್ನಾಗಿ ‘ಅರ್ಥ’ ಮಾಡಿಕೊಂಡಿರುವ ಹಾಲಿ ವಿತ್ತ ಸಚಿವೆ ಮುಂಬರುವ ಹಣಕಾಸು ವರ್ಷಗಳಲ್ಲಿ ಆದಾಯ […]
ದೆಹಲಿ: ಕೇಂದ್ರ ಬಜೆಟ್ ಅಂದ್ರೇನೇ ಹಾಗೆ.. ದೇಶದ ಆರ್ಥಿಕ ಲೆಕ್ಕಾಚಾರದ ಜೊತೆಜೊತೆಗೆ ಜನ ತಮ್ಮ ಹಣಕಾಸಿನಲ್ಲೂ ಪೈಸಾಗೆ ಪೈಸಾ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಅದರಲ್ಲೂ ವ್ಯಾಪಕವಾಗಿ ಅನ್ವಯವಾಗುವ ಆದಾಯದ ಮೇಲಿನ ತೆರಿಗೆ ಬಗ್ಗೆ ಜನ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ.
ಪ್ರತಿ ಬಜೆಟ್ ಮಂಡನೆಯಲ್ಲೂ ಆದಾಯ ತೆರಿಗೆಯ ಲೆಕ್ಕಾಚಾರ ಹೇಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಹಾತೊರೆಯುತ್ತಾರೆ. ಅದರಲ್ಲೂ ಆದಾಯ ತೆರಿಗೆ ರಿಯಾಯ್ತಿ ಎಷ್ಟಿದೆ? ಎಂಬುದನ್ನು ತಿಳಿದುಕೊಳ್ಳಲು ಕಾದುಕುಳಿತಿರುತ್ತಾರೆ. ಇದನ್ನು ಚೆನ್ನಾಗಿ ‘ಅರ್ಥ’ ಮಾಡಿಕೊಂಡಿರುವ ಹಾಲಿ ವಿತ್ತ ಸಚಿವೆ ಮುಂಬರುವ ಹಣಕಾಸು ವರ್ಷಗಳಲ್ಲಿ ಆದಾಯ ತೆರಿಗೆ ಮೇಲಿನ ವಿನಾಯಿತಿಯನ್ನೇ ತೆಗೆದುಹಾಕಲಾಗುವುದು ಎಂದಿದ್ದಾರೆ.
ಸಂಪೂರ್ಣವಾಗಿ ತೆರಿಗೆ ರಿಯಾಯಿತಿ ತೆಗೆದುಹಾಕುವ ಸುಳಿವು: ಪ್ರಧಾನಿ ಮೋದಿ ಸರ್ಕಾರ ಈಗಾಗಲೇ ಒಂದೊಂದೇ ಸಬ್ಸಿಡಿಗಳನ್ನು ಹಿಂತೆಗೆದುಕೊಳ್ಳುತ್ತಾ ಬಂದಿದೆ. ಮುಂದುವರಿದ ಭಾಗವಾಗಿ, ಇನ್ಮೇಲೆ ಆದಾಯದ ಮೇಲಿನ ತೆರಿಗೆ ರಿಯಾಯಿತಿಯನ್ನೂ ಸಂಪೂರ್ಣವಾಗಿ ತೆಗೆದುಹಾಕುವ ಸುಳಿವು ನೀಡಿದ್ದಾರೆ. ಅಂದ್ರೆ ಆದಾಯ ಎಷ್ಟೇ ಇರಲಿ ಅದರಲ್ಲಿ ಒಂದಿಷ್ಟು ಮೊತ್ತವನ್ನು ಸರ್ಕಾರಕ್ಕೆ ಕೊಡಲೇಬೇಕು ಎಂಬ ಲೆಕ್ಕಾಚಾರ ಸರ್ಕಾರದ್ದಾಗಿದೆ. ಇದನ್ನು ಪ್ರಯೋಗಾರ್ಥವಾಗಿ, ಭಾಗಶಃ ಹಾಲಿ ಬಜೆಟ್ನಲ್ಲಿಯೇ ಜಾರಿಗೆ ತಂದಿದ್ದಾರೆ.
ತೆರಿಗೆ ಪ್ರಮಾಣವನ್ನು ಕಡಿಮೆಗೊಳಿಸಿಯಾದರೂ ಎಲ್ಲರನ್ನೂ ಆದಾಯ ತೆರಿಗೆ ಪಾವತಿ ವ್ಯಾಪ್ತಿಗೆ ತರುವುದು ಇದರ ಉದ್ದೇಶವಾಗಿದೆ. ಮಹಿಳೆಯರು, ಹಿರಿಯ ನಾಗರಿಕರು ಎಂಬ ಭೇದ ಭಾವ ಎಣಿಸಿದೆ, ಎಲ್ಲರೂ ತೆರಿಗೆ ಕಟ್ಟಲಿ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
ಇದರಿಂದ ತೆರಿಗೆದಾರರಿಗೆ ಸಿಗೋ ಭಾಗ್ಯ ಏನು? ಎಂದು ಕೇಳಿ ನೋಡಿದರೆ ‘ಇದರಿಂದ ಖಂಡಿತಾ ತೆರಿಗೆ ಪಾವತಿದಾರರಿಗೆ ಪ್ರಯೋಜನವಾಗಲಿದೆ. ತೆರಿಗೆ ಕಟ್ಟುವ ಕಟ್ಟುಪಾಡು ಕಟ್ಟುನಿಟ್ಟಾಗಿ ಜಾರಿಗೆ ಬರುತ್ತದಾದರೂ ಬರ್ತಾ ಬರ್ತಾ ತೆರಿಗೆ ದರ ಕಡಿಮೆಯಾಗಲಿದೆ. ಅದರ ‘ಅರ್ಥ’ ತೆರಿಗೆದಾರರಿಗೆ ಹಣ ಉಳಿತಾಯ ಆಗುತ್ತದೆ ಅಂತಲ್ವಾ? ಎಂದು ಕಿರುನಗೆ ಬೀರುತ್ತಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
Published On - 5:19 pm, Sat, 1 February 20