ದೇಶದಲ್ಲಿ ಕಡಿಮೆಯಾಗದ ಕೊರೊನಾ ಅಟ್ಟಹಾಸ.. ವಿವಿಧ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಎಷ್ಟಿದೆ..?

| Updated By: ಸಾಧು ಶ್ರೀನಾಥ್​

Updated on: Nov 28, 2020 | 12:27 PM

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1526ರಷ್ಟು ಹೊಸ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿವರೆಗೆ ಒಟ್ಟು 8.81.086ರಷ್ಟು ಪ್ರಕರಣಗಳು ಸಕ್ರೀಯವಾಗಿದ್ದು, 8.43.950ರಷ್ಟು ಜನರು ಗುಣಮುಖರಾಗಿದ್ದಾರೆ. ಸುಮಾರು 11.738 ಜನರು ರಕ್ಕಸ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ದೇಶದಲ್ಲಿ ಕಡಿಮೆಯಾಗದ ಕೊರೊನಾ ಅಟ್ಟಹಾಸ.. ವಿವಿಧ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಎಷ್ಟಿದೆ..?
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಮಹಾಮಾರಿ ಸೋಂಕಿನಿಂದ ಇಡೀ ದೇಶವೇ ಅಕ್ಷರಶಃ ನಲುಗಿ ಹೋಗಿದ್ದು, ಇದರ ಅರ್ಭಟ ಇನ್ನೂ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1526ರಷ್ಟು ಹೊಸ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿವರೆಗೆ ಒಟ್ಟು 8,81,086ರಷ್ಟು ಪ್ರಕರಣಗಳು ಸಕ್ರಿಯವಾಗಿದ್ದು, 8,43,950ರಷ್ಟು ಜನರು ಗುಣಮುಖರಾಗಿದ್ದಾರೆ. ಸುಮಾರು 11,738 ಜನರು ರಕ್ಕಸ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ದೇಶದಲ್ಲಿ ಕೊರೊನಾ ಅಟ್ಟಹಾಸ:

ಕಣ್ಣಿಗೆ ಕಾಣದ ಜೀವಿಯೊಂದು ಜೀವದ ಭಯ ಹುಟ್ಟಿಸುತ್ತದೆ ಎಂದು ಕಳೆದ ವರ್ಷ ಯಾರೂ ಊಹಿಸಿರಲಿಲ್ಲ. ಸುಮಾರು 8- 9 ತಿಂಗಳಿನಿಂದ ಈ ಸೋಂಕು ಅಟ್ಟಹಾಸದಿಂದ ಮೆರೆಯುತ್ತಿದ್ದು, ಇದನ್ನು ಸಂಪೂರ್ಣವಾಗಿ ಹಿಡಿತಕ್ಕೆ ತರಲು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ಊಹೆಗೂ ಮೀರಿದ ಮಟ್ಟಕ್ಕೆ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೋವಿಡ್-19 ಪ್ರಕರಣಗಳು 93.51 ಲಕ್ಷಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 41,322 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಜೊತೆಗೆ 485 ಸೋಂಕಿತರು ಮೃತಪಟ್ಟಿದ್ದು, ಒಟ್ಟು 1,36,200 ಜನರು ಕೊರೊನಾಗೆ ಬಲಿಯಾಗಿದ್ದಾರೆ. 87,59,969 ಜನರು ಈ ವರೆಗೆ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿಯನ್ನು ಸ್ಪಷ್ಟಪಡಿಸಿದೆ.

ವಿವಿಧ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ:

18,08,550ರಷ್ಟು ಮಹಾರಾಷ್ಟ್ರದಲ್ಲಿ, ಆಂಧ್ರ ಪ್ರದೇಶದಲ್ಲಿ 8,66,438ರಷ್ಟು, ತಮಿಳುನಾಡಿನಲ್ಲಿ 7,77,616ರಷ್ಟು, 5,51,262ರಷ್ಟು ದಹೆಲಿಯಲ್ಲಿ ಕೋವಿಡ್ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 98, ಮಹಾರಾಷ್ಟ್ರದಲ್ಲಿ 46, ಪಶ್ಚಿಮ ಬಂಗಾಳದಲ್ಲಿ 46, ಹರಿಯಾಣದಲ್ಲಿ 29, ಪಂಜಾಬ್ನಲ್ಲಿ 27, ಉತ್ತರ ಪ್ರದೇಶ ಮತ್ತು ಕೇರಳದಲ್ಲಿ ತಲಾ 23 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾ ಪ್ರಕರಣಗಳ ಅಂಕಿ ಅಂಶಗಳನ್ನು ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ, ಶೇ. 70 ಕ್ಕಿಂತ ಹೆಚ್ಚು ಸೋಂಕಿತರು ತಮಗಿರುವ ವಿವಿಧ ಕಾಯಿಲೆಗಳಿಂದ (ಕೊಮೊರ್ಬಿಡಿಟಿ Comorbidities) ಸಾವನ್ನಪ್ಪುತ್ತಿದ್ದಾರೆಂದು ತಿಳಿಸಿದೆ.